ನ್ಯಾಷನಲ್ ಕ್ರಶ್ ಖ್ಯಾತಿಯ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ತಮಾಷೆ ಸಂಗತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಶ್ಮಿಕಾ ಮಂದಣ್ಣ 'ನಾನು ಜಾಹ್ನವಿ ಕಪೂರ್ ಮತ್ತು...
ನ್ಯಾಷನಲ್ ಕ್ರಶ್ ಖ್ಯಾತಿಯ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ತಮಾಷೆ ಸಂಗತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಶ್ಮಿಕಾ ಮಂದಣ್ಣ 'ನಾನು ಜಾಹ್ನವಿ ಕಪೂರ್ ಮತ್ತು ವಿಜಯ್‌ಗೆ ಚೀಸ್ ಆಗಲು ಇಷ್ಟಪಡುತ್ತೇನೆ' ಎಂದಿದ್ದಾರೆ. ನಿಮಗೆ ಒಮ್ಮೆ ನಾನು ಹೆಸರು ಹೇಳುವ ಕೆಲವು ಸೆಲೆಬ್ರೆಟಿಗಳಿಂದ ಏನನ್ನಾದರೂ ಕದಿಯಲು ಚಾನ್ಸ್ ಕೊಟ್ಟರೆ, ಅವರಂದ ಏನು ಕದಿಯಲು ಇಷ್ಟಪಡುತ್ತೀರಿ ಎಂದು ಹೇಳಿ ಎಂದಿದ್ದಾರೆ.
ಸಂದರ್ಶಕರ ಸವಾಲಿಗೆ ಒಪ್ಪಿದ ನಟಿ ರಶ್ಮಿಕಾ 'ಅಲ್ಲು ಅರ್ಜುನ್' ಎಂದಾಗ, 'ಡಾನ್ಸ್ ಸ್ಕಿಲ್ಸ್' ಎಂದಿದ್ದಾರೆ. ಅಂದರೆ, ನಟಿ ರಶ್ಮಿಕಾಗೆ ಅಲ್ಲು ಅರ್ಜುನ್ ಡಾನ್ಸ್ ಮಾಡುವ ರೀತಿ ಇಷ್ಟವಾಗಿದೆ. ಹಾಗೇ, 'ನಟ ಪ್ರಭಾಸ್' ಎಂದಾಗ 'ಬಗೆಬಗೆಯ ಫುಡ್' ಎಂದಿದ್ದಾರೆ. ಆಗ ನಿರೂಪಕರು 'ಅಂದರೆ ನೀವು ಅವರ ಚೆಫ್ ಆಗಲು ಇಷ್ಟಪಡುತ್ತೀರಾ' ಎನ್ನಲು ಅದು, ಹೌದು ಎನ್ನಬಹುದು. ನನ್ನ ಉದ್ಧೇಶ ಪ್ರಭಾಸ್ ಕೊಡಿಸುವ ಬಹಳಷ್ಟು ತಿಂಡಿ ಕದಿಯಲು ಇಷ್ಟಪಡುತ್ತೇನೆ' ಎಂದಿದ್ದಾರೆ.
ಬಹಳಷ್ಟು ಫ್ಲಾಪ್ ಸಿನಿಮಾ ಕೊಟ್ಟು, ಬಾಡಿಗೆ ಕೊಡಲು ಪರದಾಡಿದ ಈ ನಟ ಮುಂದೆ ನ್ಯಾಷನಲ್ ಅವಾರ್ಡ್ ವಿನ್ನರ್!
ಅಂದರೆ, ಭಾರತದಲ್ಲಿ ಬಹಳಷ್ಟು ಸಿನಿತಾರೆಯರು ಪ್ರಭಾಸ್ ಬಗ್ಗೆ ಹೇಳುವ ಮಾತೇ ಅದಾಗಿದೆ. ಪ್ರಭಾಸ್ ಜತೆ ಯಾರೇ ಇದ್ದರೂ ಅವರು ಬಗೆಬಗೆಯ ತಿಂಡಿ-ತಿನಿಸುಗಳನ್ನು ಕೊಟ್ಟು ತಮ್ಮ ಜತೆ ಇರುವವರನ್ನು ಸತ್ಕರಿಸುತ್ತಾರೆ. ಅಷ್ಟೇ ಅಲ್ಲ, ನಿಮಗೆ ಅದು ಬೇಕೇ ಇದು ಬೇಕೆ ಎಂದು ಕೇಳಿ ತಮ್ಮ ಜತೆ ಇರುವವರಿಗೆ ಇಷ್ಟವಾಗಿದ್ದನ್ನು ಕೊಡಿಸುತ್ತಾರಂತೆ. ಇದನ್ನೇ ನಟಿ ರಶ್ಮಿಕಾ ಕೂಡ ಹೇಳಿದ್ದಾರೆ ಎನ್ನಬಹುದು.
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಶೂಟಿಂಗ್ ಶುರುವಾಗೋ ಟೈಮಲ್ಲೇ ಇದೇನಿದು 'ರಾಮಾಯಣ'?
ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಸಿನಿಮಾ ಶೂಟಿಂಗ್‌ನಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ನಟ ರಣಬೀರ್ ಕಪೂರ್ ಜೋಡಿಯಾಗಿ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ, ಆ ಚಿತ್ರ ಸೂಪರ್ ಹಿಟ್ ಆಗುವ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ತೆಲುಗು ಹಾಗು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ತಮಿಳು ಹಾಗೂ ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಮತ್ತೆ ನಟಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ, ಈಗ ಕನ್ನಡ ಚಿತ್ರಗಳು ಕೂಡ ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಮಿಂಚುತ್ತಿವೆ.
ಒಲ್ಲದ ಮದುವೆ ತಪ್ಪಿಸಿಕೊಳ್ಳಲು ಕೇರಳದಿಂದ ಓಡಿಹೋದ ನಟಿ ಫೇಮಸ್ ಐಟಂ ಡಾನ್ಸರ್ ಆದ್ರು!