ಮಾಲಿವುಡ್(Mollywood) ಸಿನಿಮಾ ಮರಕ್ಕಾರ್(Marakkar) ಬಿಡುಗಡೆಯಾಗುವ ಮೊದಲೇ 100 ಕೋಟಿ ಕ್ಲಬ್ ಸೇರಿದೆ. ಈ ರೀತಿ ಬಿಡುಗಡೆಗೆ ಮುನ್ನ 100 ಕೋಟಿ ಗಳಿಸಿದ ಭಾರತದ ಮೊದಲ ಸಿನಿಮಾ ಇದು
ಮರಕ್ಕಾರ್(Marakkar) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಮಾಲಿವುಡ್‌ನ(Mollywood) ಈ ಸಿನಿಮಾ ರಿಲೀಸ್ ಆಗುವ ಮುನ್ನವೇ ದಾಖಲೆ ಬರೆದಿತ್ತು. ಸೂಪರ್‌ಸ್ಟಾರ್ ಮೋಹನ್ ಲಾಲ್(Mohanalal) ಅಭಿನಯದ ಮರಕ್ಕಾರ್ ಸಿನಿಮಾ ಬಿಡುಗಡೆಯಾಗುವ ಮೊದಲೇ ದಾಖಲೆಯ ಗಳಿಕೆ ಮಾಡಿದೆ. ಇದು ಈ ಸಿನಿಮಾದ ವಿಶೇಷತೆ. ಮರಕ್ಕಾರ್: ಅರಬ್ಬಿ ಕಡಲಿಂಡೆ ಸಿಹಂ(Lion of arabian sea) ಸಿನಿಮಾದಲ್ಲಿ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಸೌತ್ ನಟಿ ಕೀರ್ತಿ ಸುರೇಶ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರೂ ನಟಿಸಿದ್ದಾರೆ.
ಮೋಹನ್ ಲಾಲ್ ತಮ್ಮ ಸಿನಿಮಾ ಮರಕ್ಕಾರ್‌ನ ಟ್ರೈಲರನ್ನು ಟ್ವೀಟ್ ಮಾಡಿದ ನಂತರ ನಟ ಇದು ರಿಲೀಸ್ ಆಗುವ ಮುನ್ನ 100 ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಸಿನಿಮಾ ಎಂದು ಹೇಳಿದ್ದಾರೆ. ಬರೀ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಮೂಲಕ ವಿಶ್ವಾದ್ಯಂತ ರಿಲೀಸ್‌ಗು ಮುನ್ನವೇ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ.
Mohanlal Marakkar: ಬಿಡುಗಡೆ ದಿನವೇ ಫ್ಯಾನ್ಸ್ ನಿರೀಕ್ಷೆ ಮುರಿಯಿತಾ ಮರಕ್ಕರ್?
നാളെ ചരിത്ര ദിവസം കുഞ്ഞാലിയുടെയും മലയാള സിനിമയുടെയും
Worldwide releasing in 4100 screens with 16000 shows per day. pic.twitter.com/BvWS0BeBU0
ಹೂಡಿದ ಬಂಡವಾಳ ತಿರುಗಿ ಪಡೆಯುವಲ್ಲಿ ರಿಸ್ಕ್ ಇದ್ದ ಕಾರಣ, ಹಾಗೆಯೇ ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡದೆ ರಿಸ್ಕ್ ತೆಗೆದುಕೊಳ್ಳದೆ ಡೈರೆಕ್ಟ್ ಒಟಿಟಿ ರಿಲೀಸ್‌ಗೆ ಸಿದ್ಧರಾಗಿದ್ದರು ನಿರ್ಮಾಪಕ ಆಂಟೊನಿ ಪೆರುಂಬಾವೂರ್. ಆದರೆ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪರೇಷನ್ ಹಾಗೂ ಚಲನಚಿತ್ರ ಅಕಾಡೆಮೆ ಸಚಿವ ಸಾಜಿ ಚೆರಿಯನ್ ಅವರು ನಿರ್ಮಾಪಕ ಆಂಟೊನಿ ಅವರ ಮನ ಒಲಿಸಿ ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೋನಾ ನಂತರ ಆರ್ಥಿಕ ಚೇತರಿಕೆಗಾಗಿ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಮಾಡಬೇಕೆಂದು ಅವರು ಕೇಳಿಕೊಂಡಿದ್ದರು. ಅಂತೂ ಚಿತ್ರತಂಡ ಅಂದುಕೊಂಡಂತೆಯೇ ಸಿನಿಮಾ ಸಕ್ಸಸ್ ಹಾದಿಯಲ್ಲಿದೆ. ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಮಾಡುವ ನಿರ್ಧಾರ ವರ್ಕೌಟ್ ಆಗಿದ್ದು ಮುಂಗಡ ಕಾಯ್ದಿರಿಸುವಿಕೆಯಿಂದ ಬಂದ ಕಲೆಕ್ಷನ್ ನಿಜಕ್ಕೂ ಚಿತ್ರತಂಡಕ್ಕೆ ಅನಿರೀಕ್ಷಿತವಾಗಿತ್ತು.
undefined
16ನೇ ಶತಮಾನದಲ್ಲಿ ಪೋರ್ಚುಗೀಸ್ ಸೈನ್ಯದೊಂದಿಗೆ ಹೋರಾಡಿದ ನೌಕಾ ಮುಖ್ಯಸ್ಥರ ಕುರಿತ ಸಿನಿಮಾ ಇದಾಗಿದೆ. ಪ್ರಿಯದರ್ಶನ್ ನಿರ್ದೇಶಕನದ ಸಿನಿಮಾ ಇಲ್ಲಿಯವರೆಗೂ ನಿರ್ಮಿಸಲಾದ ಸಿನಿಮಾಗಳಲ್ಲಿಯೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ ಸಿದ್ಧವಾದ ಮೊದಲ ಮಾಲಿವುಡ್ ಸಿನಿಮಾ. ಇದಕ್ಕಾಗಿ ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮರಕ್ಕಾರ್‌ನಲ್ಲಿ ಲೀಡ್ ರೋಲ್ ಮಾಡಿರುವ ಮೋಹನ್‌ಲಾಲ್ ಸಿನಿಮಾ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದರು. ಟಿಕೆಟ್ ಸೇಲ್ಸ್ ಕುರಿತ ಮಾಹಿತಿ ಶೇರ್ ಮಾಡಿದ್ದರು. ಸಿನಿಮಾ ವಿಶ್ವಾದ್ಯಂತ 4100 ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದ್ದು, ಪ್ರತಿದಿನ 16 ಸಾವಿರ ಶೋ ಪ್ರದರ್ಶನವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೋಟಿಗಟ್ಟಲೆ ಬಂಡವಾಳ; ನಟ ಮೋಹನ್ ಲಾಲ್ ಮರಕ್ಕರ್ ಸಿನಿಮಾ ಓಟಿಟಿಯಲ್ಲಿ?
ಹಿಂದಿನ ಸಂದರ್ಶನವೊಂದರಲ್ಲಿ, ಬರಹಗಾರ ಮತ್ತು ನಿರ್ದೇಶಕ ಪ್ರಿಯದರ್ಶನ್, ಮರಕ್ಕರ್ ಒಂದು ಬಿಗ್ ಬಜೆಟ್ ಸಿನಿಮಾವಾಗಿದ್ದು, ಅದನ್ನು ದೊಡ್ಡ ಪರದೆಯಲ್ಲಿ ಮಾತ್ರ ಆನಂದಿಸಬಹುದು. ನಾನು ಇನ್ನೂ ಆರು ತಿಂಗಳು ಕಾಯಬೇಕಾಗಿದ್ದರೂ ಅದು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಗುತ್ತದೆ. ಮೋಹನ್‌ಲಾಲ್, ಆಂಟೋನಿ ಪೆರುಂಬವೂರ್ (ನಿರ್ಮಾಪಕರು ಮತ್ತು ವಿತರಕರು), ಮತ್ತು ನಾನು, ಬಿಡುಗಡೆಗೆ ಸಂಬಂಧಿಸಿದಂತೆ ಒಂದೇ ನಿರ್ಧಾರದಲ್ಲಿದ್ದೇವೆ. ಮರಕ್ಕರ್‌ನಂತಹ ದೊಡ್ಡ ಟೆಂಟ್‌ಪೋಲ್ ಸಿನಿಮಾ ಡಿಜಿಟಲ್ ಮಾರ್ಗಕ್ಕೆ ಹೋಗುವ ಮೊದಲು ದೊಡ್ಡ ಪರದೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ನಮಗೆ ಖಚಿತವಾಗಿದೆ ಎಂದಿದ್ದರು.
ಚಿತ್ರವು ಮಾರ್ಚ್ 2020 ರ ಬಿಡುಗಡೆಗೆ ನಿಗದಿಯಾಗಿತ್ತು. ಆದರೆ ಕೋವಿಡ್‌ನಿಂದಾಗಿ ಅದನ್ನು ಮುಂದೂಡಲಾಯಿತು. 'ಮರಕ್ಕರ್' ಚಿತ್ರದಲ್ಲಿ ಬಾಲಿವುಡ್‌ನ ನಟ ಸುನೀಲ್ ಶೆಟ್ಟಿ ಮತ್ತು ನಾಲ್ಕು ವರ್ಷಗಳ ನಂತರ ಮಲಯಾಳಂ ಚಿತ್ರರಂಗಕ್ಕೆ ಮರಳುತ್ತಿರುವ ಕೀರ್ತಿ ಸುರೇಶ್ ಕೂಡ ನಟಿಸಿದ್ದಾರೆ.