ರಾಹುಲ್ ಗಾಂಧಿ ಮದ್ವೆಯಾಗಲು ರೆಡಿ, ಆದ್ರೆ ಒಂದು ಕಂಡೀಷನ್;ಸಂಚಲನ ಸೃಷ್ಟಿಸಿದ ಶೆರ್ಲಿನ್ ಚೋಪ್ರಾ!

By Suvarna News  |  First Published Aug 7, 2023, 8:43 PM IST

ರಾಹುಲ್ ಗಾಂಧಿಗೆ ಹೆಣ್ಣು ನೋಡಿ ಎಂದು ಇತ್ತೀಚೆಗೆ ತಾಯಿ ಸೋನಿಯಾ ಗಾಂಧಿ ಮನವಿ ಮಾಡಿದ ವಿಚಾರ ಭಾರಿ ವೈರಲ್ ಆಗಿತ್ತು. ಹೀಗಾಗಿ ರಾಹುಲ್ ಗಾಂಧಿ ಮದುವೆ ವಿಚಾರ ಭಾರಿ ಚರ್ಚೆಯಾಗಿತ್ತು. ಇದರ ನಡುವೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ತಾನು ರಾಹುಲ್ ಗಾಂಧಿ ಮದುವೆಯಾಗಲು ರೆಡಿ ಎಂದಿದ್ದಾರೆ. ಆದರೆ ಒಂದು ಕಂಡೀಷನ್ ಹಾಕಿದ್ದಾರೆ.


ಮುಂಬೈ(ಆ.07) ರಾಹುಲ್ ಗಾಂಧಿ ಮದುವೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ನನ್ನ ಮಾತು ಕೇಳಿದ್ದರೆ ರಾಹುಲ್ ಗಾಂಧಿಗೆ ಮದುವೆಯಾಗುತ್ತಿತ್ತ, ಈಗಲೂ ಕಾಲ ಮಿಂಚಿಲ್ಲ ಎಂದು ವಿಪಕ್ಷಗಳ ಒಕ್ಕೂಟ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಹೇಳಿದ್ದರು. ಬಳಿಕ ಹರ್ಯಾಣದ ಮಹಿಳೆಯರ ಗಂಪು ಸೋನಿಯಾ ಗಾಂಧಿಯನ್ನು ಭೇಟಿಯಾದ ವೇಳೆ, ಮಗನಿಗೆ ಹೆಣ್ಣು ನೀವೆ ಹುಡುಕಿ ಎಂದಿದ್ದರು. ಈ ಎಲ್ಲಾ ಕಾರಣಗಳಿಂದ ರಾಹುಲ್ ಗಾಂಧಿ ಮದುವೆ ವಿಚಾರ ಭಾರಿ ಚರ್ಚೆಯಾಗುತ್ತಿತ್ತು. ಈ ಬೆಳವಣಿಗೆ ನಡುವೆ ಇದೀಗ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿಯನ್ನು ಮದುವೆಯಾಗಲು ರೆಡಿ ಎಂದಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಮದುವೆಯಾದರೂ ನನ್ನ ಸರ್ನೇಮ್ ಬದಲಿಸುವುದಿಲ್ಲ. ಸರ್ನೇಮ್ ಚೋಪ್ರಾ ಇರಲಿದೆ ಎಂದಿದ್ದಾರೆ.

ಬೋಲ್ಡ್ ಹೇಳಿಕೆಗಳಿಂದ ಸುದ್ದಿಯಾಗುವ ಹಾಟ್ ಬೆಡಗಿ ಶೆರ್ಲಿನ್ ಚೋಪ್ರಾ ಇದೀಗ ರಾಹುಲ್ ಗಾಂಧಿ ಜೊತೆಗೆ ಮದುವೆ ವಿಚಾರ ಮಾತನಾಡಿ ಮತ್ತೆ ಸುದ್ದಿಯಾಗಿದೆ. ಹಾಟ್ ಡ್ರೆಸ್ ಮೂಲಕ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾ ಪಾಪರಾಜಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಪ್ರತಿ ಬಾರಿಯಂತೆ ಹಲವು ಪ್ರಶ್ನೆಗಳು ತೂರಿ ಬಂದಿದೆ. ನೀವು ರಾಹುಲ್ ಗಾಂಧಿಯನ್ನು ಮದುವೆಯಾಗುವ ಕುರಿತು ಆಲೋಚಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳಲಾಗಿದೆ.

Tap to resize

Latest Videos

ಉರ್ಫಿ ಬೆಂಬಲಿಸೋ ಭರದಲ್ಲಿ ನಮ್ದು ಕಾಮಸೂತ್ರದ ಭೂಮಿ ಎನ್ನೋದಾ ನಟಿ ಶೆರ್ಲಿನ್ ಚೋಪ್ರಾ?

ಈ ಪ್ರಶ್ನೆಗೆ ಥಟ್ ಅಂತ ಉತ್ತರಿಸಿದ ಶೆರ್ಲಿನ್ ಚೋಪ್ರಾ, ಯಾಕೆ ರಾಹುಲ್ ಗಾಂಧಿಯನ್ನು ಮದುವೆಯಾಗಬಾರದು? ಆದರೆ ರಾಹುಲ್ ಗಾಂಧಿಯನ್ನು ಮದುವೆಯಾದರೂ  ನನ್ನ ಸರ್ನೇಮ್ ಮಾತ್ರ ಬದಲಾಗಲಿಲ್ಲ. ಇದು ಚೋಪ್ರಾ ಆಗಿರಲಿದೆ ಎಂದಿದ್ದಾರೆ. ಈ ಹೇಳಿಕೆಗೆ ಇದೀಗ ಭಾರಿ ವೈರಲ್ ಆಗಿದೆ. ಈ ವಿಡಿಯೋ ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಬಳಿ ಈ ಕುರಿತು ಅಭಿಪ್ರಾಯ ಕೇಳಿ ಎಂದು ಸಲಹೆ ನೀಡಿದ್ದಾರೆ.

 

 

ಇತ್ತೀಚೆಗೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದ ಹರ್ಯಾಣದ ಮಹಿಳೆಯರು ಬಳಿಯ ಮಾತುಕತೆಯಲ್ಲಿ ರಾಹುಲ್ ಗಾಂಧಿ ಮದುವೆ ವಿಚಾರ ಪ್ರಸ್ತಾಪಿಸಿದ್ದರು. ‘ರಾಹುಲ್‌ಗೆ ಮದುವೆ ಮಾಡಿ’ ಎಂದು ಸೋನಿಯಾಗೆ ಕೇಳಿದರು. ಅದಕ್ಕೆ ಸೋನಿಯಾ, ‘ನೀವೇಕೆ ರಾಹುಲ್‌ಗೆ ಸೂಕ್ತವಾದ ಹುಡುಗಿ ಹುಡುಕಬಾರದು? ಹುಡುಕುತ್ತೀರಾ ತಾನೆ?’ ಎಂದು ತಮಾಷೆಯಾಗೇ ಉತ್ತರಿಸಿದರು. ಇದಕ್ಕೆ ರಾಹುಲ್‌ ಅವರು, ‘ಅದು (ಮದುವೆ) ಆಗುತ್ತೆ’ ಎಂದು ಉತ್ತರಿಸಿದರು.

ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಇನ್ನು ಪ್ರಿಯಾಂಕಾ ಗಾಂಧಿ ಮಾತನಾಡಿ, ‘ರಾಹುಲ್‌ ನನಗಿಂತ ತುಂಟ. ಆದರೆ ಆತನಿಗೆ ಬೈಯದೇ ಎಲ್ಲದಕ್ಕೂ ನನಗೇ ಬಯ್ಯುತ್ತಿದ್ದರು’ ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಇದಲ್ಲದೆ ಒಬ್ಬ ಮಹಿಳೆ ರಾಹುಲ್‌ಗೆ ಊಟವನ್ನೂ ತಿನ್ನಿಸಿದ ದೃಶ್ಯವಿದೆ. ಈ ಬಗ್ಗೆ ಬರೆದುಕೊಂಡಿರುವ ರಾಹುಲ್‌, ‘ಸೋನಿಪತ್‌ ಮಹಿಳೆಯರು ತಮ್ಮೊಂದಿಗೆ ಸಾಕಷ್ಟುಉಡುಗೊರೆಗಳನ್ನು ತಂದಿದ್ದರು. ಮೋಜಿನ ಮಾತುಕತೆ ಕೂಡ ನಡೆಯಿತು.ನಾವು ಒಟ್ಟಿಗೆ ಅಮೂಲ್ಯವಾದ ಉಡುಗೊರೆಗಳನ್ನು ಪಡೆದಿದ್ದೇವೆ. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮತ್ತು ಬಹಳಷ್ಟುಪ್ರೀತಿ’ ಎಂದಿದ್ದಾರೆ.

ಇತ್ತೀಚೆಗೆ ಆರ್‌ಜೆಡಿ ಸಂಸ್ಥಾಪಕ ಲಾಲು ಯಾದವ್‌ ಕೂಡ, ‘ಪ್ರಧಾನಿ ಆಗಬೇಕಾದವರು ಮದುವೆ ಆಗಿರಲೇಬೇಕು’ ಎಂದು ರಾಹುಲ್‌ರನ್ನು ಕಿಚಾಯಿಸಿದ್ದರು.
 

click me!