ಸಲ್ಮಾನ್​ ಜೊತೆ ರೊಮಾನ್ಸ್​ ಮಾಡಿದ್ದ ನಟಿ ಭಾಗ್ಯಶ್ರೀ ಇಬ್ಬರು ಮಕ್ಕಳ ಜೊತೆ ಅಂಬಾನಿ ಮದ್ವೆಯಲ್ಲಿ!

By Suchethana D  |  First Published Jul 15, 2024, 6:17 PM IST

ಮೈನೆ ಪ್ಯಾರ್​ ಕಿಯಾದ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಭಾಗ್ಯಶ್ರೀ ಪತಿ ಮತ್ತು ಮಕ್ಕಳ ಜೊತೆ ಅನಂತ್​ ಅಂಬಾನಿ ಮದುವೆಯಲ್ಲಿ ಹೀಗೆ ಕಾಣಿಸಿಕೊಂಡಿದ್ದಾರೆ. 
 


1989ರಲ್ಲಿ ಬಿಡುಗಡೆಯಾದ ಬಾಲಿವುಡ್​ನ ಮೈನೇ ಪ್ಯಾರ್​  ಕಿಯಾ ಚಿತ್ರ ನೋಡಿದವರಿಗೆ ಸಲ್ಮಾನ್​ ಖಾನ್​ ಜೊತೆಗೆ ನಟಿಸಿರುವ ಭಾಗ್ಯಶ್ರೀ ನೆನಪಿರಲೇ ಬೇಕು. 35 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಎವರ್​ಗ್ರೀನ್​ ಆಗಿದೆ. ಈ ಚಿತ್ರವನ್ನು ಇಂದಿಗೂ ನೋಡುವವರು ಇದ್ದಾರೆ. ಮುದ್ದುಮುದ್ದಾದ ಮೊಗದ ಭಾಗ್ಯಶ್ರೀಗೆ ಆಗ 25ರ ಹರೆಯ. ಆಕರ್ಷಕ ನಗು, ಒಲವಿನ ಕಣ್ಣುಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾಗ್ಯಶ್ರೀ ಅವರಿಗೆ ಈಗ 55 ವರ್ಷ ವಯಸ್ಸು.  ಅಷ್ಟಕ್ಕೂ  ಬ್ಲಾಕ್‌ಬಸ್ಟರ್‌ ರೊಮ್ಯಾಂಟಿಕ್‌ ಸಿನಿಮಾ 'ಮೈನೆ ಪ್ಯಾರ್‌ ಕಿಯಾ' ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ಇದರಲ್ಲಿ ಸಲ್ಮಾನ್​ ಖಾನ್​ ಮತ್ತು  ಭಾಗ್ಯಶ್ರೀ ನಟನೆಗೆ ಅಭಿಮಾನಿಳು ಫಿದಾ ಆಗಿದ್ದರು. ಭಾಗ್ಯಶ್ರೀ ಅವರ  ಆಕರ್ಷಕ ನಗು, ಒಲವಿನ ಕಣ್ಣುಗಳಲ್ಲಿರುವ ಪ್ರೇಮಭಾವ ಇಂದಿಗೂ ಮರೆಯದವರು ಹಲವರು.  ಆದರೆ ಈ ಚಿತ್ರದ ಬಳಿಕ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಮೈನೆ ಪ್ಯಾರ್​ ಕಿಯಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. 

 ಭಾಗ್ಯಶ್ರೀ ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ, ಓರ್ವ ಪುತ್ರಿ. ಭಾಗ್ಯಶ್ರೀ  ಅವರಷ್ಟೇ ಸುಂದರವಾಗಿರುವ ಅವರ ಪುತ್ರಿ ಅವಂತಿಕಾ ದಾಸಾನಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.  ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್‌ ಲವ್‌ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್‌ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ. ಅಂದಹಾಗೆ, ಅವಂತಿಕಾ ದಾಸಾನಿ ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ   ಭಾರತಕ್ಕೆ ವಾಪಸಾಗಿದ್ದಾರೆ.  ಮಗ ಅಭಿಮನ್ಯು ದಾಸಾನಿ. ಇವರು ಕೂಡ ಇದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ.  ಈಗ ಭಾಗ್ಯಶ್ರೀ ತಮ್ಮ ಮಕ್ಕಳು ಹಾಗೂ ಪತಿಯ ಜೊತೆ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ. 

Tap to resize

Latest Videos

ಶ್ರೀಮಂತರನ್ನು ಬುಟ್ಟಿಗೆ ಹಾಕಿಕೊಳ್ಳೋದನ್ನ ಕಲಿಸ್ತಾಳೆ ಈ ಲವ್​ ಗುರು! ಪ್ರೇಮ ಪಾಠವೇ ಆದಾಯದ ಮೂಲ...

ಅಂದಹಾಗೆ,  ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ. ನಂತರ ತೆಲುಗಿನ ಎರಡು ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೇನೇ, ಕೆಲ ತಿಂಗಳ ಹಿಂದಷ್ಟೇ ಭಾಗ್ಯಶ್ರೀ ಅವರ ಮಗಳು  ಅವಂತಿಕಾ ದಾಸಾನಿ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್‌ ಲವ್‌ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್‌ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ. 

ಹಲವಾರು ವರ್ಷಗಳ ಬ್ರೇಕ್​ ಬಳಿಕ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಭಾಗ್ಯಶ್ರೀ ಮಾತನಾಡಿದ್ದರು.  ಮತ್ತೆ ಅಭಿನಯಿಸಲು ಪ್ರಾರಂಭಿಸಿದ್ದೇನೆ. ಇದು ತುಂಬಾ ಸಂತೋಷ ತರುತ್ತಿದೆ ಎಂದಿದ್ದರು. ಅಷ್ಟಕ್ಕೂ ಇವರು ಇಷ್ಟೆಲ್ಲಾ ಫೇಮಸ್​ ಆಗಲು ಕಾರಣವೇ ಅವರ ಮೊದಲ ಚಿತ್ರ  ಮೈನೆ ಪ್ಯಾರ್ ಕಿಯಾ. ಈ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದ ಭಾಗ್ಯಶ್ರೀಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟದ ಯಶಸ್ಸು  ತಂದುಕೊಟ್ಟಿತು. ಆ ನಂತರ ಕನ್ನಡದ ಅಮ್ಮವರ ಗಂಡ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗು, ಭೋಜಪುರಿ, ಮರಾಠಿ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

6 ದಿನಗಳ ಸೀತಾ-ರಾಮ ಮದ್ವೆ ಶೂಟಿಂಗ್​ನಲ್ಲಿ ಮೋಜು ಮಸ್ತಿ! ಹನಿಮೂನ್ ಯಾವಾಗ ಕೇಳಿದ ಫ್ಯಾನ್ಸ್​

click me!