ಅಪರೂಪದ ಕಾಯಿಲೆ ಗೆದ್ದುಬಂದ ಇರ್ಫಾನ್; ಮತ್ತೆ ಬರಲಿದ್ದಾರೆ ತೆರೆ ಮೇಲೆ

By Web Desk  |  First Published Mar 31, 2019, 10:49 AM IST

ಅಪರೂಪದ ಕಾಯಿಲೆ ಗೆದ್ದು ಬಂದ ಇರ್ಫಾನ್ ಖಾನ್ | ಮತ್ತೆ ಬಣ್ಣ ಹಚ್ಚಲಿದ್ದಾರೆ ಇರ್ಫಾನ್ ಖಾನ್ | ಹಿಂದಿ ಮೀಡಿಯಂ ಸೀಕ್ವೆಲ್ ಮೂಲಕ ತೆರೆಗೆ 


ಬೆಂಗಳೂರು (ಮಾ. 31): ಬಾಲಿವುಡ್ ನ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಮತ್ತೆ ಬಣ್ಣ ಹಚ್ಚಲಿದ್ದಾರೆ. 

ಪ್ರಿಯಾಂಕ- ನಿಕ್ ಡಿವೋರ್ಸ್; ಏನಿದು ಸುದ್ದಿ?

Tap to resize

Latest Videos

undefined

ಅಪರೂಪದ ಕಾಯಿಲೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಲಂಡನ್ ನಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಭಾರತಕ್ಕೆ ಹಿಂತಿರುಗಿದ್ದಾರೆ. 

2018 ರಲ್ಲಿ ತೆರೆ ಕಂಡಿದ್ದ ’ಕರ್ವಾನ್’ ಚಿತ್ರದ ನಂತರ ಯಾವುದೇ ಸಿನಿಮಾವನ್ನು ಮಾಡಿರಲಿಲ್ಲ. ಇದೀಗ ಹಿಂದಿ ಮೀಡಿಯಂ ಸೀಕ್ವೆಲ್ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. 2017 ರಲ್ಲಿ ಬಂದಿದ್ದ ಹಿಂದಿ ಮೀಡಿಯಂ ಸೂಪರ್ ಹಿಟ್  ಸಿನಿಮವಾಗಿತ್ತು. ಈಗ ಪಾರ್ಟ್- 2 ಮೂಲಕ ಮತ್ತೆ ಬರುತ್ತಿದ್ದಾರೆ. 

ಹೆಮ್ಮೆಯ ಕನ್ನಡಿಗ ಪ್ರಶಸ್ತಿಯನ್ನು ಯಶ್ ಅರ್ಪಿಸಿದ್ದು ಯಾರಿಗೆ?

ಇರ್ಫಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಸಾಥ್ ನೀಡಲಿದ್ದಾರೆ. ಇಬ್ಬರ ಕಾಂಬಿನೇಶನ್ ತೆರೆ ಮೇಲೆ ಒಳ್ಳೆಯ ರೀತಿಯಲ್ಲಿ ಮೂಡಿ ಬರಬಹುದು ಎನ್ನಲಾಗಿದೆ. ಹಿಂದಿ ಮೀಡಿಯಂ ಎಜುಕೇಶನ್ ಬಗ್ಗೆ ಹೇಳುವ ಸಿನಿಮಾ. ಮಗಳಿಗೆ ಒಳ್ಳೆಯ ರೀತಿಯ ಶಿಕ್ಷಣ ಕೊಡಿಸಲು ಹೋರಾಡುವ ಪೋಷಕರ ಕಥೆಯನ್ನು ಈ ಸಿನಿಮಾ ಹೇಳುತ್ತದೆ. 

 

click me!