ಟೈಗರ್ ಶ್ರಾಫ್​ಗೆ ಶಾಕ್​ ನೀಡಿದ ದಿಶಾ ಪಟಾನಿ: ಹೊಸ ಬಾಯ್​ಫ್ರೆಂಡ್​ ಪರಿಚಯಿಸಿದ ನಟಿ!

By Suvarna News  |  First Published Aug 7, 2023, 1:04 PM IST

 ಟೈಗರ್ ಶ್ರಾಫ್ ಹಾಗೂ  ದಿಶಾ ಪಟಾನಿ ಸಂಬಂಧದಲ್ಲಿ ಇದ್ದಾರೆ ಎನ್ನುವ ನಡುವೆಯೇ ದಿಶಾ ಹೊಸ ಬಾಯ್​ಫ್ರೆಂಡ್​ ಪರಿಚಯಿಸಿ ಎಲ್ಲರಿಗೂ ಶಾಕ್​  ಕೊಟ್ಟಿದ್ದಾರೆ. ಯಾರು ಈ ಹೊಸ ಸ್ನೇಹಿತ?
 


ಬಾಲಿವುಡ್ ನಟಿ ದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ.  ಸಮುದ್ರ ತೀರವನ್ನು ತುಂಬಾ ಇಷ್ಟಪಡುವ ನಟಿ ಅಲ್ಲಿಯೇ ಫೋಟೋಶೂಟ್​  ಮಾಡಿಸಿಕೊಳ್ಳುವುದು ಹೆಚ್ಚು.  ಆಗಾಗ್ಗೆ ಸಮುದ್ರ ತೀರದಲ್ಲಿ ತಮ್ಮ  ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ದಿಶಾ  ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದರು. ಇದರಲ್ಲಿ   ಬಿಕಿನಿಯಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು ಬಹಳ ಟ್ರೋಲ್​ಗೆ ಒಳಗಾಗಿದ್ದರು. ಆದರೂ ದಿಶಾ ಪಟಾನಿ ತಮ್ಮ ಧೈರ್ಯಶಾಲಿ ಫ್ಯಾಷನ್ ಸೆನ್ಸ್‌ಗಾಗಿ ಹೊಗಳಿಕೆ, ತೆಗಳಿಕೆಗೆ ಒಳಗಾಗುತ್ತಲೇ ಇರುತ್ತಾರೆ. ಎಷ್ಟೇ ಟ್ರೋಲ್​ಗೆ ಒಳಗಾದರೂ  ವಿಚಲಿತರಾಗದೇ ಉಳಿಯುವುದೇ ವಿಶೇಷ. ಸದ್ಯ ನಟಿ, ‘ಯೋಧ’, ‘ಕಂಗುವಾ’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಬಾಲಿವುಡ್ ಸಿನಿಮಾಗಳ​​ ಜೊತೆ ದಕ್ಷಿಣ ಭಾರತದಲ್ಲೂ ಬಿಜಿ  ಆಗಿದ್ದಾರೆ.

ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದು,  ಯಾವಾಗಲೂ ಸುದ್ದಿಯಲ್ಲಿರುತ್ತಾರೆ.  ಇದೀಗ ಹೊಸ ಬಾಯ್​ಫ್ರೆಂಡ್​ ಪರಿಚಯಿಸಿ ಸಕತ್​ ಟ್ರೋಲ್​ ಆಗುತ್ತಿದ್ದಾರೆ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ  ಲವ್, ಬ್ರೇಕಪ್, ಡಿವೋರ್ಸ್​, ಅಕ್ರಮ ಸಂಬಂಧ, ಲಿವ್​ ಇನ್​  ಎಲ್ಲವೂ ಕಾಮನ್ನೇ. ಅದರಲ್ಲೇನೂ ಹೊಸ ವಿಷಯವಿಲ್ಲ. ಅದೇ ರೀತಿ ದಿಶಾ ಪಟಾನಿ ಕೂಡ ಈಗ ತಮ್ಮ ಬಾಯ್​ಫ್ರೆಂಡ್​ ಜಾಕಿ ಶ್ರಾಫ್​ ಪುತ್ರ ಟೈಗರ್ ಶ್ರಾಫ್ (Tiger Shroff)ಗೆ ಶಾಕ್​ ನೀಡಿದ್ದಾರೆ. ಟೈಗರ್​ ಮತ್ತು ದಿಶಾ ಹಲ ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಕೋವಿಡ್ ಲಾಕ್​ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ.  ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ಒಟ್ಟಿಗೇ ಮಾತ್ರ ಇದ್ದ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದವು.

Tap to resize

Latest Videos

ಊದಿಕೊಂಡ ದಿಶಾ ಪಟಾಣಿ ಮುಖ! ಎಲ್ಲೆಲ್ಲಿ ಕತ್ತರಿ ಹಾಕಿಸಿಕೊಂಡ್ರಿ ಎಂದ ಟ್ರೋಲಿಗರು

ಆದರೆ ಈಗ ದಿಶಾ ಉಲ್ಟಾ ಹೊಡೆದಿದ್ದಾರೆ. ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಆಯ್ತಾ ಎಂಬ ಅನುಮಾನಗಳು ಕಾಡತೊಡಗಿದೆ. ಇದಕ್ಕೆ ಕಾರಣ, ಈಕೆ ಈಗ  ಹೊಸ ಬಾಯ್‌ಫ್ರೆಂಡ್‌ನನ್ನು ಪರಿಚಿಯಿಸಿದ್ದಾರೆ. ಈ ಹೊಸ ಬಾಯ್​ಫ್ರೆಂಡ್​ ಅಂದಹಾಗೆ ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic). ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್ ಎಂದು ಅನೇಕ ಬಾರಿ ಇವರು ಹೇಳಿಕೊಂಡಿದ್ದಾರೆ. ಆದರೆ, ಈಗ ಅವರು ಖುದ್ದು ಸ್ನೇಹಿತ ಎಂದು ಪರಿಚಯಿಸಿದ್ದು, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. 

ಇದರ ವಿಡಿಯೋ ವೈರಲ್​ ಆಗಿದೆ.  ದಿಶಾ ತಮ್ಮ ಸ್ನೇಹಿತರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿದ್ದಾರೆ. ‘ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವನ್ನು ವಿಡಿಯೋದಲ್ಲಿ ಕೇಳಬಹುದು.  ಇದರಿಂದ ಟೈಗರ್​ ಶ್ರಾಫ್​ ಫ್ಯಾನ್ಸ್​ ಕಂಗಾಲಾಗಿದ್ದಾರೆ. ಈ ವಿಡಿಯೋಗೆ ಸಕತ್​ ಕಮೆಂಟ್​ಗಳು ಬರುತ್ತಿದ್ದು, ಟೈಗರ್​ ಶ್ರಾಫ್​ ಅವರ ಸ್ಥಿತಿ ಕಂಡು ಹಲವರು ಮರುಗಿದ್ದಾರೆ.  ಅಂದಹಾಗೆ ದಿಶಾ ಮತ್ತು  ಟೈಗರ್ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ. ನಂತರ ಬಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು ಎನ್ನಲಾಗಿದೆ. ಇಷ್ಟಿದ್ದರೂ ಜೋಡಿ ಜೊತೆಜೊತೆಯಾಗಿಯೇ ಹೋದರೂ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಈಗ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. 

ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಲಗ್ನಪತ್ರಿಕೆ ಹಂಚಿದ ಹರ್ಷಿಕಾ-ಭುವನ್​ ಜೋಡಿ!

 

click me!