ಇನ್ಮುಂದೆ ಚಿತ್ರಗಳಲ್ಲಿ ಸೆಕ್ಸ್‌ ಸೀನ್ಸ್‌ ಶೂಟ್‌ ಮಾಡೋದು ಹೇಗೆ?

By Suvarna NewsFirst Published Jun 7, 2020, 2:05 PM IST
Highlights

ಕೊರೋನಾ ವೈರಸ್‌ನಿಂದಾಗಿ ಬಾಲಿವುಡ್‌ ಹಾಲಿವುಡ್‌ನಲ್ಲಿ ಬೇರೆಯೇ ಒಂದು ಬಗೆಯ ತಳಮಳ ಎದ್ದಿದೆ. ಇಲ್ಲಿನವರಿಗೆ ಈಗ ಸೆಕ್ಸ್ ಸೀನ್‌, ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಿಸುವುದು ಹೇಗೆ ಎಂಬ ಚಿಂತೆ.

ಬಾಲಿವುಡ್‌ನ ಕೇಂದ್ರ ಸ್ಥಾನವಾದ ಮುಂಬಯಿಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸ್ತಾ ಇದೆ. ಹೀಗಾಗಿ ಅಲ್ಲಿ ಇನ್ನೂ ಯಾವುದೇ ಬಗೆಯ ಫಿಲಂ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿಲ್ಲ. ಇಂಡಸ್ಟ್ರಿಯ ಉಳಿವಿಗಾಗಿ ಸ್ವಲ್ಪವೇ ಸ್ವಲ್ಪ ಪ್ರಮಾಣದಲ್ಲಿ ಜನರನ್ನು ಸೇರಿಸಿ ಶೂಟಿಂಗ್‌ ಮಾಡಲು ಅನುಮತಿ ನೀಡಲಾಗಿದೆ. ಆದರೂ ಅಲ್ಲಿನ ನಿಯಮಗಳು ಬಿಗಿಯಾಗಿವೆ. ಉದಾಹರಣೆಗೆ, ಸೆಟ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಮಂದಿ ಇರೋ ಹಾಗಿಲ್ಲ. ಸೆಟ್‌ನಲ್ಲಿ ಊಟ ತಿಂಡಿಗೆ ಅವಕಾಶವಿಲ್ಲ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಕಡ್ಡಾಯವಾಗಿ ಮೇಂಟೇನ್‌ ಮಾಡಬೇಕು. ಅರುವತ್ತೈದಕ್ಕಿಂತ ಹೆಚ್ಚು ವಯಸ್ಸಿನವರು ಶೂಟಿಂಗ್‌ನಲ್ಲಿ ಭಾಗವಹಿಸುವಂತೆಯೇ ಇಲ್ಲ. ಇತ್ಯಾದಿ. 

ಟಿವಿ ಸೀರಿಯಲ್‌ಗಳು ಹೇಗೋ ಬದುಕಿಕೊಳ್ಳಬಹುದು. ಯಾಕೆಂದರೆ ಭಾರತದಲ್ಲಿ ಪ್ರಸಾರವಾಗುವ ಟಿವಿ ಸೀರಿಯಲ್‌ಗಳಲ್ಲಿ ತುಂಬಾ ಆಪ್ತವಾದ, ಇಂಟಿಮೇಟ್‌ ಅಥವಾ ರೊಮ್ಯಾಂಟಿಕ್‌ ಸೀನ್‌ಗಳು ಇರುವುದಿಲ್ಲ. ಹೆಚ್ಚೆಂದರೆ ತಬ್ಬಿಕೊಳ್ಳುವ ಸೀನ್‌ ಇರಬಹುದಷ್ಟೇ. ಆದರೆ ವಿದೇಶಗಳಲ್ಲಿ ಹಾಗಲ್ಲ. ಅಲ್ಲಿ ಸೆಕ್ಸ್‌ ದೃಶ್ಯಗಳನ್ನೂ. ಗುಪ್ತಾಂಗಗಳನ್ನು ಹೊರತುಪಡಿಸಿ ತೋರಿಸಲಾಗುತ್ತದೆ. ಬಾಲಿವುಡ್‌ನಲ್ಲಿ ಈಗ ಕಿಸ್ಸಿಂಗ್‌ ಅತ್ಯಂತ ಸಾಮಾನ್ಯ. ಮರ್ಡರ್‌, ಜಿಸ್ಮ್‌ನಂತ ಫಿಲಂಗಳಲ್ಲಿ ಗಂಡು ಹೆಣ್ಣಿನ ಮಿಲನಕ್ರಿಯೆಯನ್ನೂ ಬಿಸಿಬಿಸಿಯಾದ ರೀತಿಯಲ್ಲಿ ತೋರಿಸಲಾಗಿದೆ. ಬಾಲಿವುಡ್‌ನಲ್ಲಿ ಪ್ರತಿವರ್ಷ ಬಿಡುಗಡೆಯಾಗುವ ಎರಡು ಸಾವಿರ ಚಿತ್ರಗಳಲ್ಲಿ ಕನಿಷ್ಠ ಒಂದೂವರೆಸಾವಿರ ಫಿಲಂಗಳಲ್ಲಾದರೂ ಅಂಥ ದೃಶ್ಯಗಳಿವೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಂಥ ದೃಶ್ಯಗಳನ್ನು ಚಿತ್ರೀಕರಿಸುವುದು ಹೇಗೆ? ಇದೊಂದು ಸವಾಲು.

ಸ್ಮಾರ್ಟ್‌ಫೋನಲ್ಲೇ ಇದೀಗ ಸೆಕ್ಸ್ ಕಾರುಬಾರು

ಅದಕ್ಕೆ ಕೆಲವರು ತಮ್ಮದೇ ಆದ ಪರಿಹಾರೋಪಾಯ ಕಂಡುಕೊಳ್ಳುತ್ತಿದ್ದಾರೆ. ಫಿಲಂನ ಸ್ಕ್ರಿಪ್ಟ್‌ ರಚಿಸುವಾಗಲೇ, ಅಂಥ ದೃಶ್ಯಗಳನ್ನು ಕೈಬಿಡುವುದು ಮೊದಲ ಹಂತ. ಕತೆಯನ್ನು ಮುಂದಕ್ಕೆ ಒಯ್ಯುವಾಗ, ಗಂಡು- ಹೆಣ್ಣಿನ ಮಿಲನೋತ್ಸವದ ದೃಶ್ಯಗಳನ್ನು ಕೈಬಿಡವುದು ಅಥವಾ ಸೂಚ್ಯವಾಗಿ ಚಿತ್ರೀಕರಿಸುವುದು. ನೀವು ಹಳೆಯ ಕನ್ನಡ ಅಥವಾ ಹಿಂದಿ ಚಿತ್ರಗಳನ್ನು ನೋಡಿರಬಹುದು. ಅದರಲ್ಲಿ ಮದುವೆಯ ನಂತರದ ಮೊದಲ ರಾತ್ರಿಯ ದೃಶ್ಯ ಅಂದ ಕೂಡಲೇ ವಧು- ವರ ಕಣ್‌ಕಣ್ಣ ಸಲಿಗೆ ಅನ್ನುತ್ತಾ ಹತ್ತಿರ ಬರುವುದು, ಅದಾದ ಬಳಿಕ ಲೈಟ್ ಆಫ್‌ ಆಗುವುದು, ನಂತರ ಎರಡು ಹೂವುಗಳು ಹತ್ತಿರ ಬರುವುದೋ, ಎರಡು ಹಕ್ಕಿಗಳು ಚಿನ್ನಾಟವಾಡುವುದೋ, ಎರಡು ಹಂಸಗಳು ಮುದ್ದಿಸಿಕೊಳ್ಳುವುದು, ಬೆವರುವ ದೇಹ, ಬಿಗಿಯಾಗುವ ಮುಷ್ಟಿ, ಮಂಚದ ಸದ್ದು, ಕಾರಿನ ಅಲುಗಾಟ (ಪಿಕೆ ಫಿಲಂ ಸೀನ್‌ ನೆನಪಿಸಿಕೊಳ್ಳಿ) ಇಂಥದ್ದನ್ನೆಲ್ಲ ತೋರಿಸುತ್ತಿದ್ದರು. ಈಗಲೂ ಅಂಥದೇ ಯಾವುದಾದರೂ ಸಾಂಕೇತಿಕ ದೃಶ್ಯ ತೋರಿಸಬೇಕಾಗುತ್ತದೆ. ಆದರೆ ಈಗಿನವರು ಇನ್ನಷ್ಟು ಸಾಂಕೇತಿಕವಾದ, ಬೇರೆ ರೀತಿಯ ಚಿತ್ರಣಗಳನ್ನು ಯೋಚಿಸಬೇಕಾಗುತ್ತದೆ.

ಸಮ್ಮರ್‌ನ ಹೀಟ್‌ ಹೆಚ್ಚಿಸೋ ಸಮಂತಾ ಅಕ್ಕಿನೇನಿಯ ಹಾಟ್‌ ಪೋಟೋಸ್
ಕೆಲವು ಪ್ರಬುದ್ಧ ನಟರು ಹೇಳುವ ಪ್ರಕಾರ, ಸೆಕ್ಸ್‌ನ ಭಾವನೆಗಳನ್ನು ದೇಹಗಳ ಮಿಲನಕ್ಕಿಂತಲೂ ಇನ್ನಷ್ಟು ಪ್ರಭಾವಶಾಲಿಯಾಗಿ ಗಂಡು- ಹೆಣ್ಣಿನ ದೇಹಭಾಷೆಯಲ್ಲೂ ಕಣ್ಣಿನ ಅಭಿವ್ಯಕ್ತಿಯಲ್ಲಿಯೂ ತೋರಿಸಬಹುದು. ಮಂಚದಲ್ಲಿ ಏನೋ ನಡೆಯುತ್ತಿದೆ ಎಂಬ ಚಿತ್ರಣವನ್ನು ನೋಡುಗನ ಕಣ್ಣಿನಿಂದಲೇ ಹೇಳಿಸಬಹುದು. ಕನ್ನಡದ ತಿಥಿ ಫಿಲಂನಲ್ಲಿ ಇಬ್ಬರು ಪಡ್ಡೆಹುಡುಗರ ಮಿಲನದ ದೃಶ್ಯವನ್ನು ಕೇವಲ ಸದ್ದಿನಿಂದಲೇ ಕಟ್ಟಿಕೊಟ್ಟದ್ದನ್ನು ನೆನಪಿಸಿಕೊಳ್ಳಿ. ಹಾಗೆಯೇ ಇಬ್ಬರು ನಟರ ಅಭಿನಯವನ್ನು ಪ್ರತ್ಯೇವಾಗಿ ಚಿತ್ರೀಕರಿಸಿಕೊಂಡು, ನಂತರ ಡಿಜಿಟಲ್‌ ಆಗಿ ಅದನ್ನು ಜೋಡಿಸಿಯೂ ಅಂಥ ದೃಶ್ಯಗಳನ್ನು ಮೂಡಿಸಬಹುದು. ಆದರೆ ಅದರಲ್ಲಿ ಹೆಚ್ಚಿನ ಪರಿಣತಿ, ಕಲಾತ್ಮಕತೆ ಅಗತ್ಯ. 

ನಿಮ್ಮ ಕೈ ಹೇಗೆ ಇಟ್ಗೋಬೇಕು, ಹಾಟಾಗಿ ಬಂದು ಪಾಠ ಹೇಳಿದ ಊರ್ವಶಿ! 

ಇಂಥ ಸೀನ್‌ಗಳಲ್ಲಿ ಭಾಗವಹಿಸಲು ನಟ ನಟಿಯರು ಕೂಡ ಧೈರ್ಯ ಮಾಡುವುದು ಅಗತ್ಯ. ಹೆಚ್ಚಿನ ಸ್ವಚ್ಛತೆ, ಸ್ಯಾನಿಟೈಸೇಷನ್‌ ಕಾಪಾಡಿಕೊಂಡು ಇವುಗಳನ್ನೆಲ್ಲ ಚಿತ್ರೀಕರಿಸಬಹುದು. ಆದರೆ ಆ ದಿನಗಳಿನ್ನೂ ದೂರವಿವೆ. ಸದ್ಯದಲ್ಲಂತೂ ಅಂಥ ಯಾವುದೇ ಚಿತ್ರಣಕ್ಕೆ ಅವಕಾಶವಿಲ್ಲ. ಹಾಗಾದರೆ ಬಾಲಿವುಡ್‌ ಈಗಿರೋದಕ್ಕಿಂತ ಐವತ್ತು ವರ್ಷ ಹಿಂದಕ್ಕೆ ಹೋಗಿಬಿಡುತ್ತದಾ? ಹಾಗೇನೂ ಆಗಲಿಕ್ಕಿಲ್ಲ. ಏಡ್ಸ್‌ ಜೋರಾಗಿದ್ದ  ದಿನಗಳಲ್ಲೂ ಕೂಡ ಅದನ್ನು ಸವಾಲಾಗಿ ಸ್ವೀಕರಿಸಿ ಪೋರ್ನ್‌ ಇಂಡಸ್ಟ್ರಿ ಕೆಲಸ ಮಾಡಿದೆ. ಅಂಥದೇ ಸ್ಪಿರಿಟ್‌ ಹಾಗೂ ಹೊಸ ದಾರಿಗಳನ್ನು ನಮ್ಮ ಬಾಲಿವುಡ್‌ನವರು ಕಂಡುಕೊಳ್ಳದೇ ಬಿಡಲಾರರು. ಹಾಟ್‌ ದೃಶ್ಯಗಳ ಪ್ರೇಮಿಗಳು ಬೇಜಾರಾಗಬೇಕಿಲ್ಲ!

ಹುಷಾರಮ್ಮಾ... ದೀಪಿಕಾ, ಹೆಚ್ಚು ಕಡಿಮೆ ಆದೀತು..!

click me!