ಹಾಲಿವುಡ್‌ನ ಸುಪ್ರಸಿದ್ಧ ನಟಿ ಏಂಜಲೀನಾ ಜೋಲೀ, ಜೀವನದ ಒಂದು ಹಂತದಲ್ಲಿ ತೀವ್ರ ಮಾನಸಿಕ ಖಿನ್ನತೆ ಅನುಭವಿಸಿದವಳು. ಅಂಥ ಒಂದು ಸನ್ನಿವೇಶದಲ್ಲಿ ಆಕೆ ತನ್ನನ್ನೇ ಕೊಲ್ಲಲು ತಾನೇ ಹಿಟ್‌ಮ್ಯಾನ್‌ಗೆ ಸುಪಾರಿ ಕೊಟ್ಟಿದ್ದಳಂತೆ! ಅದೇನು ಕತೆ? ಇಲ್ಲಿದೆ ವಿವರ.
ಏಂಜಲಿನಾ ಜೋಲಿ ಹಲವು ಬಾರಿ ತನ್ನ ತಮ್ಮ ಮಾನಸಿಕ ಆರೋಗ್ಯದ (Angelina Julie Mental Health) ಹೋರಾಟದ ಬಗ್ಗೆ ಆಳವಾದ ವೈಯಕ್ತಿಕ ಕಥೆಯನ್ನು ಹಂಚಿಕೊಂಡಿದ್ದು ಉಂಟು. ಇದರಲ್ಲಿ ಕೆಲವು ಆಶ್ಚರ್ಯಕರ ವಿವರಗಳು ಸೇರಿವೆ. ತನ್ನ ಜೀವನವನ್ನು ಕೊನೆಗೊಳಿಸಲು ಒಮ್ಮೆ ಹಿಟ್‌ಮ್ಯಾನ್ ಅನ್ನು ನೇಮಿಸಿಕೊಂಡಿದ್ದೆ ಎಂದು ನಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದಳು.
ಸಂದರ್ಶನವೊಂದರಲ್ಲಿ ಜೋಲೀ ತನ್ನ ಇಪ್ಪತ್ತರ ಹರೆಯದ ಆರಂಭದಲ್ಲಿ, ತಾನು ತೀವ್ರ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಿದೆ ಎಂದು ವಿವರಿಸಿದಳು. 22 ನೇ ವಯಸ್ಸಿನಲ್ಲಿ, ಬದುಕು ಸಾಕು, ತನ್ನನ್ನು ಯಾರಾದರೂ ಕೊಲ್ಲಬೇಕು ಎಂದು ಯೋಜನೆ ರೂಪಿಸಿದಳು. ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ತಾನು ದುಃಖ ನೀಡಿದ್ದೇನೆ ಎಂಬುದು ಅವಳ ಭಾವನೆಯಾಗಿತ್ತು. ಈ ದುಃಖಗಳಿಂದ ಶಾಶ್ವತವಾಗಿ ಬಿಡುಗಡೆ ಹೊಂದಬೇಕು ಎಂದು ಆಕೆ ಬಯಸಿದ್ದಳು. ಇದೊಂದು ಭಯಂಕರ ಹುಚ್ಚು ಯೋಚನೆಯಾಗಿತ್ತು. ಆದರೆ ತನ್ನನ್ನು ಕೊಲ್ಲಲು ಯಾರನ್ನಾದರೂ ನೇಮಿಸಿಕೊಳ್ಳಬೇಕು ಎಂದುಕೊಂಡಳು.
ನ್ಯೂಯಾರ್ಕ್‌ನಲ್ಲಿ ಸುಪಾರಿ ಕೊಲೆಗಾರರನ್ನು ಹುಡುಕುವುದು ಅಷ್ಟು ಕಷ್ಟವೇನಿಲ್ಲ. ಹಾಗೆ ಆಕೆ ಒಬ್ಬನನ್ನು ಹುಡುಕಿಕೊಂಡಳು. ಆತನಿಗೆ ದುಡ್ಡು ಕೂಡ ಕೊಟ್ಟಳು. ಅವನು ಸುಪಾರಿ ಕೊಲೆಗಾರ ಆಗಿರುವಂತೆ ಸಭ್ಯನೂ ಆಗಿದ್ದ. ನಿನ್ನ ತೀರ್ಮಾನವನ್ನು ಮರುಪರಿಶೀಲಿಸು. ಸರಿಯಲ್ಲ ಅನಿಸಿದರೆ ವಾಪಸ್ ಪಡೆಯಲು ಇನ್ನೂ ನಿನಗೆ ಟೈಮಿದೆ ಎಂದ. ಅವಳಿಗೆ ಅವನು ಎರಡು ತಿಂಗಳ ಟೈಮ್ ನೀಡಿದ. ಆದರೆ ಆಕೆ ಖಚಿತವಾಗಿದ್ದಳು. ಎಲ್ಲ ಪ್ಲಾನ್ ಮಾಡಿದ್ದಳು. ಇದೊಂದು ಆಕಸ್ಮಿಕ ಎಂದು ತಿಳಿಯುವಂತೆ ಯೋಜನೆ ಹಾಕಿದ್ದಳು. ಅಕೌಂಟ್‌ನಿಂದ ಸ್ವಲ್ಪ ಸ್ವಲ್ಪವೇ ಹಣವನ್ನು ವಿತ್‌ಡ್ರಾ ಮಾಡಿದ್ದಳು. ತನ್ನ ಸಾವು ಒಂದು ದರೋಡೆಯಂತೆ ಕಾಣುವಂತೆ ಯೋಜನೆ ರೂಪಿಸಿದ್ದಳು. ಯಾಕೆಂದರೆ ತಾನು ಆತ್ಮಹತ್ಯೆ ಮಾಡಿಕೊಂಡದ್ದು ಎಂದು ತಿಳಿದರೆ ತನ್ನ ಕುಟುಂಬಕ್ಕೆ ತುಂಬಾ ವೇದನೆಯಾಗಬಹುದು ಎಂದು ಭಾವಿಸಿದ್ದಳು.
ಮುಂಬೈನಲ್ಲಿ ಹಫ್ತಾ ವಸೂಲಿಗೆ ಬಂದವನು ವಿಷ್ಣುವರ್ಧನ್ ಕಾಲಿಗೆ ಬಿದ್ದಿದ್ದು ಯಾಕೆ? ಏನಾಗಿತ್ತು ಅಲ್ಲಿ?
ಆದರೆ ಸ್ವಲ್ಪವೇ ದಿನಗಳಲ್ಲಿ ಪರಿಸ್ಥಿತಿ ಮ್ಯಾಜಿಕಲ್ ಆಗಿ ಬದಲಾಯಿತು. ಅವಳ ಜೀವನದಲ್ಲಿ ಒಳ್ಳೆಯ ಅವಕಾಶಗಳು ಬರತೊಡಗಿದವು. ಸಿನಿಮಾದಲ್ಲಿ ಖ್ಯಾತಿ ಬಂತು. ಖಿನ್ನತೆ ಕಡಿಮೆಯಾಯಿತು. ಕೂಡಲೇ ಆಕೆ ಮನಸ್ಸು ಬದಲಾಯಿಸಿದಳು. ಸುಪಾರಿ ವಾಪಸ್ ಪಡೆದಳು. ಆದರೆ ಸುಪಾರಿ ಕೊಲೆಗಾರನಿಗೆ ಸುಪಾರಿ ವಾಪಸ್ ಪಡೆಯಲು ಇನ್ನೊಂದಷ್ಟು ಹಣ ಕೊಡಬೇಕಾಯಿತು!
ಇದನ್ನು ಉಲ್ಲೇಖಿಸಿ ಜೋಲಿ ಹೇಳುತ್ತಾಳೆ: ನಿಮ್ಮ ಹತ್ತಿರದವರು ಯಾರಾದರೂ ಖಿನ್ನತೆ ಅನುಭವಿಸುತ್ತಿದ್ದರೆ, ಆತ್ಮಹತ್ಯೆಯ ಯೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರೆ, ನೀವು ಖಂಡಿತವಾಗಿಯೂ ಕಾಳಜಿವಹಿಸುವ ಅಗತ್ಯವಿದೆ. ಅವರ ಆಲೋಚನೆಗಳು ನಂಬಲಾಗದಷ್ಟು ದುಃಖಕರ ಮತ್ತು ಅಗಾಧವಾಗಿರಬಹುದು. ಅನೇಕ ಜನರು ತಮ್ಮನ್ನು ನಿಭಾಯಿಸಲು ಸಿದ್ಧರಿಲ್ಲದ ಪರಿಸ್ಥಿತಿಯಲ್ಲಿರುತ್ತಾರೆ. ಭಯ, ಗೊಂದಲ ಮತ್ತು ಅಸಹಾಯಕತೆಯ ಮಿಶ್ರಣವನ್ನು ಅನುಭವಿಸುತ್ತಾರೆ. ಅಂತಹ ನಿರ್ಣಾಯಕ ಕ್ಷಣದಲ್ಲಿ ನಿಮ್ಮ ಪ್ರತಿಕ್ರಿಯೆಯು ಅವರಿಗೆ ಪ್ರಮುಖವಾಗಿರುತ್ತದೆ. ಅಂಥ ಹೊತ್ತಿನಲ್ಲಿ ನೀವು ಏನು ಮಾಡಬೇಕೆಂದು ಮತ್ತು ಹೇಗೆ ಬೆಂಬಲವನ್ನು ನೀಡಬೇಕೆಂದು ತಿಳಿದಿರಬೇಕು. ಆಮೂಲಕ ಅವರ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಬಹುದು. ನಿಮ್ಮ ಪ್ರೀತಿಪಾತ್ರರನ್ನು ಅವರ ಕರಾಳ ಸಮಯದಲ್ಲಿ ಅವರಿಗೆ ಅಗತ್ಯವಿರುವ ಸಹಾಯ ಮತ್ತು ಬೆಂಬಲ ನೀಡುವ ಮೂಲಕ ಉಳಿಸಿಕೊಳ್ಳಬಹುದು ಎನ್ನುತ್ತಾಳೆ ಜೋಲಿ.
ಕುಷ್ಠರೋಗಿ ಎಂದು ಶಾಲೆಯಿಂದ ಬಹಿಷ್ಕರಿಸಿದ್ದ ನಟಿ ಬಾಲಿವುಡ್ ಸೂಪರ್ ಸ್ಟಾರ್! ಡಿಂಪಲ್ ಕಥೆಯೇ ರೋಚಕ