ಸಲಾರ್ ಪ್ರಶಾಂತ್ ನೀಲ್ ಪಾಲಿಗೆ ವರದಾನವಾಗಿ ಪರಣಮಿಸಿದೆ. ಸಲಾರ್ ಒಂದೇ ವಾರದಲ್ಲಿ 550 ಕೋಟಿ ರೂಪಾಯಿ ಗಳಿಸುವ ಮೂಲಕ ಪ್ರಭಾಸ್ ಮುಖದಲ್ಲಿ ಮುಗುಳ್ನಗು ಮೂಡಿದೆ.
ತೆಲುಗು ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್ ಖ್ಯಾತಿಯ ನಟ ಪ್ರಭಾಸ್ ಸಿನಿಮಾ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 'ಸಲಾರ್ ಭಾಗ-1'ಕ್ಕೆ ಪ್ರೇಕ್ಷಕರು ತೋರಿದ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ' ಎಂದು ನಟ ಪ್ರಭಾಸ್ ತಮ್ಮ ಸೋಷಿಯಲ್ ಮೀಡಿಯಾ (X)ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟ ಪ್ರಭಾಸ್, ಹೊಸ ವರ್ಷದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.
ಪ್ರಭಾಸ್ ಹಾಗೂ ಪ್ರಥ್ವಿರಾಜ್ ನಟನೆಯ ಸಲಾರ್ ಚಿತ್ರವು ಬಿಡುಗಡೆಯಾದ ಒಂದೇ ವಾರದಲ್ಲಿ 550 ಕೋಟಿ ಗಳಿಕೆ ಕಂಡಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಹೊಂಬಾಳೆ ಸಂಸ್ಥೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಚಿತ್ರವು ಎರಡನೇ ವಾರದಲ್ಲಿ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರವು ಬಿಡುಗಡೆ ಆಗುವುದಕ್ಕೆ ಮೊದಲು ಭಾರೀ ನಿರೀಕ್ಷೆ ಮೂಡಿಸಿತ್ತು. ಕಾರಣ, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಇದಕ್ಕೂ ಮೊದಲು ಮಾಡಿರುವ ಸಿನಿಮಾಗಳಾದ ಉಗ್ರಂ, ಕೆಜಿಎಫ್ ಹಾಗೂ 'ಕೆಜಿಎಫ್-2' ಚಿತ್ರಗಳು ಸೂಪರ್ ಹಿಟ್ ಆಗಿದ್ದವು.
ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ ಮದುವೆ; ಎಲ್ಲಿ, ಯಾವಾಗ ...?
ಈ ಕಾರಣಕ್ಕೆ ಜನರು ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ನಟ ಪ್ರಭಾಸ್ ವಿಷಯದಲ್ಲಿ ವಿಷಯ ಬೇರೆಯೇ ಇದೆ ಎನ್ನಬಹುದು. ನಟ ಪ್ರಭಾಸ್ ಮುಖ್ಯ ಭೂಮಿಕೆಯ ಬಾಹುಬಲಿ-1 ಹಾಗೂ ಬಾಹುಬಲಿ-2 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಗಳಿಕೆ ಮಾಡಿದ್ದವು. ಆದರೆ ಅದೇ ಪ್ರಭಾಸ್ ನಟನೆಯ ರಾಧೆಶ್ಯಾಮ್, ಕಲ್ಕಿ ಹಾಗು ಆದಿಪುರುಷ್ ಚಿತ್ರಗಳು ಫ್ಲಾಪ್ ಆಗಿ ಪ್ರಭಾಸ್ ಫ್ಯಾನ್ಸ್‌ಗಳನ್ನು ಚಿಂತೆಗೆ ದೂಡಿದ್ದವು. ಈಗ ಬಿಡುಗಡೆ ಕಂಡಿರುವ ಪ್ರಭಾಸ್ ನಟನೆಯ 'ಸಲಾರ್' ಚಿತ್ರವು ಪ್ರಭಾಸ್ ಪಾಲಿಗೆ 'ಮಾಡು ಇಲ್ಲವೇ ಮಡಿ' ಎಂಬ ಪರಿಸ್ಥಿತಿ ತಂದಿಟ್ಟಿತ್ತು.
ಹೊಸ ವರ್ಷಕ್ಕೆ JR ಎನ್‌ಟಿಆರ್ ಗುಡ್ ನ್ಯೂಸ್; ಪ್ರಿಯಾಂಕಾ ಚೋಪ್ರಾ ಜತೆ ರೊಮ್ಯಾನ್ಸ್‌ಗೆ ರೆಡಿನಾ?
ಆದರೆ, ಸಲಾರ್ ಪ್ರಶಾಂತ್ ನೀಲ್ ಪಾಲಿಗೆ ವರದಾನವಾಗಿ ಪರಣಮಿಸಿದೆ. ಸಲಾರ್ ಒಂದೇ ವಾರದಲ್ಲಿ 550 ಕೋಟಿ ರೂಪಾಯಿ ಗಳಿಸುವ ಮೂಲಕ ಪ್ರಭಾಸ್ ಮುಖದಲ್ಲಿ ಮುಗುಳ್ನಗು ಮೂಡಿದೆ. ಈ ಕಾರಣಕ್ಕೆ ನಟ ಪ್ರಭಾಸ್ ಸೋಷಿಯಲ್ ಮೀಡಿಯಾ ಮೂಲಕ ಸಲಾರ್ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ಪಾಲಿಗೆ ಸಲಾರ್ ದೊಡ್ಡ ತಿರುವನ್ನು ಕೊಟ್ಟಿದೆ. ಸಹಜವಾಗಿಯೇ ನಟ ಪ್ರಭಾಸ್ ಖುಷಿಯಾಗಿದ್ದಾರೆ.
ಡಿವೋರ್ಸ್ ತೆಗೆದುಕೊಳ್ಳುವ ಮಾತಾಡಿದ ಅಂಕಿತಾ; ವಿಕ್ಕಿ ಬಗ್ಗೆ ಅನುಕಂಪ ತೋರಿದ್ರಾ ಮುನಾವರ್!