ಮದುವೆಯಾಗಲು ಸೋನಾಕ್ಷಿ ಸಿನ್ಹಾ ರೆಡಿ! ಸೂಕ್ತ ವರವಿದ್ದರೆ ತಿಳಿಸಿ!

By Web DeskFirst Published Apr 1, 2019, 12:17 PM IST
Highlights

ಮದುವೆಯಾಗುವ ಆಸೆ ಬಿಚ್ಚಿಟ್ಟಿದ್ದಾರೆ ನಟಿ ಸೋನಾಕ್ಷಿ ಸಿನ್ಹಾ | ಸದ್ಯ ’ಕಲಂಕ್’ ಚಿತ್ರದಲ್ಲಿ ಬ್ಯುಸಿ | ಯಾರನ್ನು ಮದುವೆಯಾಗ್ತಾ ಇದ್ದಾರೆ, ಗೊತ್ತಾ? 

ಬೆಂಗಳೂರು (ಏ. 01): ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.  ಬಹುನಿರೀಕ್ಷಿತ ’ಕಲಂಕ್’ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿರುವ ಸೋನಾಕ್ಷಿ ಇತ್ತೀಚಿಗೆ ಖಾಸಗಿ ವಾಹಿನಿಯೊಂದರ  ಸಂದರ್ಶನದಲ್ಲಿ ಭಾಗವಹಿಸಿದ್ದರು.

ಮದುವೆಗೂ ಮುನ್ನವೇ ಗರ್ಭಿಣಿ ಎಂದು ಘೋಷಿಸಿಕೊಂಡ ‘ವಿಲನ್’ ನಾಯಕಿ

ವರುಣ್ ಧವನ್ ಹಾಗೂ ಅಲಿಯಾ ಭಟ್ ಕೂಡಾ ಶೋ ನಲ್ಲಿ ಬಾಗವಹಿಸಿದ್ದರು. ಸಂದರ್ಶನದಲ್ಲಿ 'ಯಾರು ಮೊದಲು ಮದುವೆಯಾಗಲಿದ್ದೀರಿ'? ಎಂದು ಕೇಳಿದಾಗ ಸೋನಾಕ್ಷಿ, ಅಲಿಯಾ-ವರುಣ್ ಗಿಂತ ಮೊದಲು ನಾನು ಮದುವೆಯಾಗುತ್ತೇನೆ ಎಂದಿದ್ದಾರೆ. 

ಡಿವೋರ್ಸ್ ವದಂತಿಗೆ ತಕ್ಕ ಉತ್ತರ ಕೊಟ್ಟ ಪಿಗ್ಗಿ!

ನಾನು ಮದುವೆಯಾಗಲು ಸಿದ್ಧಳಿದ್ದೇನೆ. ಸೂಕ್ತ ವರಾನ್ವೇಷಣೆ ನಡೆಯುತ್ತಿದೆ ಎಂದಿದ್ದಾರೆ.  ನಟ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇವರಿಬ್ಬರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ.  ಕಲಂಕ್ ಚಿತ್ರ ಏಪ್ರಿಲ್ 17 ರಂದು ತೆರೆ ಕಾಣಲಿದೆ. 

click me!