ಎಲ್ಲಾ ಹೆಣ್ಣು ಮಕ್ಳು ಉರ್ಫಿ ನೋಡಿ ಕಲಿಯಬೇಕು; ರ್ಯಾಪರ್ ಹನಿ ಸಿಂಗ್ ಹೇಳಿಕೆ ವೈರಲ್

By Shruthi Krishna  |  First Published Jan 8, 2023, 5:39 PM IST

ಖ್ಯಾತ ರ್ಯಾಪರ್ ಹನಿ ಸಿಂಗ್, ಉರ್ಫಿ ಜಾವೇದ್ ಧೈರ್ಯವಂತೆ, ಎಲ್ಲಾ ಹೆಣ್ಣು ಮಕ್ಕಳು ಆಕೆಯನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ. 


ನಟಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರ ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಸುದ್ದು ಸುದ್ದಿಯಲ್ಲಿರುವ ನಟಿ. ತನ್ನ ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಹೆಚ್ಚು ಫೇಮಸ್ ಆಗಿದ್ದಾರೆ. ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಬರುತ್ತಾರೆ ಉರ್ಫಿ. ವಿಚಿತ್ರವಾದ ಬಟ್ಟೆ ಧರಿಸುವ ಜೊತೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಉರ್ಫಿ ವಿರುದ್ಧ ಅನೇಕರು ಕಿಡಿ ಕಾರುತ್ತಾರೆ ಆದರೆ ಇನ್ನೂ ಕೆಲವರು ಉರ್ಫಿಯನ್ನು ಹೊಗಳುತ್ತಾರೆ ಇಷ್ಟಪಡುತ್ತಾರೆ. ಇದೀಗ ಉರ್ಫಿಯನ್ನು ಖ್ಯಾತ ರ್ಯಾಪರ್ ಹನಿ ಸಿಂಗ್ ಹಾಡಿ ಹೊಗಳಿದ್ದಾರೆ. ಭಾರತೀಯ ಹೆಣ್ಣು ಮಕ್ಕಳು ಉರ್ಫಿಯನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ. 

ಹನಿ ಸಿಂಗ್  ಸದ್ಯ ತನ್ನ ಮುಂದಿನ ಮ್ಯೂಸಿಕ್ ಆಲ್ಬಂ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮ್ಯೂಸಿಕ್ ಆಲ್ಬ್‌ನ ಪ್ರಚಾರದ ವೇಳೆ ಹನಿ ಸಿಂಗ್ ಉರ್ಫಿ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಹನಿ ಸಿಂಗ್, ಉರ್ಫಿ 'ಬೋಲ್ಡ್ ಮತ್ತು ಧೈರ್ಯವಂತೆ' ಎಂದು ಹೇಳಿದ್ದಾರೆ. ಫಿಲ್ಮಿಬೀಟ್ ಜೊತೆ ಮಾತನಾಡಿದ ಹನಿ ಸಿಂಗ್, ನನಗೆ ಆ ಹುಡುಗಿ ತುಂಬಾ ಇಷ್ಟವಾಗುತ್ತಾರೆ. ಅವರು ತುಂಬಾ ಧೈರ್ಯಶಾಲಿ ಮತ್ತು ಬೋಲ್ಡ್. ಆಕೆಗೆ ತನ್ನ ಜೀವನನ್ನು ಹೇಗೆ ಜೀವಿಸಬೇಕೆಂದು ಗೊತ್ತು. ಭಾರತದ ಎಲ್ಲಾ ಹೆಣ್ಣು ಮಕ್ಕಳನ್ನು ನೋಡಿ ಕಲಿಯಬೇಕು. ನೀವು ಎಲ್ಲಿಂದ ಬಂದಿದ್ದೀರಿ, ಯಾವ ಧರ್ಮ, ಜಾತಿ ಅಥವಾ ನಿಮ್ಮ ಮನೆಯವರು ಯಾರು ಎಂಬುದನ್ನು ಲೆಕ್ಕಿಸದೆ ಯಾರಿಗೂ ಭಯಪಡದೆ, ನಿಮ್ಮ ಹೃದಯದಲ್ಲಿ ಏನು ಬರುತ್ತದೋ ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡಿ. ನಿಮ್ಮ ಕುಟುಂಬದವರು ಇಷ್ಟಪಡದನ್ನು ಮಾಡಬೇಡಿ. ಆದರೆ ನಿಮ್ಮ ಹೃದಯ ಹೇಳಿದ್ದನ್ನು ಮಾಡಿ' ಎಂದು ಹನಿ ಸಿಂಗ್ ಹೇಳಿದ್ದಾರೆ. 

Tap to resize

Latest Videos

ತಮ್ಮ ಹಾಡಿನಲ್ಲಿ ಉರ್ಫಿ ಅವರನ್ನು ಸೇರಿಸಿಕೊಳ್ಳಲು ಇಷ್ಟಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಹೌದು. ಖಂಡಿತವಾಗಿಯೂ ಏಕೆ ಆಗಲ್ಲ. ಅವರು ಚೆನ್ನಾಗಿ ಅಭಿನಯಿಸುತ್ತಾರೆ ಎಂದು ನಾನು ಭಾಲವಿಸಿದ್ದೀನಿ. 

ಉರ್ಫಿ ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದರ ಹಿಂದಿದೆಯಂತೆ ದೊಡ್ಡ ಕಾರಣ; ಏನದು ನೋಡಿ

ರ್ಯಾಪರ್ ಹನಿ ಸಿಂಗ್ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಡೇಟಿಂಗ್ ವಿಚಾರವಾಗಿ ಹನಿ ಸಿಂಗ್ ಸುದ್ದಿಯಲ್ಲಿದ್ದರು. ಕಳೆದ ವರ್ಷ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಅವರಿಂದ ವಿಚ್ಛೇದನ ಪಡೆದು ದೂರ ಆದರು. 1 ಕೋಟಿ ರೂಪಾಯಿ ಜೀವನಾಂಶ ನೀಡಿದರು. ಇದೀಗ ಮತ್ತೆ ಡೇಟಿಂಗ್ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. 

ಕೇಸರಿ ತುಂಡುಡುಗೆ ಹಾಕ್ಕೊಂಡು ಉರ್ಫಿ ಮಾಡಿರೋ ಕಿತಾಪತಿ ಇದು!

ಅರೆಬೆತ್ತಲಾಗಿ ಕಾಣಿಸಿಕೊಳ್ಳುವ ಬಗ್ಗೆ ಉರ್ಫಿ ಪ್ರತಿಕ್ರಿಯೆ 

ವಿಡಿಯೋ ಮೂಲಕ ಅರೆಬೆತ್ತಲಾಗುವುದರ ಹಿಂದಿನ ಕಾರಣ ಬಹಿರಂಗ ಪಡಿಸಿದ್ದಾರೆ. 'ನನಗೆ ಬಟ್ಟೆ ಎಂದರೆ ಅಕ್ಷರಶಃ ಅಲರ್ಜಿ' ಎಂದು ಉರ್ಫಿ ಹೇಳಿದ್ದಾರೆ. ಉಣ್ಣೆಯ ಬಟ್ಟೆ ಹಾಕಿದ ಬಳಿಕ ದೇಹದಲ್ಲಿ ಬೊಬ್ಬೆ ಬಂತು. ಹಾಗಾಗಿ ಬಟ್ಟೆ ಹಾಕೋದನ್ನು ಬಿಟ್ಟೆ ಎಂದು ಹೇಳಿದ್ದಾರೆ. ಈಗ ನಿಮಗೆ ಗೊತ್ತಾಯಿತಾ ನಾನು ಯಾಕೆ ಬಟ್ಟೆ ಹಾಕಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಇಷ್ಟೆ ಬಟ್ಟೆ ಹಾಕುವುದು ಎಂದು ಹೇಳಿದ್ದಾರೆ. 


 

click me!