ಮುಂಬೈನಲ್ಲಿ 75 ಕೋಟಿ ಬೆಲೆಯ ಐಶಾರಾಮಿ ಮನೆ ಖರೀದಿಸಿದ ನಟ ಜಾನ್ ಅಬ್ರಹಾಂ, ನೋಂದಣಿ ಮೊತ್ತವೇ ಕೋಟಿಗಟ್ಟಲೆ!

By Gowthami K  |  First Published Jan 1, 2024, 7:09 PM IST

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ ದುಬಾರಿ ಮೊತ್ತದ ಬಂಗಲೆಯನ್ನು ಖರೀದಿಸಿದ್ದಾರೆ. ನೋಂದಣಿಗೆ ಬರೋಬ್ಬರಿ ರೂ 4.24 ಕೋಟಿ ಪಾವತಿಸಿದ್ದಾರೆ.


ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ ದುಬಾರಿ ಮೊತ್ತದ ಬಂಗಲೆಯನ್ನು ಖರೀದಿಸಿದ್ದಾರೆ.  ಬರೋಬ್ಬರಿ 70.83 ಕೋಟಿ ರೂ ಪಾವತಿಸಿದ್ದು, ಇದರಲ್ಲಿ 5,416 ಚದರ ಅಡಿ ಬಂಗಲೆ ಸೇರಿ ಒಟ್ಟು 7,722 ಚದರ ಅಡಿ ಭೂಮಿ ಹೊಂದಿದೆ ಎಂದು IndexTap.com ಬಂಗಲೆಗಾಗಿ ಆಸ್ತಿ ನೋಂದಣಿ ದಾಖಲೆಗಳಿಂದ ತಿಳಿದುಬಂದಿದೆ.  ಈ ಬಂಗಲೆಯು ಮುಂಬೈನ ಅತ್ಯಂತ ಜನನಿಬಿಡ ಶಾಪಿಂಗ್ ಮಾರ್ಗಗಳಲ್ಲಿ ಒಂದಾದ ಖಾರ್‌ನ ಲಿಂಕಿಂಗ್ ರಸ್ತೆಯಲ್ಲಿದೆ ಮತ್ತು ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇದರ ಅಕ್ಕಪಕ್ಕದಲ್ಲಿದೆ.

ಅಬ್ರಹಾಂ ಅವರು ಡಿಸೆಂಬರ್ 27, 2023 ರಂದು ರೂ 4.24 ಕೋಟಿ ನೋಂದಣಿಗೆ ಪಾವತಿಸಿದ ನಂತರ ಬಂಗಲೆ ಒಪ್ಪಂದವನ್ನು ನೋಂದಾಯಿಸಿದ್ದಾರೆ. ಹೀಗಾಗಿ ಒಟ್ಟು 75 ಕೋಟಿ ಖರ್ಚು ಮಾಡಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಮುಂಬೈನಲ್ಲಿರುವ ಆಧುನಿಕ ಬಾಲಿವುಡ್ ತಾರೆಯರು ಪ್ರಾಥಮಿಕವಾಗಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ.

Tap to resize

Latest Videos

undefined

2024ಕ್ಕೆ ನಾನು ಅಮ್ಮ, ಬೇಬಿ ಬಂಪ್‌ ಫೋಟೋ ಹಾಕಿ ಸಿಹಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಮುಂಬೈನಲ್ಲಿ ಕೆಲವು ಬಂಗಲೆಗಳನ್ನು ಹೊಂದಿದ್ದಾರೆ. ಬಚ್ಚನ್ ಅವರು ಇತ್ತೀಚೆಗೆ ತಮ್ಮ ಮಗಳು ಶ್ವೇತಾ ನಂದಾ ಅವರಿಗೆ ಮುಂಬೈ ಬಂಗಲೆ ಪ್ರತೀಕ್ಷಾವನ್ನು ನೀಡಿದಾಗ ಸುದ್ದಿ ಮಾಡಿದರು. ಈ ಆಸ್ತಿಯು ಮುಂಬೈನ ಜುಹುದಲ್ಲಿ 890.47 ಚದರ ಮೀ ಮತ್ತು 674 ಚದರ ಮೀ ಗಾತ್ರದ ಎರಡು ಪ್ಲಾಟ್‌ಗಳಲ್ಲಿ ನೆಲೆಗೊಂಡಿದೆ. 

ನವೆಂಬರ್ 8 ರಂದು, ಆಸ್ತಿಯನ್ನು ಉಡುಗೊರೆ ರೀತಿಯಲ್ಲಿ ಕೊಟ್ಟಿರುವ ಪತ್ರಕ್ಕೆ ಸಹಿ ಮಾಡಲಾಗಿದೆ. ಗಿಫ್ಟ್ ಡೀಡ್ ದಾಖಲೆಗಳಲ್ಲಿ ವಹಿವಾಟಿಗೆ 50.65 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ಸೂಚಿಸಲಾಗಿದೆ.

ಬರೋಬ್ಬರಿ 5259 ಕೋಟಿ ರೂ ಸಂಪತ್ತು ಇರೋ ಬಾಲಿವುಡ್‌ನ ಶ್ರೀಮಂತ ಮನೆತನ, ಬಚ್ಚನ್‌, ಶಾರುಖ್‌, ಕಪೂರ್‌ ಕುಟುಂಬವಲ್ಲ!

ಅಬ್ರಹಾಂ ಬಂಗಲೆಯನ್ನು ಖರೀದಿಸಿದ ವಸತಿ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ 40,000 ರಿಂದ 90,000 ರೂ. ಪ್ರಾಪರ್ಟಿ ಗ್ರೇಡ್ ಮತ್ತು ಪ್ರದೇಶವನ್ನು ಆಧರಿಸಿ ದರವನ್ನು ನಿಗದಿಪಡಿಸಲಾಗಿದೆ ಎಂದು ಸ್ಥಳೀಯ ದಲ್ಲಾಳಿಗಳು ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

click me!