ಮುಂದಿನ ತಿಂಗಳು ಫೆಬ್ರವರಿಯಲ್ಲಿ, ಅಂದರೆ ಫೆಬ್ರವರಿ 2024ರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗು ಜಾಕಿ ಭಗ್ನಾನಿ ಮದುವೆ ಆಗಲಿದ್ದಾರೆ ಎಂಬ ಮಾಹಿತಿಯಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.
ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರಿಬ್ಬರೂ ಈ ಹೊಸ ವರ್ಷದ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಅವರಿಬ್ಬರೂ 2021ರಲ್ಲಿ, ಜಾಕಿ ಭಗ್ನಾನಿ ಹುಟ್ಟುಹಬ್ಬದ ವೇಳೆ ತಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡು ಹೊರಜಗತ್ತಿಗೆ ಅನಾವರಣ ಮಾಡಿದ್ದಾರೆ. 2021ರಲ್ಲಿ ಜಾಕಿ ಭಗ್ನಾನಿ (Jackky Bhagnani) ಹುಟ್ಟುಹಬ್ಬದ ವೇಳೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಪ್ರೇಮ ಕಹಾನಿ ಪಕ್ಕಾ ಎಂದು ಅಧಿಕೃತ ಮುದ್ರೆ ಬಿದ್ದಿದೆ. ಈ ಇಬ್ಬರೂ ಅಂದು ಸೋಷಿಯಲ್ ಮೀಡಿಯಾ ಮೆಸೇಜ್ ಮೂಲಕ ವಿಶ್ ಮಾಡಿಕೊಂಡಿದ್ದಲ್ಲದೇ ತಾವಿಬ್ಬರೂ ಪ್ರೇಮಿಗಳು ಎಂದು ಅಧಿಕೃತವಾಗಿ ಹೇಳಿಕೊಂಡರು.
ಹೊಸ ವರ್ಷಕ್ಕೆ JR ಎನ್‌ಟಿಆರ್ ಗುಡ್ ನ್ಯೂಸ್; ಪ್ರಿಯಾಂಕಾ ಚೋಪ್ರಾ ಜತೆ ರೊಮ್ಯಾನ್ಸ್‌ಗೆ ರೆಡಿನಾ?
ಈಗ, ಎರಡು ವರ್ಷಗಳ ಬಳಿಕ ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹಬ್ಬಿರುವ ಸುದ್ದಿಯನ್ನು ನಂಬುವುದಾದರೆ, ಮುಂದಿನ ತಿಂಗಳು ಫೆಬ್ರವರಿಯಲ್ಲಿ, ಅಂದರೆ ಫೆಬ್ರವರಿ 2024ರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗು ಜಾಕಿ ಭಗ್ನಾನಿ ಮದುವೆ (Marriage) ಆಗಲಿದ್ದಾರೆ ಎಂಬ ಮಾಹಿತಿಯಿದೆ. ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಏಕೆಂದರೆ, ಅವರಿಬ್ಬರೂ ತಮ್ಮ ರಿಲೇಶನ್‌ಶಿಪ್ ಬಗ್ಗೆ ಎರಡು ವರ್ಷದ ಹಿಂದೆಯೇ ಬಾಯಿಬಿಟ್ಟು ಹೇಳಿಕೊಂಡಿದ್ದಾರೆ. ಆದರೆ, ಈಗ ಬಂದಿರುವ 'ಫೆಬ್ರವರಿಯಲ್ಲಿ ಮದುವೆ' ಸುದ್ದಿಯನ್ನು ಅವರೆಲ್ಲೂ ಹೇಳಿಕೊಂಡಿಲ್ಲ.
ಅಮ್ಮನನ್ನು ಒಮ್ಮೆ ಕೂಡ ಹಗ್ ಮಾಡಿರಲಿಲ್ಲ, ನನ್ನ ಪ್ರಪಂಚದಲ್ಲಿಯೇ ತೇಲಾಡುತ್ತಿದ್ದೆ; ಪ್ರಿಯಾಂಕಾ ಚೋಪ್ರಾ
ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ದೇ ದೇ ಪ್ಯಾರ್ ದೇ, ಧ್ರುವಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಬಾಲಿವುಡ್ ಹಾಗು ತೆಲುಗು ಚಿತ್ರರಂಗಗಳಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಕೆಲಸ ಮಾಡಿದ್ದು ಇದೀಗ ಮದುವೆ ಹಂತಕ್ಕೆ ಬಂದು ನಿಂತಿದ್ದಾರೆ. ಆಧ್ಯಾತ್ಮದ ಹಾದಿಯಲ್ಲಿ ಸಹ ನಟಿ ಹೋಗುತ್ತಿದ್ದು, ಆಗಾಗ ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಒಟ್ಟಿನಲ್ಲಿ ಈಗ, ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯವೇ, ಅಂದರೆ ಮುಂದಿನ ತಿಂಗಳು ಮದುವೆ ಆಗುವ ಬಗ್ಗೆ ಸುದ್ದಿ ಹಬ್ಬತೊಡಗಿದೆ.
ಡಿವೋರ್ಸ್ ತೆಗೆದುಕೊಳ್ಳುವ ಮಾತಾಡಿದ ಅಂಕಿತಾ; ವಿಕ್ಕಿ ಬಗ್ಗೆ ಅನುಕಂಪ ತೋರಿದ್ರಾ ಮುನಾವರ್!