ಡೇಟಿಂಗ್​ನಲ್ಲಿರೋ ಹೃತಿಕ್ ರೋಷನ್​ ಮಗನಿಗೆ ಇಂದು 17ರ ಸಂಭ್ರಮ

Published : Mar 28, 2023, 07:43 PM IST
ಡೇಟಿಂಗ್​ನಲ್ಲಿರೋ ಹೃತಿಕ್ ರೋಷನ್​ ಮಗನಿಗೆ ಇಂದು 17ರ ಸಂಭ್ರಮ

ಸಾರಾಂಶ

ನಟ ಹೃತಿಕ್​ ರೋಷನ್​ ಮತ್ತು ಸುಸಾನ್​ ದಂಪತಿಯ ಹಿರಿಯ ಪುತ್ರ ರೆಹಾನ್​ ರೋಷನ್​ಗೆ ಇಂದು 17ನೇ ಹುಟ್ಟುಹಬ್ಬದ ಸಂಭ್ರಮ. ಆತನ ಅಮ್ಮ ಹೇಳಿದ್ದೇನು?   

ಒಂದೊಮ್ಮೆ ಬಲು ಬೆಸ್ಟ್​ ಜೋಡಿ ಎನಿಸಿಕೊಂಡಿದ್ದು ಹೃತಿಕ್​ ರೋಷನ್​ ಮತ್ತು ಸುಸಾನ್​ ಖಾನ್​ ಜೋಡಿ. 200ನೇ ಸಾಲಿನಲ್ಲಿ ಮದುವೆಯಾಗಿದ್ದ ಈ ಜೋಡಿಗೆ  ಅದೇನಾಯಿತೋ ಗೊತ್ತಿಲ್ಲ.  ತಾವಿಬ್ಬರೂ ವಿವಾಹ ವಿಚ್ಛೇದನದ ಮೂಲಕ ಬೇರ್ಪಡುತ್ತಿದ್ದೇವೆ ಎಂದು ಡಿಸೆಂಬರ್ 13, 2013ರಲ್ಲಿ ಈ ಜೋಡಿ ಸುದ್ದಿ ಸ್ಫೋಟಗೊಂಡಾಗ ಹೃತಿಕ್ ಅಭಿಮಾನಿಗಳು ಶಾಕ್ ಆಗಿದ್ದರು. ಈ ಬಗ್ಗೆ ಖುದ್ದು  ಹೃತಿಕ್ ( Hrithik Roshan) ಒಂದು ಹೇಳಿಕೆಯನ್ನೂ ಕೊಟ್ಟಿದ್ದರು, 'ನನ್ನಿಂದ ನನ್ನ ಪತ್ನಿ ಸುಸಾ​ನ್​ ದೂರವಾಗುತ್ತಿದ್ದಾರೆ. ನಮ್ಮಿಬ್ಬರ 17 ವರ್ಷಗಳ ಸಂಬಂಧ ಕೊನೆಯಾಗುತ್ತಿದೆ. ನಮ್ಮ ಕುಟುಂಬಕ್ಕೆ ತುಂಬಾ ನೋವಿನ ಸಂಗತಿ ಇದು' ಎಂದಿದ್ದರು. ನಂತರ ಸುಸಾನ್​ ಅವರು ಕೂಡ ಹೇಳಿಕೆ ನೀಡಿ,  'ನಮ್ಮಿಬ್ಬರ ನಡುವೆ ಗೌರವ ಮತ್ತು ಕರ್ತವ್ಯದ ಹೊಣೆ ಇದೆ. ಅದೇ ರೀತಿ ನಮ್ಮಿಬ್ಬರ ನಡುವೆ ಆಯ್ಕೆಗಳೂ ಇವೆ. ಈಗ ಉಳಿದಿರುವುದು ಮಕ್ಕಳನ್ನು ಇಬ್ಬರೂ ರಕ್ಷಿಸಿ ಅವರ ಬಗ್ಗೆ ಕಾಳಜಿವಹಿಸುವುದು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದಿದ್ದರು. ಸಂಜಯ್ ಖಾನ್ ಅವರ ಪುತ್ರಿ ಸುಸಾನ್​ ಖಾನ್ ಅವರನ್ನು ಹೃತಿಕ್ ಮದುವೆಯಾಗಿದ್ದು ಡಿಸೆಂಬರ್ 20, 2000ನೇ ಇಸವಿಯಲ್ಲಿ. ಸುಸಾನ್​ 12 ವರ್ಷ ವಯಸ್ಸಿನಿಂದಲೇ ಹೃತಿಕ್​ಗೆ ಗೊತ್ತಿತ್ತು. ಇಬ್ಬರೂ ಜೊತೆಜೊತೆಯಲ್ಲೇ ಆಡುತ್ತಾ ಬೆಳೆದವರು. ಆದರೆ ಮದುವೆಯಾದ ಮೇಲೆ ಸಂಸಾರದಲ್ಲಿ ಅದೇನಾಯಿತೋ, ಅಂತೂ ಇಬ್ಬರ ನಡುವೆ ಗಲಾಟೆ, ಕಚ್ಚಾಟ ಶುರುವಾಗಿ ಕೊನೆಗೂ 2014ರಲ್ಲಿ ಈ ದಂಪತಿಗೆ ಡಿವೋರ್ಸ್​ ಸಿಕ್ಕಿತ್ತು. 

ಈ ದಂಪತಿಗೆ ಇಬ್ಬರು ಪುತ್ರರು. ಹೃದಯಾನ್ ರೋಶನ್ (Hridaan Roshan), ರೆಹಾನ್ ರೋಶನ್. ರೆಹಾನ್​ಗೆ ಈಗ 17 ವರ್ಷವಾದರೆ, ಹೃದಯಾನ್​ಗೆ 14 ವರ್ಷ ವಯಸ್ಸು. ಸದ್ಯ  49 ವರ್ಷದ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಅವರಿಂದ ದೂರ ಆದ ಬಳಿಕ  ಗಾಯಕಿ, ನಟಿ ಸಬಾ ಅಜಾದ್ ಪ್ರೀತಿಯಲ್ಲಿ ಬಿದ್ದಿರುವುದಾಗಿ ಸುದ್ದಿಯಿದೆ.  ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಕಾಣಿಸಿಕೊಳ್ಳುತ್ತಿದ್ದಾರೆ.   ಈ ವರ್ಷ ನವೆಂಬರ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಹೃತಿಕ್ ತಂದೆ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದರು.  

ಡಾನ್ಸ್​, ಆ್ಯಕ್ಷನ್​ ಸೀನ್​ ಮಾಡಿದ್ರೆ ಹೃತಿಕ್‌ ಜೀವಕ್ಕೆ ಅಪಾಯ ಎಂದಿದ್ರಂತೆ ಡಾಕ್ಟರ್!

ಇವುಗಳ ನಡುವೆಯೇ, ಸುಸಾನ್​ ಖಾನ್​ ಮತ್ತು ಹೃತಿಕ್​ ರೋಷನ್​ ಹಿರಿಯ ಪುತ್ರ ರೆಹಾನ್​ಗೆ (Hrehaan Roshan) ಇಂದು  17 ನೇ ಹುಟ್ಟುಹಬ್ಬದ ಸಂಭ್ರಮ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುಸಾನ್​ ಮಗನ ವಿಡಿಯೋ ಶೇರ್​ ಮಾಡಿಕೊಂಡಿದ್ದಾನೆ.  ಥ್ರೋಬ್ಯಾಕ್ ಚಿತ್ರಗಳು ಮತ್ತು ವೀಡಿಯೊಗಳನ್ನು ಒಳಗೊಂಡಿರುವ ವೀಡಿಯೊ ಕ್ಲಿಪ್ ಅನ್ನು ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೆಹಾನ್​  ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ   ಸುಸ್ಸಾನ್​ ಜೊತೆಗೆ  ಮಗುವಿನಂತೆ ಕಾಣಿಸಿಕೊಂಡಿದ್ದಾನೆ.  ಸುಸ್ಸಾನ್​ ಅವರು ಮಗನ  ಕೆನ್ನೆಗೆ ಮುತ್ತಿಕ್ಕುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಅಮ್ಮ-ಮಗ  ತಬ್ಬಿಕೊಂಡಿದ್ದಾರೆ.  ತಾಯಿ-ಮಗ ಇಬ್ಬರೂ  ಕಿರಿಯ ಮಗ ಹೃದಯಾನ್ ರೋಷನ್ ಜೊತೆಗೆ ಹಲವಾರು ಸೆಲ್ಫಿಗಳಿಗೆ ಪೋಸ್ ನೀಡಿದ್ದಾರೆ. 

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!
 
'ನನ್ನ ಜೀವನದಲ್ಲಿ ಪ್ರಕಾಶಮಾನವಾದ ಬೆಳಕಿಗೆ... ಜನ್ಮದಿನದ ಶುಭಾಶಯಗಳು ನನ್ನ ರೇ...' ಎಂದು ಸುಸಾನ್​  ಶೀರ್ಷಿಕೆ ನೀಡಿದ್ದಾರೆ,  ದೇವರು ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ನನಗೆ ತಿಳಿದಿದೆ. ಏಕೆಂದರೆ ಅವನು ನನಗೆ ಈ ಅಮೂಲ್ಯ ಜೀವವನ್ನು ಕೊಟ್ಟಿದ್ದಾನೆ. ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಸುಸಾನ್​ (Sussanne Khan) ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಹಸ್ರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ನಟಿ  ಪ್ರೀತಿ ಜಿಂಟಾ, "ಹುಟ್ಟುಹಬ್ಬದ ಶುಭಾಶಯಗಳು ನನ್ನ ಪುಟಾಣಿಗೆ" ಎಂದು ಕಮೆಂಟ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಕೆಂಪು ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.  ಕರಿಷ್ಮಾ ಕಪೂರ್, ಫರ್ಹಾನ್ ಅಖ್ತರ್  ಸೇರಿದಂತೆ ಹಲವು ಸೆಲೆಬ್ರಿಟಿಗಳೂ ವಿಷ್​ ಮಾಡಿದ್ದಾರೆ.  ಹೃತಿಕ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್ ಕೂಡ ಇನ್​ಸ್ಟಾಗ್ರಾಮ್​ನಲ್ಲಿ ರೆಹಾನ್​ಗೆ ವಿಷ್​ ಮಾಡಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?