ದಯವಿಟ್ಟು ಲೈಫಲ್ಲಿ ಯಾರೂ ನನ್ನಂತೆ ಈ ತಪ್ಪನ್ನು ಮಾಡಲೇಬೇಡಿ: ನಟಿ ಪ್ರಿಯಾಂಕಾ ಚೋಪ್ರಾ!

By Shriram Bhat  |  First Published Jul 31, 2024, 11:23 PM IST

ಕೆಲವರ ನಿರೀಕ್ಷೆ ಸುಳ್ಳು ಮಾಡುವಂತೆ ಅವರಿಬ್ಬರೂ ಅನ್ಯೋನ್ಯವಾಗಿದ್ದು ಆರು ವರ್ಷಗಳನ್ನು ಒಟ್ಟಿಗೇ ಇದ್ದು ಕಳೆದಿದ್ದಾರೆ. ಆದರೆ, ಪಿಗ್ಗಿ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಚೋಪ್ರಾ ಬಗ್ಗೆ ವೇದಿಕೆಯೊಂದರಲ್ಲಿ ಮಾತನಾಡುತ್ತ ಅಚ್ಚರಿ..


ಬಾಲಿವುಡ್‌ನಲ್ಲಿ ಸಾಕಷ್ಟು ಮಿಂಚಿ ಮೆರೆದು ಸದ್ಯ ಹಾಲಿವುಡ್‌ನಲ್ಲಿ ನಟನೆ ಮುಂದುವರೆಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka chopra) ಯಾರಿಗೆ ಗೊತ್ತಿಲ್ಲ? ಆರು ವರ್ಷಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹಾಗು ಹಾಲಿವುಡ್ ಪಾಪ್ ಸಿಂಗರ್‌ ನಿಕ್ ಜೊನಾಸ್ (Nick Jonas) ಜೋಡಿ  ಮದುವೆಯಾಗಿದ್ದಾರೆ. ಅದು ಅತಿಂಥ ಮದುವೆಯಲ್ಲ. ಪ್ರಿಯಾಂಕಾ-ನಿಕ್ ಮದುವೆ ತುಂಬಾ ಅದ್ದೂರಿಯಾಗಿತ್ತು ಎಂದರೆ ಅ ಮದುವೆಗೆ ಬಹಳಷ್ಟು ಜನರನ್ನು ಆಹ್ವಾನಿಸಲಾಗಿತ್ತು. ಜೊತೆಗೆ, ವೆಡ್ಡಿಂಗ್‌ಗೆ ಬರೋಬ್ಬರಿ ಖರ್ಚು ಮಾಡಲಾಗಿತ್ತು. 

ನಟಿ ಪ್ರಿಯಾಂಕಾ ಚೋಪ್ರಾ ಒಮ್ಮೆ ಮಾತನಾಡುತ್ತ ನಾನು ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ಧೇನೆ. ಅದು ಏನೆಂದರೆ, ಬೇರೆಯವರ ಮಾತು ಕೇಳಿ ಅದನ್ನು ಮನಸ್ಸಿಗೆ ಹಚ್ಚಿಕೊಂಡು ನನ್ನ ನಾನು ಪೋಷಕರಿಗೇ ಬೈದುಬಿಟ್ಟಿದ್ದೆ, ಕಾರಣ, ನನ್ನ ಮನಸ್ಸಿಗೆ ಬೇಸರವಾಗಿ ನನಗೆ ಕೋಪ ಬಂದುಬಿಟ್ಟಿತ್ತು. ನನ್ನ ಎಲ್ಲಾ ಕೆಟ್ಟ ಪರಿಸ್ಥಿತಿಗೆ ಪೋಷಕರೇ ಕಾರಣ ಅಂದುಕೊಂಡಿದ್ದೆ, ಆ ಬಗ್ಗೆ ನನಗೆ ಬಹಳಷ್ಟು ರೀಗ್ರೆಟ್ ಇದೆ. ನಮ್ಮ ಪೋಷಕರಿಗೆ ಬೈದರೆ ಯಾರಿಗೇ ಆದರೂ ಮುಂದೊಂದು ದಿನ ಆ ಬಗ್ಗೆ ಪಶ್ಚಾತ್ತಾಪ ಆಗುತ್ತೆ. ದಯವಿಟ್ಟು ಯಾರೂ ಆ ತಪ್ಪು ಮಾಡಬೇಡಿ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

Tap to resize

Latest Videos

undefined

ಮುಂಬೈನಲ್ಲಿ ಹಫ್ತಾ ವಸೂಲಿಗೆ ಬಂದವನು ವಿಷ್ಣುವರ್ಧನ್ ಕಾಲಿಗೆ ಬಿದ್ದಿದ್ದು ಯಾಕೆ? ಏನಾಗಿತ್ತು ಅಲ್ಲಿ?

ಇನ್ನು, ಬಹಳಷ್ಟು ಜನರಿಗೆ ತಿಳಿದಿರುವಂತೆ, ನಿಕ್ ಜೊನಾಸ್ ಹಾಗು ಪ್ರಿಯಾಂಕಾ ಚೋಫ್ರಾ ಮಧ್ಯೆ ಬರೋಬ್ಬರಿ ಹತ್ತು ವರ್ಷಗಳ ಗ್ಯಾಪ್ ಇದೆ. ಸಾಮಾನ್ಯವಾಗಿ ದಂಪತಿಗಳಲ್ಲಿ ಒಂದೆರಡು ವರ್ಷಗಳ ಅಂತರ ಇದ್ದೆ ಇರುತ್ತದೆ. ಆದರೆ, ಈ ಹತ್ತು ವರ್ಷಗಳ ಗ್ಯಾಪ್ ಎನ್ನುವುದು ಅತಿಯಾಯಿತು ಎಂಬುದು ಬಲ್ಲವರ ಅಭಿಪ್ರಾಯ. ಹಲವರು ಮದುವೆಯಾದ ದಿನದಿಂದಲೂ ಈ ಮದುವೆ ಬಹಳಷ್ಟು ದಿನ ನಿಲ್ಲಲ್ಲ ಎಂದು ಹೇಳುತ್ತಲೇ ಬಂದಿದ್ದರು. ಅವರಿಬ್ಬರು ಯಾವಾಗ ದೂರವಾಗುತ್ತಾರೆ ಎಂದು ಕಾಯುತ್ತಲೇ ಇದ್ದರು. 

ಆದರೆ ಅಂತಹ ಕೆಲವರ ನಿರೀಕ್ಷೆ ಸುಳ್ಳು ಮಾಡುವಂತೆ ಅವರಿಬ್ಬರೂ ಅನ್ಯೋನ್ಯವಾಗಿದ್ದು ಆರು ವರ್ಷಗಳನ್ನು ಒಟ್ಟಿಗೇ ಇದ್ದು ಕಳೆದಿದ್ದಾರೆ. ಆದರೆ, ಪಿಗ್ಗಿ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಚೋಪ್ರಾ ಬಗ್ಗೆ ವೇದಿಕೆಯೊಂದರಲ್ಲಿ ಮಾತನಾಡುತ್ತ ಅಚ್ಚರಿ ಸ್ಟೇಟ್‌ಮೆಂಟ್ ನೀಡಿದ್ದಾರೆ. 'ನನಗೆ ನಮ್ಮಿಬ್ಬರ ಮದುವೆ ಬಗ್ಗೆ ರೀಗ್ರೇಟ್ ಇದೆ' ಎಂದಿದ್ದಾರೆ. ಅವರ ಮಾತನ್ನು ಕೇಳಿ ಸ್ಟೇಜ್ ಮೇಲಿದ್ದ ಹಲವರು ಶಾಕ್‌ಗೆ ಒಳಗಾಗಿದ್ದಾರೆ. 

ನಾನಾ ನೀನಾ ನೋಡೋ ಬಿಡೋಣ, ಯಶ್-ಪ್ರಭಾಸ್ ಮಧ್ಯೆ ಭಾರೀ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜು..!

ನಿಕ್ ಜೊನಾಸ್ ಅವರು 'ನಾನು ಹಾಗು ಪ್ರಿಯಾಂಕಾ ಇಬ್ಬರೂ ನಮ್ಮ ವೆಡ್ಡಿಂಗ್ ಸಲುವಾಗಿ ಬಹಳಷ್ಟನ್ನು ಖರ್ಚು ಮಾಡಿದ್ದೇವೆ. ಆ ಬಗ್ಗೆ ನನಗೆ ರೀಗ್ರೆಟ್ ಇದೆ ಎಂದಿದ್ದಾರೆ. ನಿಕ್ ಹೇಳಿದ್ದೇನೆಂದರೆ, ನಾವಿಬ್ಬರೂ ನಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರೆ ಸಾಕಿತ್ತು. ಯಾಕೆ ಅಷ್ಟೊಂದು ಗ್ರಾಂಡ್ ಆಗಿ, ಅಷ್ಟೊಂದು ಡಾಲರ್, ಅಷ್ಟೊಂದು ಯೂರೋ, ಅಷ್ಟೊಂದು ರೂಪಾಯಿ ವ್ಯಯಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಅದು ಅನಾವಶ್ಯಕ ಖರ್ಚು ಎನಿಸುತ್ತಿದೆ' ಎಂದಿದ್ದಾರೆ.  

click me!