ಪ್ಯಾನ್ ಇಂಡಿಯಾ ಸ್ಟಾರ್ ಎಂದ ನಿರೂಪಕ; ಸಿಟ್ಟಾದ ನಟ ವಿಜಯ್ ಸೇತುಪತಿ ಹೇಳಿದ್ದೇನು?

Published : Feb 07, 2023, 06:13 PM ISTUpdated : Feb 07, 2023, 06:17 PM IST
ಪ್ಯಾನ್ ಇಂಡಿಯಾ ಸ್ಟಾರ್ ಎಂದ ನಿರೂಪಕ; ಸಿಟ್ಟಾದ ನಟ ವಿಜಯ್ ಸೇತುಪತಿ ಹೇಳಿದ್ದೇನು?

ಸಾರಾಂಶ

ಪ್ಯಾನ್ ಇಂಡಿಯಾ ಸ್ಟಾರ್ ಎಂದ ಕರೆದರೆ ವಿಜಯ್ ಸೇತುಪತಿ ಕೋಪಗೊಳ್ಳುತ್ತಾರೆ. ನಾನೊಬ್ಬ ನಟ ಅಷ್ಟೆ ಎಂದು ಸೇತುಪತಿ ಹೇಳುತ್ತಾರೆ.  

ಸೌತ್ ಸ್ಟಾರ್, ವಿಜಯ್ ಸೇತುಪತಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ.ಎನ್ ಟಿ ಆರ್, ರಾಮ್ ಚರಣ್, ಅಲ್ಲು ಅರ್ಜುನ್, ಪ್ರಭಾಸ್ ಹಾಗೆ ವಿಜಯ್ ಸೇತುಪತಿ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅನೇಕ ಸ್ಟಾರ್ ಕಲಾವಿದರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಕರೆಸಿಕೊಳ್ಳುವುದೇ ಒಂದು ಸಂಭ್ರಮ. ಆದರೆ ವಿಜಯ್ ಸೇತುಪತಿ ಹಾಗಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಎಂದು ಕರೆದರೆ ಕೋಪಗೊಳ್ಳುತ್ತಾರೆ. ಹಾಗೆ ಕರಿಯಬೇಡಿ ಎಂದು ಅನೇಕ ಬಾರಿ ಹೇಳಿದ್ದುಂಟು. ಇದೀಗ ಸಂದರ್ಶನದಲ್ಲಿ ನಿರೂಪಕರೊಬ್ಬರು ಪ್ಯಾನ್ ಇಂಡಿಯಾ ಸ್ಟಾರ್ ಎಂದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ತಾನು ಕೇವಲ ನಟ ಮಾತ್ರ ಎಂದು ಹೇಳಿದ್ದಾರೆ. 

ಗಲಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಎಂದಿದ್ದಕ್ಕೆ ಸೇತುಪತಿ ಸಿಟ್ಟಾಗಿದ್ದಾರೆ. 'ಇಲ್ಲ ಸರ್, ನಾನೊಬ್ಬ ನಟ' ಎಂದು ಹೇಳಿದ್ದಾರೆ. 'ಪ್ಯಾನ್ ಇಂಡಿಯಾ ಹೇಳಿಕೆ ನನಗೆ ಸಮಾಧಾನ ನೀಡುವುದಿಲ್ಲ. ಕೊಲವೊಮ್ಮೆ ಒತ್ತಡ ನೀಡುತ್ತದೆ. ನಾನು ಕೇವಲ ನಟ ಮತ್ತು ಅದರ ಅಡಿಯಲ್ಲಿ ಲೇಬಲ್ ಹಾಕುವ ಅಗತ್ಯವಿಲ್ಲ' ಎಂದು ಹೇಳಿದರು. ಅನೇಕ ದಕ್ಷಿಣ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪ್ರಭಾಸ್ ಸೇರಿದಂತೆ ಕೆಲವರು ಸಾಮಾನ್ಯವಾಗಿ ಬಳಸುವ 'ಪ್ಯಾನ್-ಇಂಡಿಯಾ' ಪದದ ಅಭಿಮಾನಿಗಳಲ್ಲ ಎಂದು ವ್ಯಕ್ತಪಡಿಸಿದರು.

ಶಾರುಖ್ ಜೊತೆ ಕೆಲಸ ಮಾಡ್ತಿದ್ದೀನಿ ಅಂದ್ರೆ ಮಾತ್ರ ಗೌರವಿಸ್ತಾರೆ; ಹಿಂದಿ ಮಂದಿಗೆ ವಿಜಯ್ ಸೇತುಪತಿ ತರಾಟೆ

'ಪ್ಯಾನ್ ಇಂಡಿಯಾ' ಬಗ್ಗೆ ದುಲ್ಕರ್ ಸಲ್ಮಾನ್ ಅಸಮಾಧಾನ

ಈ ಹಿಂದೆ ಸಂದರ್ಶನವೊಂದರಲ್ಲಿ ದುಲ್ಕರ್ ಸಲ್ಮಾನ್, 'ಪ್ಯಾನ್-ಇಂಡಿಯಾ ಎಂಬ ಪದವು ನನ್ನನ್ನು ನಿಜವಾಗಿಯೂ ಕೆರಳಿಸುತ್ತದೆ. ಅದನ್ನು ಕೇಳಲು ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭೆಗಳ ವಿನಿಮಯ ನಡೆಯುತ್ತಿದೆ ಎಂದು ನಾನು ಪ್ರೀತಿಸುತ್ತೇನೆ, ಅದು ಅದ್ಭುತವಾಗಿದೆ, ನಾವೆಲ್ಲ ಒಂದೇ ದೇಶದವರು. ಯಾರಾದರೂ ಪ್ಯಾನ್-ಅಮೆರಿಕಾ ಎಂದು ಹೇಳುತ್ತಾರಾ ಇಲ್ಲ. ಸ್ವೀಟ್ ಆಗಿ ಹೇಳಿದರೂ ನನಗೆ ಅದು ಇಷ್ಟವಿಲ್ಲ' ಎಂದು ಹೇಳಿದ್ದರು. 

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

ವಿಜಯ್ ಸೇತುಪತಿ ಬಳಿ ಇರುವ ಸಿನಿಮಾಗಳು  

ವಿಜಯ್ ಸೇತುಪತಿ ಸದ್ಯ ಹಿಂದಿಯ ಫರ್ಜಿ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವೆಬ್ ಸೀರಿಸ್ ಜೊತೆಗೆ ವಿಜಯ್ ಸೇತುಪತಿ ಅನೇಕ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಮೊದಲು ಬಾರಿಗೆ ಶಾರುಖ್ ಖಾನ್ ಜೊತೆ ಸೇತುಪತಿ ನಟಿಸುತ್ತಿದ್ದಾರೆ. ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದ್ದು ಸಾಕಷ್ಟು ಚಿತ್ರೀಕರಣ ಸಹ ಮುಗಿಸಿದ್ದಾರೆ. ಸದ್ಯದಲ್ಲೇ ಸೇತುಪತಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ಪಠಾಣ್ ಸಕ್ಸಸ್ ನಲ್ಲಿರುವ ಶಾರುಖ್ ಈ ವರ್ಷ ಜುಲೈ ತಿಂಗಳ ಸಮಯದಲ್ಲಿ ಜವಾನ್ ಆಗಿ ತೆರೆಮೇಲೆ ಬರುವ ಸಾಧ್ಯತೆ ಇದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನಿಮ್ಮಂತಹ ದ್ವೇಷಿಯನ್ನು ನಾನು ನೋಡಿಲ್ಲ': ಧಾರ್ಮಿಕ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದ ಎಆರ್ ರೆಹಮಾನ್ ವಿರುದ್ಧ ಕಂಗನಾ ಕಿಡಿ!
ಸೈಬರ್ ಕಿಡಿಗೇಡಿಗಳ ವಿರುದ್ಧ ನಟಿ ಅನಸೂಯಾ ಭಾರದ್ವಾಜ್ ಯುದ್ಧ: 42 ಜನರ ವಿರುದ್ಧ ಎಫ್‌ಐಆರ್ ದಾಖಲು!