ಹದ್ದು-ಕಾಗೆ ಕಥೆ ಹೇಳಿ ದಳಪತಿ ಫ್ಯಾನ್ಸ್​ ಪಿತ್ತ ನೆತ್ತಿಗೇರಿಸಿದ್ರಾ ರಜನೀಕಾತ್? ಶುರುವಾಯ್ತು ಸ್ಟಾರ್​ ವಾರ್​

Published : Aug 07, 2023, 04:15 PM IST
ಹದ್ದು-ಕಾಗೆ ಕಥೆ ಹೇಳಿ ದಳಪತಿ ಫ್ಯಾನ್ಸ್​ ಪಿತ್ತ ನೆತ್ತಿಗೇರಿಸಿದ್ರಾ ರಜನೀಕಾತ್? ಶುರುವಾಯ್ತು ಸ್ಟಾರ್​ ವಾರ್​

ಸಾರಾಂಶ

ಕಾಲಿವುಡ್​ನಲ್ಲಿ  ಸ್ಟಾರ್​ ವಾರ್ ಶುರುವಾಗಿದ್ದು, ರಜನೀಕಾಂತ್​ ಮತ್ತು ದಳಪತಿ ವಿಜಯ್‌ ಫ್ಯಾನ್ಸ್​ ನಡುವೆ ತಿಕ್ಕಾಟ ಶುರುವಾಗಿದೆ. ಏನಿದು ಗಲಾಟೆ?  

ತಮಿಳು ಇಂಡಸ್ಟ್ರಿಯ ಸೂಪರ್​ ಸ್ಟಾರ್​ (SuperStanr) ಪಟ್ಟಕ್ಕಾಗಿ ಇಬ್ಬರು ಸ್ಟಾರ್​ ನಟರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಸಕತ್​ ಸದ್ದು ಮಾಡುತ್ತಿದೆ. ಒಂದೆಡೆ ರಜನೀಕಾಂತ್​ ಹಾಗೂ ಇನ್ನೊಂದೆಡೆ ದಳಪತಿ ವಿಜಯ್‌ ಈ ಇಬ್ಬರ ನಡುವೆ ಸ್ಟಾರ್ ಪಟ್ಟಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಅಷ್ಟಕ್ಕೂ ನೇರವಾಗಿ ಈ ಇಬ್ಬರು ನಟರು ಇದಕ್ಕಾಗಿ ಕಿತ್ತಾಟ ನಡೆಸುತ್ತಿರುವುದಲ್ಲ. ಬದಲಿಗೆ ಇಬ್ಬರ ಅಸಂಖ್ಯ ಅಭಿಮಾನಿಗಳ ನಡುವೆ ಜೋರಾದ ಕಿತ್ತಾಟ ಶುರುವಾಗಿದೆ. ರಜನಿಕಾಂತ್‌ ಅಭಿನಯದ 'ಜೈಲರ್‌' ಸಿನಿಮಾಕ್ಕೆ ಕ್ಷಣಗಣನೆಗೆ ಆರಂಭವಾಗಿರುವ ಬೆನ್ನಲ್ಲೇ ಈರ್ವರ ಫ್ಯಾನ್ಸ್ ನಡುವೆ ಸ್ಟಾರ್​ ಪಟ್ಟಕ್ಕಾಗಿ ಕಾದಾಟ ನಡೆದಿದೆ ಎಂದು ಸುದ್ದಿಯಾಗಿದೆ. ಜೈಲರ್​ ಬುಕ್ಕಿಂಗ್‌ ಕರ್ನಾಟಕ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಭರದಿಂದ ಸಾಗಿದೆ. ನಟ ಶಿವರಾಜ್​ಕುಮಾರ್​ ಅಭಿನಯಿಸಿರುವ ಹಿನ್ನೆಲೆಯಲ್ಲಿ ಕರ್ನಾಟದಲ್ಲಿಯೂ ಭರ್ಜರಿಯಾಗಿಯೇ ಬುಕ್ಕಿಂಗ್​ ನಡೆದಿದೆ ಎನ್ನಲಾಗುತ್ತಿದೆ. ಕರ್ನಾಟದಲ್ಲಿ ತಮಿಳು ವರ್ಷನ್‌ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಕಾಣಿಸುವುದರಿಂದ ಬೇಸರದ ನಡುವೆಯೇ ಶಿವಣ್ಣ ಅಭಿಮಾನಿಗಳು ಚಿತ್ರ ನೋಡಲು ಕಾಯುತ್ತಿದ್ದಾರೆ. 

ಅಷ್ಟಕ್ಕೂ ಈ ಇಬ್ಬರು ಫ್ಯಾನ್ಸ್​ (Fans) ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು  ಆಡಿಯೋ ಬಿಡುಗಡೆ ಸಮಾರಂಭವೊಂದರಲ್ಲಿ ನಟ ರಜನೀಕಾಂತ್​ ಅವರು ಕಾಗೆ ಮತ್ತು ಹದ್ದಿನ ಕಥೆ ಹೇಳಿದ ನಂತರದಲ್ಲಿ. ರಜನೀಕಾಂತ್​ ಬಿಡುಗಡೆ ಸಮಾರಂಭದಲ್ಲಿ,  'ಹದ್ದಿನ ಗಾತ್ರ ಹಾಗೂ ಅದರ ತಾಕತ್ತನ್ನು ಅರ್ಥ ಮಾಡಿಕೊಳ್ಳದೆ ಕಾಗೆ, ಅದರೊಂದಿಗೆ ಹೋರಾಡಲು ಪ್ರಯತ್ನಿಸುತ್ತದೆ. ಹಾಗೇ ಹದ್ದು ಹಾರುವಷ್ಟು ಎತ್ತರಕ್ಕೆ ಎಂದಿಗೂ ಕಾಗೆ ಹಾರಾಟಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಅಸಲಿಗೆ ಅವರು ಯಾರ ಹೆಸರನ್ನೂ ಎತ್ತಿರಲಿಲ್ಲ. ಆದರೆ, ಈ ಮಾತು ವಿಜಯ್‌ ಅಭಿಮಾನಿಗಳನ್ನು ಕೆರಳಿಸಿದೆ. ಇದಕ್ಕೆ ಕಾರಣ,  ರಜನಿಕಾಂತ್‌, ಆ ಮಾತುಗಳನ್ನು ಹೇಳಿರುವುದು ದಳಪತಿ  ವಿಜಯ್‌ ಕುರಿತಾಗಿ ಎನ್ನುವುದು ಅವರ ಫ್ಯಾನ್ಸ್​ ಮಾತು.

JAILER ಚಿತ್ರಕ್ಕೆ ರಜನಿಕಾಂತ್​ ಈ ಪರಿ ಸಂಭಾವನೆನಾ? ಶಿವರಾಜ್​ಕುಮಾರ್, ತಮನ್ನಾ​ ಪಡೆದದ್ದೆಷ್ಟು?
 
ಮೊದಲಿಗೆ ಯೂಟ್ಯೂಬರ್‌ ಒಬ್ಬರು ರಜನಿಕಾಂತ್‌ (Rajinikanth) ವಿರುದ್ಧ ಗರಂ ಆಗಿದ್ದರು.  ಸಟ್ಟೈ ಮಾರನ್‌ ಎಂಬ ಯೂಟ್ಯೂಬರ್‌ 'ಹದ್ದಿಗೆ ಮೇಲೆ ಏರುವ ಸಾಮರ್ಥ್ಯ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅದನ್ನು ಹೊರತುಪಡಿಸಿದರೆ ಹದ್ದು ಯಾವಾಗಲೂ ಏಕಾಂಗಿಯಾಗಿಯೇ ಇರುತ್ತೆ. ಹದ್ದಿಗೆ ಸ್ವಾರ್ಥ ಸ್ವಭಾವ ಇದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ತನ್ನ ಹೆಸರನ್ನು ಹೇಳಿಕೊಳ್ಳುವ ಧೈರ್ಯ ಇಲ್ಲ' ಎಂದು ಟ್ವೀಟ್‌ ಮಾಡಿದ್ದರು, ಅಲ್ಲಿಂದ ಈ ಗಲಾಟೆ ಹೊತ್ತಿಕೊಂಡಿದೆ. 

ಈ ಗಲಾಟೆ ರಜನಿ-ವಿಜಯ್ (Vijay Dalapathy) ಅಭಿಮಾನಿಗಳ  ಆನ್​ಲೈನ್​ ಘರ್ಷಣೆಯ ಟ್ರೆಂಡ್ ಆಗಿಯೂ ಮುಂದುವರೆದಿದೆ. ಜೈಲರ್ ಸಿನಿಮಾ ಪ್ರಮೋಷನ್​ನಲ್ಲಿ ಈ ವಿಚಾರ ಬಿಸಿ ತಟ್ಟಿದೆ. ಜೈಲರ್ ಚಿತ್ರದಲ್ಲಿ ಕಾಣಿಸಿಕೊಂಡಿರುವ 'ಹುಕುಂ' ಹಾಡು "ಉಂಗಕಪ್ಪನ್ ವಿಚಿತ್ರ ಕೇಟವನ್... ಪಟ್ಟತ್ತ ಫೊಕ್ಕ ಉದೋರ್ ಬೇರು" ಸೇರಿದಂತೆ ಆಕ್ರಮಣಕಾರಿ ಸಾಲುಗಳನ್ನು ಒಳಗೊಂಡಿದ್ದು, ಇದು ವಿಜಯ್​ ದಳಪತಿ ಅವರಿಗಾಗಿಯೇ ಇರುವುದು ಎಂದು ಫ್ಯಾನ್ಸ್​ ಕೆಂಗಣ್ಣು ಬೀರುತ್ತಿದ್ದಾರೆ. ಅಲ್ಲದೇ ಕಳೆದ ವಾರ ಜೈಲರ್ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರು ಹೇಳಿದ ಕಾಗೆ-ಗಿಡದ ಕಥೆ ವೈರಲ್ ಆಗಿದ್ದು, ವಿವಾದದ ತಾರಕಕ್ಕೇರಿದೆ. 

ಶಿವರಾಜ್‌ಕುಮಾರ್ ಅಭಿನಯದ 'ಜೈಲರ್' ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?