ಒಂದು ರಾತ್ರಿಯೂ ಪತಿ ಸೈಫ್ ನನ್ನ ಜೊತೆ ಇರಲಿಲ್ಲ, ಕರೀನಾ ಕಪೂರ್ ಹೀಗಂದಿದ್ದೇಕೆ?

Published : Apr 03, 2025, 05:25 PM ISTUpdated : Apr 03, 2025, 06:18 PM IST
ಒಂದು ರಾತ್ರಿಯೂ ಪತಿ ಸೈಫ್ ನನ್ನ ಜೊತೆ ಇರಲಿಲ್ಲ, ಕರೀನಾ ಕಪೂರ್ ಹೀಗಂದಿದ್ದೇಕೆ?

ಸಾರಾಂಶ

ಪತಿ ಸೈಫ್ ಆಲಿ ಖಾನ್ ಒಂದು ರಾತ್ರಿಯೂ ನನ್ನ ಜೊತೆ ಇರಲಿಲ್ಲ. ಕರೀನಾ ಕಪೂರ್ ಹೇಳಿದೆ ಈ ಮಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಕರೀನಾ ಕಪೂರ್ ಹೇಳಿದ್ದೇನು? 

ಮುಂಬೈ(ಏ.03) ಬಾಲಿವುಡ್ ಸೆಲೆಬ್ರೆಟಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ವೈವಾಹಿಕ ಜೀವನದಲ್ಲಿ ಎದುರಾದ ಅತೀ ದೊಡ್ಡ ಸವಾಲು ಎಂದರೆ ಇತ್ತೀಚೆಗೆ ನಡೆದ ದಾಳಿ. ಈ ದಾಳಿ ಹಲವು ಅನುಮಾನಕ್ಕೂ ಕಾರಣವಾಗಿದೆ. ಆದರೆ ಇದನ್ನು ಹೊರತುಪಡಿಸಿದರೆ ಕರೀನ್ ಕಪೂರ್ ಹಾಗೂ ಸೈಫ್ ಆಲಿ ಖಾನ್ ವೈವಾಹಿಕ ಜೀವನ ಸಂತೋಷವಾಗಿದೆ. ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಇದೀಗ ಕರೀನಾ ಕಪೂರ್ ಹೇಳಿದ ಮಾತೊಂದು ಭಾರಿ ವೈರಲ್ ಆಗುತ್ತಿದೆ. ಪತಿ ಸೈಫ್ ಆಲಿ ಖಾನ್ ನನ್ನ ಜೊತೆ ಒಂದು ರಾತ್ರಿಯೂ ಇರಲಿಲ್ಲ ಎಂದಿರುವ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಕರೀನಾ ಕಪೂರ್ ಹೀಗಂದಿದ್ದೇಕೆ?
ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ದಂಪತಿಗೆ ತೈಮೂರ್ ಹಾಗೂ ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ಸಂಬಂಧ ಉತ್ತಮವಾಗಿದೆ. ಕೆಲ ಊಹೂಪೋಹಗಳು ಕೇಳಿಬಂದರೂ ಅಸಲಿಗೆ ಮನಸ್ತಾಪ, ಬಿರಕು ಏನೂ ಇಲ್ಲ. ಪತಿ ಪತ್ನಿಯಾಗಿ, ಕುಟುಂಬವಾಗಿ ಸೈಫ್ ಹಾಗೂ ಕರೀನಾ ಚೆನ್ನಾಗಿದ್ದಾರೆ. ಹೀಗಿರುವಾಗ ಕರೀನಾ ಕಪೂರ್ ಹೇಳಿದ ಹಳೇ ವಿಡಿಯೋ ಮಾತ್ರ ಸಂಚಲನ ಸೃಷ್ಟಿಸಿದ್ದೇಕೆ ಅನ್ನೋ ಕುತೂಹಲ ಮನೆ ಮಾಡಿದೆ. ಇದಕ್ಕೆ ಕರೀನಾ ಕಪೂರ್ ಸಂಪೂರ್ಣ ಮಾತುಗಳಲ್ಲೇ ಇದೆ. ಕರೀನಾ ಕಪೂರ್ ವಿಡಿಯೋದ ಕೆಲ ತುಣುಕು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣ ಗೊಂದಲ ಸೃಷ್ಟಿಯಾಗಿದೆ.

ಕರೀನಾ-ಜಾನ್ವಿ ಆಫ್ ಶೋಲ್ಡರ್ ಗೌನ್‌ನಲ್ಲಿ ಮಿರಮಿರ ಮಿಂಚಿಂಗ್.. ಭಾರೀ ಹವಾ, ಫೋಟೋಸ್ ವೈರಲ್!

ಒಂದು ವಾರ ಜೊತೆಗಿದ್ದೆ
ಅಸಲಿಗೆ ಕರೀನಾ ಕಪೂರ್ , ರಣಬೀರ್ ಕಪೂರ್ ಪತಿಯಾಗಿ ತೆಗೆದುಕೊಂಡ ಜವಾಬ್ದಾರಿ ಕುರಿತು ಹೇಳಿದಾಗ ಕರೀನಾ ಪ್ರತಿಕ್ರಿಯಿಸಿದ ಮಾತಿದು. ಟಿವಿ ಶೋ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಹಾಗೂ ಕರೀನಾ ಕಪೂರ್ ಮಾತುಕತೆ ನಡುವೆ ಈ ಮಾತು ಹೇಳಲಾಗಿದೆ. ಆದರೆ ಸಂಪೂರ್ಣ ಮಾತು ಕೇಳಿಸಿಕೊಂಡರೆ ಗೊಂದಲ ಸೃಷ್ಟಿಯಾಗುವುದಿಲ್ಲ. ರಣಬೀರ್ ಕಪೂರ್ ಪುತ್ರಿ ರಾಹಾ ಜನನದ ವೇಳೆ ಪತಿಯಾಗಿ ರಣಬೀರ್ ಕಪೂರ್ ಏನು ಮಾಡಿದ್ದರು ಎಂದು ವಿವರಿಸಿದ್ದರು. ಆಲಿಯಾ ಭಟ್ ಪ್ರೆಗ್ನೆಂಟ್ ಆದ ಬಳಿಕ ಹೆಚ್ಚು ಸಮಯ ಆಲಿಯಾ ಜೊತೆ ಕಳೆಯುತ್ತಿದ್ದೆ. ಕೊನೆಯ 3 ತಿಂಗಳು ನಾನು ಕೆಲಸದಿಂದ ಬ್ರೇಕ್ ಪಡೆದು ಆಕೆಯ ಜೊತೆಗಿದ್ದೆ. ಇನ್ನು ಡೆಲಿವರಿ ವೇಳೆ ಒಂದು ವಾರ ಆಲಿಯಾ ಜೊತೆ ಆಸ್ಪತ್ರೆಯಲ್ಲಿದ್ದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕರೀನಾ ಕಪೂರ್, ಲವ್ಲೀ ಹಸ್‌ಬ್ಯಾಂಡ್. ಪತಿ ಎಂದರೇ ಹೀಗಿರಬೇಕು. ನಾನು ಎರಡು ಮಕ್ಕಳನ್ನು ಡೆಲಿವರಿ ಆದಾಗ ಸೈಫ್ ಆಲಿ ಖಾನ್ ಒಂದು ದಿನವೂ ನನ್ನ ಜೊತೆ ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ಕರೀನಾ ಕಪೂರ್ ಹೇಳಿದ್ದಾರೆ. 

ಸೈಫ್ ಕರೀನಾ ವೈವಾಹಿಕ ಜೀವನ
2012ರಲ್ಲಿ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2016ರಲ್ಲಿ ಈ ಜೋಡಿ ಮೊದಲ ಮಗುವಿಗೆ ಪೋಷಕರಾಗಿದ್ದಾರೆ.ಮಗ ತೈಮೂರು ಬಳಿಕ 2021ರಲ್ಲಿ ಎರಡನೇ ಮಗ ಜೇಹ್‌ಗೆ ಪೋಷಕರಾಗಿದ್ದರೆ.  

ರಣಬೀರ್ ಕಪೂರ್-ಆಲಿಯಾ
2022ರ ಎಪ್ರಿಲ್ 14 ರಂದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹವಾಗಿದ್ದಾರೆ. ನವೆಂಬರ್ 2022ರಲ್ಲಿ ಪೋಷಕರಾಗಿದ್ದಾರೆ. ರಣಬೀರ್ ಕಪೂರ್ ಪುತ್ರಿ ರಾಹಾ ಹಾಗೂ ಪತ್ನಿ ಆಲಿಯಾ ಭಟ್ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ರಣಬೀರ್ ಕಪೂರ್ ಹಾಗೂ ಆಲಿಯಾ ದಂಪತಿ ಎರಡನೇ ಮಗುವಿನ ಪ್ಲಾನ್‌ನಲ್ಲಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.

ಬಾಲಿವುಡ್ ನ ಈ ಸೂಪರ್ ಸ್ಟಾರ್ ನಟಿಯರಿಗೆ ಒಬ್ಬರ ಮುಖ ಇನ್ನೊಬ್ಬರಿಗೆ ಕಂಡ್ರೇನೆ ಆಗಲ್ಲ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!