ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್​ ಕಪೂರ್​ ಈ ಪರಿ ರೊಮ್ಯಾನ್ಸ್! ಉಫ್​ ಎಂದ ಫ್ಯಾನ್ಸ್​...

Published : Oct 11, 2023, 01:23 PM ISTUpdated : Oct 13, 2023, 09:56 AM IST
ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್​ ಕಪೂರ್​ ಈ ಪರಿ ರೊಮ್ಯಾನ್ಸ್! ಉಫ್​ ಎಂದ ಫ್ಯಾನ್ಸ್​...

ಸಾರಾಂಶ

ವಿಮಾನ ಏರಿರುವ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್​ ಕಪೂರ್​ ಸುದೀರ್ಘ ಚುಂಬನದಲ್ಲಿ ತೊಡಗಿದ್ದಾರೆ. ಈ ಪರಿ ರೊಮ್ಯಾನ್ಸ್ ನೋಡಿ  ಫ್ಯಾನ್ಸ್ ಉಫ್​ ಎನ್ನುತ್ತಿದ್ದಾರೆ.   

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್​ ದೇವರಕೊಂಡ ನಡುವೆ ಕುಚ್​ ಕುಚ್​ ನಡೆಯುತ್ತಿದೆ, ಇಬ್ಬರೂ ಸೇರಿ ಟರ್ಕಿಯಲ್ಲಿ ಎಂಜಾಯ್​ ಮಾಡಿದ್ದಾರೆ ಎಂಬೆಲ್ಲಾ ಫೋಟೋಗಳು, ಗಾಸಿಪ್​ಗಳು ಹರಿದಾಡುತ್ತಿರುವ ನಡುವೆಯೇ ಇದೀಗ ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​  ಮಾಡಿರುವುದನ್ನು ನೋಡಬಹುದು. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್​ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್​ ದೃಶ್ಯ. ಅಂದಹಾಗೆ, ಈ  ಪರಿಯ ಲಿಪ್​ಲಾಕ್​ ಮಾಡಿರುವುದು ಅನಿಮಲ್​ ಚಿತ್ರಕ್ಕಾಗಿ. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು  ರಣಬೀರ್​ ಕಪೂರ್​ (Ranbir Kapoor) ಜೋಡಿಯಾಗಿ ನಟಿಸಿದ್ದು, ಅದರ  ಮೊದಲ ಹಾಡು ಹುವಾ ಮೈನ...  ರಿಲೀಸ್​ ಆಗಿದೆ.  ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ರೊಮ್ಯಾನ್ಸ್​ ಹೇರಳವಾಗಿ ನೋಡಬಹುದು. 

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಪಾತ್ರಗಳು ತುಂಬ ಬೋಲ್ಡ್​ ಆಗಿ ಮೂಡಿಬಂದಿವೆ ಎಂಬುದಕ್ಕೆ ಈ ಹಾಡು ಸಾಕ್ಷಿ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಕನ್ನಡದ ನಂತರ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಬಾಲಿವುಡ್‌ನಲ್ಲಿ ಕೂಡಾ ಬೇಡಿಕೆ ನಟಿಯಾಗಿ ಹೆಸರು ಮಾಡಿದ್ದಾರೆ.  ಸದ್ಯಕ್ಕೆ ರಶ್ಮಿಕಾ ರಣಬೀರ್‌ ಕಪೂರ್‌ ಜೊತೆ 'ಅನಿಮಲ್‌' ಚಿತ್ರದಲ್ಲಿ ನಟಿಸುತ್ತಿದ್ದಾರೆ.  'ಅನಿಮಲ್‌' ಚಿತ್ರತಂಡ ಇತ್ತೀಚೆಗೆ ರಶ್ಮಿಕಾ ಫಸ್ಟ್‌ಲುಕ್‌ ಬಿಡುಗಡೆ ಮಾಡಿತ್ತು. ಸೀರೆ, ಮಾಂಗಲ್ಯ, ಕುಂಕುಮ ಹಾಕಿ ಗೃಹಿಣಿ ಲುಕ್‌ನಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದರು. ರಶ್ಮಿಕಾ-ರಣಬೀರ್ ಲಿಪ್ ಲಾಕ್​ ಪೋಸ್ಟರ್ ನೋಡಿದ ಫ್ಯಾನ್ಸ್​ ಈ ಹಾಡಿನ ಬಿಡುಗಡೆಗಾಗಿ ಕಾದಿದ್ದರು.  ಇದೀಗ​ ಲವ್​ ಟ್ರ್ಯಾಕ್ ಬಿಡುಗಡೆಯಾಗಿದೆ. ಜೊತೆಗೆ ಇವರಿಬ್ಬರ ಮದುವೆ ಕೂಡ ನಡೆಯುವುದನ್ನು ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ ನೋಡಬಹುದು. 

ಟರ್ಕಿಯಲ್ಲಿ ಜೊತೆಯಾಗಿದ್ದ ರಶ್ಮಿಕಾ-ವಿಜಯ್​: ಬೇರೆ ಬೇರೆ ಫೋಟೋ ಹಾಕಿದ್ರೂ ಸಿಕ್ಕಿಬಿದ್ದ 'ಕಳ್ಳರು'!

ಈಗ ರಿಲೀಸ್​ ಆಗಿರೋ ಹಾಡಿನಲ್ಲಿ ರಣಬೀರ್​ ಮತ್ತು ರಶ್ಮಿಕಾ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತಪಡಿಸುತ್ತಾರೆ. ನಟಿ ಬಾಯ್​ ಫ್ರೆಂಡ್​ನನ್ನು ಮನೆಯವರ ಮುಂದೆ ಕೂರಿಸಿದ್ದಾಳೆ. ಮನೆಯವರೆಲ್ಲಾ ಪ್ರಶ್ನೆಗಳ ಸುರಿಮಳೆಗೈದ ವೇಳೆ ಇಬ್ಬರು ಇಡೀ ಕುಟುಂಬದ ಮುಂದೆ ಲಿಪ್ ಲಾಕ್ ಮಾಡುವುದನ್ನು ಇದರಲ್ಲಿ ನೋಡಬಹುದು.  ಬಳಿಕ ಮನೆಬಿಟ್ಟು ಬಂದು ಪ್ರೈವೆಟ್ ಜೆಟ್​ ಏರುತ್ತಾರೆ. ಜೆಟ್​ ನಲ್ಲಿ ರೊಮ್ಯಾನ್ಸ್ ಮಾಡುತ್ತಾರೆ, ಕೊನೆಗೆ ದೇವಸ್ಥಾನವೊಂದರಲ್ಲಿ ಮದುವೆಯನ್ನೂ ಆಗುತ್ತಾರೆ.  

ಅಂದಹಾಗೆ, 'ಅನಿಮಲ್‌' ಚಿತ್ರವನ್ನು ಟಿ ಸೀರೀಸ್ ಫಿಲ್ಮ್ಸ್‌, ಭದ್ರಕಾಳಿ ಪಿಕ್ಚರ್ಸ್‌, ಸಿನಿ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌, ಮುರ್ದ್‌ ಖೇತಾನಿ, ಪ್ರಣಯ್‌ ರೆಡ್ಡಿ ವಂಗಾ ಜೊತೆ ಸೇರಿ ನಿರ್ಮಿಸಿದ್ದಾರೆ. ಇದರ ನಿರ್ದೇಶಕರು  ಸಂದೀಪ್‌ ರೆಡ್ಡಿ ವಂಗಾ. ಚಿತ್ರದ ಹಾಡುಗಳಿಗೆ ಪ್ರೀತಮ್‌, ವಿಶಾಲ್‌ ಮಿಶ್ರಾ, ಜಾನಿ ಹಾಗೂ ಇನ್ನಿತರರು ಸಂಗೀತ ನೀಡಿದ್ದಾರೆ. ಡಿಸೆಂಬರ್‌ 1 ರಂದು 'ಅನಿಮಲ್‌' ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ  ಅನಿಲ್‌ ಕಪೂರ್‌,  ಶಕ್ತಿ ಕಪೂರ್‌, ಸುರೇಶ್‌ ಒಬೆರಾಯ್‌ ಕೂಡ ನಟಿಸಿದ್ದಾರೆ.

ಜೈಲಿಂದ ಬಂದ ಪತಿಯ ಅಪ್ಪಿ ಮುದ್ದಾಡಿದ ಮಹಾಲಕ್ಷ್ಮಿ! ಅಬ್ಬಾ ಹೆಣ್ಣೆ, ಆತ ಮೋಸಗಾರ ಅಂದದ್ಯಾರು ಕೇಳ್ತಿದ್ದಾರೆ ಫ್ಯಾನ್ಸ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್