Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

Published : Feb 07, 2023, 06:27 PM IST
Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

ಸಾರಾಂಶ

ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿರೋ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಸ್ಟೋರಿ ಈಗ ಕುತೂಹಲದ ಘಟ್ಟ ತಲುಪಿದ್ದು, ಗರ್ಲ್​ಫ್ರೆಂಡ್​ ಎಂಟ್ರಿ ಕೊಟ್ಟಿದ್ದಾಳೆ. ಏನಿವರ ಕಥೆ?  

ನಟಿ ರಾಖಿ ಸಾವಂತ್​ (Rakhi Sawant) ಮದುವೆ ಮತ್ತೆ ಡೋಲಾಯಮಾನವಾಗಿದೆ. ಕೆಲ ತಿಂಗಳ ಹಿಂದೆ ಮೈಸೂರಿನ ನಿವಾಸಿ,  ತಮಗಿಂತ ನಾಲ್ಕು ವರ್ಷ ಚಿಕ್ಕವನಾಗಿರುವ ವ್ಯಕ್ತಿ ಆದಿಲ್​ ಖಾನ್ ದುರ್ರಾನಿಯನ್ನು (Adil Khan Durrani)ಮದುವೆಯಾದಾಗಿನಿಂದಲೂ ಇವರ ಮದುವೆ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇದೆ. ಮದುವೆಯಾಗಿದ್ದನ್ನು ಮುಚ್ಚಿಟ್ಟಿದ್ದರೂ ಕೊನೆಗೆ ಖುದ್ದು ರಾಖಿಯೇ ಅದನ್ನು ಬಹಿರಂಗಪಡಿಸಿದ್ದರು. ಇಸ್ಲಾಂ ಧರ್ಮವನ್ನೂ ಒಪ್ಪಿಕೊಂಡು  ಬುರ್ಖಾ ಧರಿಸಿ ಮಾಧ್ಯಮಗಳ ಮುಂದೆಯೂ ಹೇಳಿಕೊಂಡಿದ್ದರು. ಇಷ್ಟೆಲ್ಲಾ ಆದರೂ ತಾವು ಮದುವೆಯೇ ಆಗಿಲ್ಲ ಎಂದು ಆದಿಲ್​  ಖಾನ್​ ಹೇಳುತ್ತಲೇ ಬಂದಿದ್ದರೂ ಕೊನೆಗೂ ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಇಲ್ಲಿಗೆ ಇವರ ಮದುವೆ ಅಂತೂ ಸುಖಾಂತ್ಯವಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿಯೇ ಮತ್ತು ದಾಂಪತ್ಯದಲ್ಲಿ (Married life) ಕಿರಿಕ್​  ಶುರುವಾಯಿತು. ಪತಿ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ರಾಖಿ ಸಾಮಾಜಿಕ ಜಾಲತಾಣದಲ್ಲಿ ಗೋಳು ತೋಡಿಕೊಂಡರು. ನಂತರ ತಾವು ಫ್ರಿಡ್ಜ್​ (Fridge) ಒಳಗೆ ಹೋಗಲು ಇಷ್ಟಪಡುವುದಿಲ್ಲ ಎಂದೂ ಹೇಳಿಕೊಂಡರು. ಇವೆಲ್ಲಾ ಗಲಾಟೆಯ ನಡುವೆಯೇ ಕೊನೆಗೆ  ಪತಿ ವಿರುದ್ಧ ದೂರನ್ನೂ ದಾಖಲು ಮಾಡಿದರು.

ಅಷ್ಟಕ್ಕೂ ರಾಖಿ ಸಾವಂತ್​ ಹೇಳುತ್ತಿದ್ದುದು ತಮ್ಮ ಪತಿ ಆದಿಲ್ ಖಾನ್​ ಬೇರೊಬ್ಬ ಹುಡುಗಿಯ ಜೊತೆ ಅಕ್ರಮ ಸಂಬಂಧ (Illegal relation) ಹೊಂದಿದ್ದಾರೆ ಎನ್ನುವುದು. ಇದೀಗ ಆಕೆಯ ಹೆಸರನ್ನೂ ಬಹಿರಂಗಪಡಿಸಿರುವ ರಾಖಿ, ಆಕೆಯ ಸಂಪೂರ್ಣ ಜಾತಕ ತೆರೆದಿಟ್ಟಿದ್ದಾಳೆ. ಅಂದಹಾಗೆ ರಾಖಿಗೆ ಈಗ 44 ವರ್ಷ ವಯಸ್ಸು. ಆದಿಲ್​ ಖಾನ್​ಗೆ 40 ವರ್ಷವಾದರೆ, ಆತ ಅಕ್ರಮ ಸಂಬಂಧದಲ್ಲಿ ಇದ್ದಾನೆ ಎಂಬಾಕೆಗೆ ಈಗ ವಯಸ್ಸು 37. ರಾಖಿಯ ಪ್ರಕಾರ, ತಮ್ಮ ಪತಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ರಾಖಿ ಆರೋಪಿಸುತ್ತಿರುವಾಕೆಯ ಹೆಸರು ತನು ಚಂದೇಲ್​. ಸಮಯ ಬಂದಾಗ ಈ ಅಕ್ರಮ ಸಂಬಂಧ ಹೊಂದಿರುವಾಕೆಯ ಹೆಸರು ಬಹಿರಂಗಪಡಿಸುತ್ತೇನೆ ಎಂದಿದ್ದ ರಾಖಿ ಕೊನೆಗೂ ಅದನ್ನು ಮಾಡಿದ್ದಾರೆ. ಪತಿ ಸುಧಾರಿಸದಿದ್ದರೆ, ಅಕ್ರಮ ಸಂಬಂಧ ಮುಂದುವರೆಸಿದ್ದರೆ ಆಕೆಯ ಹೆಸರನ್ನು ಖುಲ್ಲಂಖುಲ್ಲಾ ಮಾಡುವುದಾಗಿ ರಾಖಿ ಹೇಳಿದ್ದರು. ಈಗ ಆ ಕೆಲಸ ಮಾಡಿದ್ದಾರೆ.

ರಾಖಿ ಸಾವಂತ್ ದೂರಿನ ಬೆನ್ನಲ್ಲೇ ಪತಿ ಆದಿಲ್ ಖಾನ್ ಪೊಲೀಸರ ವಶಕ್ಕೆ

ಅಸಲಿಗೆ, ತನು ಚಂದೇಲ್​ ಅವರ ನಿಜವಾದ ಹೆಸರು ನಿವೇದಿತಾ ಚಾಂಡೇಲ್​ (Nivedita Chandel) ಎಂದು ರಾಖಿ ಹೇಳಿದ್ದಾರೆ. 37 ವರ್ಷದ ತನು ಉದ್ಯಮಿಯಾಗಿದ್ದು, ಐಐಟಿ ಪದವೀಧರೆ. ಈಕೆ  ಇಂದೋರ್ ಮೂಲದವರು. ಅಲ್ಲೊಂದು ಫ್ಲಾಟ್ ಕೂಡ ಇದೆ. ಈಕೆಯ ಬಳಿ ಸ್ವಂತ ಬಿಎಂಡಬ್ಲ್ಯು ಕಾರು ಇದೆ.  ಬಾಲಿವುಡ್​ನಲ್ಲಿ ನೆಲೆಯೂರಲು ಕಳೆದ 8 ವರ್ಷಗಳಿಂದ ಹೆಣಗಾಡುತ್ತಿರುವ ತನು,  ಕೆಲವು ಸಣ್ಣ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ರಾಖಿ ಹೇಳಿದ್ದಾರೆ. ಇಷ್ಟೇ ಅಲ್ಲದೇ ತನುವಿನ ಜೀವನದ ಕುರಿತು ಸಂಪೂರ್ಣ ತನಿಖೆ ಮಾಡಿರುವ ರಾಖಿ, ತನು ಒಬ್ಬ ಟಿಕ್​ಟಾಕರ್​. ಈಕೆಯ ಇನ್​ಸ್ಟಾಗ್ರಾಮ್​ನಲ್ಲಿ 6.04 ಲಕ್ಷ ಫಾಲೋವರ್ಸ್​ ಇದ್ದಾರೆ. ಅದರಲ್ಲಿ ಆದಿಲ್​ ಖಾನ್​ ಕೂಡ ಒಬ್ಬರು ಎಂದಿರೋ ರಾಖಿ, ಆದಿಲ್​ ಖಾನ್​ ಇನ್​ಸ್ಟಾಗ್ರಾಮ್​ ಅನ್ನು ತನು ಕೂಡ ಫಾಲೋ (Follow) ಮಾಡುತ್ತಿದ್ದಾರೆ ಎಂದಿದ್ದಾರೆ. 

'ನಾನು ಬಿಗ್ ಬಾಸ್ (Bigg Boss) ಮರಾಠಿಯ ಸೀಸನ್​ 4ನಲ್ಲಿದ್ದಾಗ ಅವರ ಜೀವನದಲ್ಲಿ ತನು ಬಂದಿದ್ದಾಳೆ. ಇವರಿಬ್ಬರ ನಡುವೆ ಜೋರಾಗಿ ಅಫೇರ್ ಶುರುವಾಗಿತ್ತು. ಐದು ವಾರಗಳ ಬಳಿಕ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಾಗ ನನಗೆ  ಈ ವಿಷಯ ತಿಳಿಯಿತು. ಆದಾಗ್ಯೂ ಅವರು ಈ ಸಂಬಂಧವನ್ನು ಬಿಟ್ಟುಬಿಡುವಂತೆ  ಮನವೊಲಿಸಲು ಪ್ರಯತ್ನಿಸಿದೆ. ಇದರ ನಡುವೆ ನನ್ನ ತಾಯಿಯೂ ಆರೋಗ್ಯವೂ ಕೆಟ್ಟಿತ್ತು. ಅತ್ತ ಅವರಿಬ್ಬರ ಅಕ್ರಮ ಸಂಬಂಧ ಮುಂದುವರಿದಿದೆ' ಎಂದು ರಾಖಿ ಹೇಳಿದ್ದಾರೆ. ಇಷ್ಟೆಲ್ಲಾ ಹೇಳಿಕೊಂಡಿರುವ ರಾಖಿ ಇದೇ ಹುಡುಗಿಯ ಜೊತೆ ಪತಿ ಅಕ್ರಮ ಸಂಬಂಧ ಹೊಂದಿರುವುದು ಎಂದು ಸಂಪೂರ್ಣವಾಗಿ ದೃಢಪಟ್ಟಿಲ್ಲ ಎಂದೂ ಹೇಳಿದ್ದು, 99% ಇವಳೇ ಎನ್ನುವುದು ತಿಳಿದಿದೆ. ಏಕೆಂದರೆ ಇಬ್ಬರೂ ಪರಸ್ಪರ ಇನ್​ಸ್ಟಾದಲ್ಲಿ ಫಾಲೋವರ್ಸ್ (Followers) ಆಗಿದ್ದಾರೆ ಎಂದಿದ್ದಾರೆ.  

Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?
ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!