ಕಾಫಿ ಕುಡಿಯೋಕೆ ರಾತ್ರಿ ಕರೆಯೋದಾ? ಕಾಸ್ಟಿಂಗ್​ ​ ಕೌಚ್​ ಅನುಭವ ಬಿಚ್ಚಿಟ್ಟ 'ಹೆಬ್ಬುಲಿ' ನಟ

By Suvarna News  |  First Published Mar 28, 2023, 7:41 PM IST

ಕಾಸ್ಟಿಂಗ್​ ​ ಕೌಚ್​ ಬಗ್ಗೆ ಇದಾಗಲೇ ಹಲವಾರು ನಟ ನಟಿಯರು ಮಾತನಾಡಿದ್ದು, ಇದೀಗ ನಟ, ಸಂಸದ ರವಿ ಕಿಶನ್​ ಅವರು ಈ ಬಗ್ಗೆ ತಿಳಿಸಿದ್ದಾರೆ. ಅವರ ಅನುಭವವೇನು? 
 


ಕಾಸ್ಟಿಂಗ್​ ​ ಕೌಚ್​ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು.  ಇದರ ಬಗ್ಗೆ ಒಂದೆಡೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು. ಕ್ರಮೇಣ ಈಗ ಈ ಸುದ್ದಿ ತಣ್ಣಗಾಗುತ್ತಾ ಬಂದಿದೆ. ಆದರೆ ಕಾಸ್ಟಿಂಗ್​ ​ ಕೌಚ್​ ಅಥವಾ ಮೀ ಟೂ (Me too) ಎಂದಾಕ್ಷಣ ನೆನಪಾಗುವುದು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಂದೇ. ಆದರೆ ಅಸಲಿಗೆ ಹಾಗಲ್ಲ. ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದೆ.  ಇತ್ತೀಚೆಗೆ  ಖ್ಯಾತ ನಟ, 'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್​ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್​ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಹಿಂದಿಯ  'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಮಹಿಳೆಯೊಬ್ಬರಿಂದ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದರು.

ಇದಾಗಲೇ, ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಮತ್ತು ಇತರ ಹಲವು ಟಾಪ್ ಸ್ಟಾರ್‌ಗಳು ತಮ್ಮ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಹಂಚಿಕೊಂಡಿದ್ದರು. ಇದೀಗ ನಟ, ಬಿಜೆಪಿ ಸಂಸದ ರವಿ ಕಿಶನ್​ (Ravi Kishan)ಕಾಸ್ಟಿಂಗ್​ ​ ಕೌಚ್​ ಅನುಭವವನ್ನು ಶೇರ್​ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಜನಿಸಿದ ರವಿಕಿಶನ್ ಪ್ರಮುಖ ಹಿಂದಿ ಮತ್ತು ಭೋಜಪುರಿ ಚಿತ್ರರಂಗದ ನಟ. ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ ಇವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ಹೆಬ್ಬುಲಿ' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಇವರು ಸದ್ಯ ಬಿಜೆಪಿ ಸಂಸದ ಕೂಡ ಹೌದು. ರಜತ್ ಶರ್ಮಾ ಅವರೊಂದಿಗೆ ಆಪ್ ಕಿ ಅದಾಲತ್​ ಕಾರ್ಯಕ್ರಮದಲ್ಲಿ, ರವಿ ಕಿಶನ್ ಅವರು ತಮ್ಮ ಮೇಲೆ ಆಗಿರುವ ಕಾಸ್ಟಿಂಗ್​ ​ ಕೌಚ್​ ಕುರಿತು ಮಾತನಾಡಿದ್ದಾರೆ.

Tap to resize

Latest Videos

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

ನಾನು ಆಕೆಯ ಹೆಸರು ಹೇಳುವುದಿಲ್ಲ. ಆದರೆ ಏನಾಗಿತ್ತು ಎನ್ನುವುದನ್ನು ಮಾತ್ರ ಹೇಳುವೆ ಎನ್ನುವ ಮೂಲಕ ರವಿ ಕಿಶನ್​ ಅವರು ಆ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಪರಿಸ್ಥಿತಿಯಿಂದ ಹೇಗೆ ಪಾರಾಗುವಲ್ಲಿ ಯಶಸ್ವಿಯಾದೆ ಎಂಬುದನ್ನು  ತಿಳಿಸಿದ್ದಾರೆ.  'ಆಕೆ ಯಾರೆಂದು ನಾನು ಹೇಳುವುದಿಲ್ಲ, ಹೆಸರು ಹೇಳಲು ಇಷ್ಟಪಡುವುದಿಲ್ಲ. ಆದರೆ ಅಂದು ರಾತ್ರಿ ಕಾಫಿ ಕುಡಿಯೋಣ ಎಂದು ಅವರು ಕರೆದರು. ರಾತ್ರಿ  ಭೇಟಿಯಾಗಲು ಹೇಳಿದರು. ಆಕೆ ಕರೆದ ರೀತಿ ನನಗೆ ಯಾಕೋ ಸರಿ ಎನಿಸಲಿಲ್ಲ. ಇದೇನೋ ಅಪಾಯದ ಮುನ್ಸೂಚನೆ ಎಂದು  ಸುಳಿವು ಸಿಕ್ಕಿತು' ಎಂದು ರವಿ ಕಿಶನ್​ ಹೇಳಿದ್ದಾರೆ.

ಈಗ ಆಕೆ ಬಹು ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅಂದು ಮಾತ್ರ ರಾತ್ರಿಯಲ್ಲಿ ಒಂದು ಕಪ್ ಕಾಫಿಗಾಗಿ ಬನ್ನಿ ಎಂದು ಕರೆದಿದ್ದನ್ನು ಇಂದಿಗೂ ಮರೆಯಲಾರೆ ಎಂದಿದ್ದಾರೆ.  ಜನರು ಹಗಲಿನಲ್ಲಿ ತಿನ್ನುವುದಕ್ಕಾಗಿ ಕರೆಯುವುದನ್ನು ನಾನು ಬಲ್ಲೆ. ರಾತ್ರಿಯ ವೇಳೆಯೂ ಕೆಲವೊಮ್ಮೆ ತಿಂಡಿ, ಪಾನೀಯಗಳಿಗೆ ಆಹ್ವಾನ ನೀಡುತ್ತಾರೆ. ಆದರೆ ಆಕೆ ರಾತ್ರಿಯ ವೇಳೆ ಕಾಪಿ ಕುಡಿಯಲು ಕರೆದಿರುವ ರೀತಿಯಿಂದ ದೊಡ್ಡ ಅನುಮಾನ ಬಂತು. ಈ ರೀತಿ ಆಹ್ವಾನ ನೀಡುವ ಮೊದಲು ಅವರು, ತಮ್ಮ ಬಗ್ಗೆ ಹಾಗೂ ತಮ್ಮ ತಂದೆಯ ಬಗ್ಗೆ ದೊಡ್ಡ ದೊಡ್ಡ ವಿಷಯಗಳನ್ನು ಹೇಳಿಕೊಂಡಿದ್ದರು. ತಮ್ಮ ತಂದೆ ಎಷ್ಟು ದೊಡ್ಡ ಪ್ರತಿಭಾನ್ವಿತರು ಎನ್ನುವುದನ್ನು ತಿಳಿಸಿದ್ದರು. ನಾನು ಅದರಿಂದ ಇಂಪ್ರೆಸ್​ (Impress) ಆದೆ. ಆದರೆ  ಕೊನೆಯಲ್ಲಿ ತಿಳಿದದ್ದು ಏನೆಂದರೆ, ಆಕೆಯ ಉದ್ದೇಶವೇ ಬೇರೆ ಇತ್ತು ಎನ್ನುವುದು ಎಂದು ನಟ ರವಿ ಕಿಶನ್​ ಹೇಳಿದ್ದಾರೆ. ನಾನು ಕೂಡಲೇ  ಆಕೆಯ ಆಹ್ವಾನವನ್ನು ತಿರಸ್ಕರಿಸಿದೆ. ತುಂಬಾ  ಒತ್ತಾಯ ಮಾಡಿದರೂ ನಾನು ರಾತ್ರಿಯ ವೇಳೆ ಹೋಗಲಿಲ್ಲ ಎಂದಿದ್ದಾರೆ.

ಬಾಲಿವುಡ್​ನಲ್ಲಿ ಲೈಂಗಿಕ ಕಿರುಕುಳ: ಶಾಕಿಂಗ್​ ಸತ್ಯ ತಿಳಿಸಿದ ನಟಿ Nargis Fakhri

ಅಂದಹಾಗೆ ರವಿ ಕಿಶನ್ ಅವರು,  ಅವರು ತೇರೆ ನಾಮ್, ತನು ವೆಡ್ಸ್ ಮನು (Tanu Weds Manu), ಫಿರ್ ಹೆರಾ ಫೆರಿ, ಮರ್ಜಾವನ್, ಬಾಟ್ಲಾ ಹೌಸ್ ಮತ್ತು ಇನ್ನೂ ಅನೇಕ ಬಾಲಿವುಡ್ ಚಲನಚಿತ್ರಗಳ ಭಾಗವಾಗಿದ್ದಾರೆ. ರಾಜಕೀಯಕ್ಕೂ ಕಾಲಿಟ್ಟು ಈಗ ಸಂಸದರಾಗಿದ್ದಾರೆ. 

click me!