ಡಿವೋರ್ಸ್ ಬೇಡವೇ ಬೇಡ; ನಿಶ್ಚಿತಾರ್ಥ ಮುರಿದು 7 ವರ್ಷ ಆದ್ರೂ ತ್ರಿಷಾಗೆ ಹುಡ್ಗ ಸಿಕ್ಕಿಲ್ಲ ಯಾಕೆ?

Published : Apr 17, 2023, 04:02 PM IST
ಡಿವೋರ್ಸ್ ಬೇಡವೇ ಬೇಡ; ನಿಶ್ಚಿತಾರ್ಥ ಮುರಿದು 7 ವರ್ಷ ಆದ್ರೂ ತ್ರಿಷಾಗೆ ಹುಡ್ಗ ಸಿಕ್ಕಿಲ್ಲ ಯಾಕೆ?

ಸಾರಾಂಶ

ತ್ರಿಷಾ ಯಾಕೆ ಮದ್ವೆ ಆಗಿಲ್ಲ? ಸಂಗಾತಿ ಬೇಕು ಮದುವೆ ಬೇಡ ಅನ್ನೋದು ಯಾಕೆ? 7 ವರ್ಷಗಳ ಹಿಂದೆ ಕೊಟ್ಟ ಉತ್ತರವಿದು...

ಬಹುಭಾಷಾ ನಟಿ ತ್ರಿಷಾ ಕಡಿಮೆ ವೈಯಕ್ತಿಕ ಮತ್ತು ವೃತ್ತಿ ಬದುಕನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಲಕ್ಕಿ ಲೇಡಿ ಅನ್ನೋ ಪಟ್ಟ ಪಡೆದಿದ್ದಾರೆ. ಆದರೆ ತ್ರಿಷಾ ಮದುವೆ ಆಗಿಲ್ಲ ಅನೋ ಬೇಸರ ಎಲ್ಲರಿಗೂ ಕಾಡುತ್ತಿದೆ. ಸುಮಾರು 5 ವರ್ಷಗಳಿಂದ ಯಾಕೆ ಮದುವೆ ಆಗಿಲ್ಲ ಎಂದು ಪ್ರಶ್ನೆ ಮಾಡುವವರಿಗೆನೇ ಬೇಸರವಾಗಿದೆ. ಹುಡುಗ ಸಿಕ್ಕಾಗ ತ್ರಿಷಾನೇ ಹೇಳುತ್ತಾರೆ ಎಂದು ಅಭಿಮಾನಿಗಳು ಸುಮ್ಮನಾಗಿದ್ದಾರೆ. ಈಗ ತ್ರಿಷಾ ಹಳೆ ಸಂದರ್ಶನ ವೈರಲ್ ಆಗುತ್ತಿದೆ. 

ಹೌದು! 2016ರಲ್ಲಿ ಇಂಡಿಯಾಗ್ಲಿಟ್ಜ್ ತಮಿಳು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಂಗಾತಿ, ಮದುವೆ ಮತ್ತು ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ.  'ಜನರು ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ನನಗೆ ಬೇಸರ ಆಗುತ್ತದೆ ಏಕೆಂದರೆ ಯಾವ ರೀತಿ ವ್ಯಕ್ತಿ ಬೇಕು ಬದುಕು ಹೇಗೆ ಎಂದು ಕೇಳುವುದಿಲ್ಲ ಬದಲಿಗೆ ಯಾವಾಗ ಮದುವೆ? ನೀನು ಇಷ್ಟು ವರ್ಷದಿಂದ ಸುಮ್ಮೆನ ಇರುವುದು ತಪ್ಪು 15 ವರ್ಷ ಲೈಫ್‌ ಎಂಜಾಯ್ ಮಾಡಿರುವೆ ಈಗ ಮದುವೆ ಮಾಡ್ಕೋ. 30ರ ನಂತರ ಹುಡುಗರು ಸಿಗುವುದಿಲ್ಲ ಹಾಗೆ ಹೀಗೆ ಎಂದು ಕಾಮೆಂಟ್ ಮಾಡುತ್ತಾರೆ. ಪ್ರಶ್ನೆ ಕೇಳಿ ಉತ್ತರ ಕೊಡುವೆ ಆದರೆ ಪ್ರಶ್ನೆ ಕೇಳುವ ರೀತಿ ಮತ್ತು ಅವರ ಧ್ವನಿ ತಪ್ಪು' ಎಂದು ತ್ರಿಷಾ ಮಾತನಾಡಿದ್ದಾರೆ.

ಗೋಶಾಲೆಯಲ್ಲಿ ಮಗನ 4ನೇ ಹುಟ್ಟುಹಬ್ಬ ಆಚರಿಸಿದ ಕಾಂತಾರ ರಿಷಬ್ ಶೆಟ್ಟಿ!

'ತುಂಬಾ ನಾರ್ಮಲ್ ಆಗಿ ಯಾವಾಗ ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರೆ ಉತ್ತರ ಕೊಡುವೆ. ಮದುವೆ ವಿಚಾರವಾಗಿ ನನಗೆ ಕಾಮೆಂಟ್ ಮಾಡಲು ಆಗುವುದಿಲ್ಲ ಏಕೆಂದರೆ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಒಮ್ಮೆ ಹುಡುಗನನ್ನು ಭೇಟಿ ಮಾಡಿದಾಗ ಅವರ ಜೊತೆ ಜೀವನ ಮಾಡಬೇಕು ಅನಿಸಬೇಕು ಏಕೆಂದರೆ ನನಗೆ ಡಿವೋರ್ಸ್‌ ಮೇಲೆ ಚೂರು ನಂಬಿಕೆ ಇಲ್ಲ. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಡಿವೋರ್ಸ್‌ ತೆಗೆದುಕೊಂಡಿರುವ ಅನೇಕರನ್ನು ನನ್ನ ಸುತ್ತ ನೋಡಿರುವೆ ಹೀಗಾಗಿ ನನಗೆ ಭಯ ಇದೆ. ಕಾಯುವುದಕ್ಕೆ ನನಗೆ ತಾಳ್ಮೆ ಇದೆ ಸರಿಯಾದ ವ್ಯಕ್ತಿ ಸಿಕ್ಕಾಗ ಸರಿಯಾದ ಸಮಯ ಬಂದಾಗ ಜೀವನ ಚೆನ್ನಾಗಿರುತ್ತದೆ. ಮದುವೆನೇ ಆಗಿಲ್ಲ ಅಂದ್ರೂ ಖುಷಿಯಾಗಿರುತ್ತೀನಿ' ಎಂದು ತ್ರಿಷಾ ಹೇಳಿದ್ದಾರೆ. 

ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

'ನನಗೆ ಒಂಟಿಯಾಗಿರುವುದಕ್ಕೆ ಇಷ್ಟವಿಲ್ಲ ಸಂಗಾತಿಯನ್ನು ಹುಡುಕಬೇಕು ಪ್ರೀತಿ ಹುಟ್ಟ ಬೇಕು ಆಮೇಲೆ ಮದುವೆ. ನನ್ನ ಜೀವನವನ್ನು ಒಬ್ಬರ ಜೊತೆ ಹಂಚಿಕೊಳ್ಳಬೇಕು ಆಗ ಅರ್ಥಪೂರ್ಣವಾಗಿರುತ್ತದೆ' ಎಂದಿದ್ದಾರೆ ಸುಂದರಿ.

2015 ಜನವರಿಯಲ್ಲಿ ಚೆನ್ನೈ ಮೂಲದ ಬ್ಯುಸಿನೆಸ್‌ ಮ್ಯಾನ್‌ ವರುಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ನಿಶ್ಚಿತಾರ್ಥ ಮಾಡಿಕೊಂಡ 5 ತಿಂಗಳಿಗೆ ಸಂಬಂಧ ಮುರಿದುಕೊಂಡಿರುವುದಾಗಿ ಅನೌನ್ಸ್ ಮಾಡಿಬಿಟ್ಟರು. ಬ್ರೇಕಪ್‌ಗೆ ಕಾರಣ ತಿಳಿದು ಬಂದಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗರ್ಭಿಣಿಯಾಗಿದ್ದರೂ ನಟನೆಯಿಂದ ಹಿಂದೆ ಸರಿಯದ ಸಮಂತಾ: ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್!
33 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ