
ಹೃತಿಕ್ ರೋಶನ್ ಲವರ್ ಸಬಾ ಆಜಾದ್ 'ಅವತಾರ' ನೋಡಿ ಒಂದು ಕ್ಷಣ ವೇದಿಕೆಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ವಿಭಿನ್ನವಾಗಿ ಡ್ರೆಸ್ ಮಾಡಿಕೊಂಡು ವಿಚಿತ್ರ ವಾಕಿಂಗ್ ಸ್ಟೈಲ್‌ನಲ್ಲಿ ಲ್ಯಾಕ್ಮೇ ಫ್ಯಾಷನ್ ವೀಕ್ ರ್ಯಾಂಪ್ ವೇದಿಕೆ ಮೇಲೆ ನಟಿ ಸಬಾ ಆಜಾದ್ ಕಾಣಿಸಿಕೊಂಡಿದ್ದಾಳೆ. ಅವಳನ್ನು ನೋಡಿ ಅಲ್ಲಿದ್ದವರು ಶಾಕ್ ಆಗಿದ್ದಾರೆ. ಕಾರಣ, ಅವಳ ಹಾವ ಭಾವ ಹಾಗೂ ವಿಚಿತ್ರ ನಡಿಗೆ!
ಹೌದು, ಇತ್ತೀಚೆಗೆ ನಡೆದ 'ಲ್ಯಾಕ್ಮೇ ಫ್ಯಾಷನ್ ವೀಕ್' ರಾಂಪ್ ವಾಕ್‌ನಲ್ಲಿ ಸಬಾ ಆಜಾದ್ ಭಾಗಿಯಾಗಿದ್ದರು. ಎಲ್ಲರೂ ವಿಭಿನ್ನ ರೀತಿಯಲ್ಲಿ ಹೆಜ್ಜೆ ಹಾಕಿದ್ದು ಸಹಜವಾಗಿತ್ತು. ಆದರೆ, ಈ ಸಬಾ ಹಾಕಿರುವ ವಿಚಿತ್ರ ಹೆಜ್ಜೆಗಳು ಹಾಗೂ ಹಾವ ಭಾವ ನೋಡಿ, ಇವಳು ಸೀದಾ ಬಾರ್‌ನಿಂದ ಸ್ಟೇಜ್‌ಗೆ ಬಂದಿರುವಳೆಂದು ಅಲ್ಲಿದ್ದವರು ಮಾತನಾಡುವಂತಾಯ್ತು. ಕಾರಣ, ಅವಳು ಅಲ್ಲಿ ಮಾಡಿದ್ದು ಹಾಗೇ ಇತ್ತು.
ಮನೆಯಿಂದಲೇ ಹೊರಬಿದ್ದ ತಾಂಡವ್‌ಗೆ ಮುಂದೆ ದೇವರೇ ಗತಿ!
ಸಬಾ ಆಜಾದ್ ಹಾಕಿದ್ದ ಡ್ರೆಸ್‌ಗೂ, ಅವಳು ಸ್ಟೇಜ್ ಮೇಲೆ ಹಾಕಿದ ವಿಚಿತ್ರ ಸ್ಟೆಪ್‌ಗೂ ವೀಕ್ಷಕರು ಅದೆಷ್ಟು ಶಾಕ್ ಆಗಿದ್ದರೆಂದರೆ, ಒಂದು ಕ್ಷಣ ಸ್ಟೇಜ್ ಮೇಲೆ ಅದೇನು ನಡೆಯುತ್ತಿದೆ ಎಂಬುದು ತಿಳಿಯದೇ ಹಲವರ ಉಸಿರು ತಾಳತಪ್ಪಿತು. ಬಳಿಕ, ಅವಳೇನೋ ಡಿಫರಂಟ್ ಅಟಿಟ್ಯೂಡ್ ತೋರಿಸಲು ಹೋಗಿ ಹೀಗಾಗಿದೆ ಎಂದು ಭಾವಿಸಿ ಎಲ್ಲರೂ ಸಮಾಧಾನ ಪಟ್ಟುಕೊಂಡರು. ಸಬಾ ನಿಜವಾಗಿಯೂ ಕುಡಿದಿದ್ಳಾ? ಗೊತ್ತಿಲ್ಲ, ಅವಳನ್ನೇ ಕೇಳಬೇಕು!
ವಿದೇಶದ ನೆಲದಲ್ಲಿ ಕುಣಿದು ಕುಪ್ಪಳಿಸುತ್ತಿರುವ 'ಭರ್ಜರಿ ಬ್ಯಾಚುಲರ್ಸ್'
ಒಟ್ಟಿನಲ್ಲಿ, ಹೃತಿಕ್ ರೋಶನ್ ಹಾಗೂ ಅವರ ಅಭಿಮಾನಿಗಳು ಕಕ್ಕಾಬಿಕ್ಕಿಯಾಗುವ ಪ್ರಸಂಗವಂತೂ ನಡೆದಿದೆ. ಅವಳ ಅವತಾರ ನೋಡಿ ಬಾಲಿವುಡ್ ಖಂಡತ ಬೆಚ್ಚಿಬಿದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.