RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

By Suvarna News  |  First Published Aug 9, 2023, 4:33 PM IST

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಧರ್ಮೇಂದ್ರ ಹಾಗೂ ಶಬನಾ ಅಜ್ಮಿ ಅವರ ಸುದೀರ್ಘ ಲಿಪ್​ಲಾಪ್​ ದೃಶ್ಯಕ್ಕೆ ನಟಿ ಹೇಮಾ ಮಾಲಿನಿ ಪ್ರತಿಕ್ರಿಯೆ ಹೇಗಿದೆ? 
 


 ಕಳೆದ ವಾರ ತೆರೆಕಂಡ  ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky aur Rani ki Prem Kahani)  ಸಕತ್​ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದು, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.  ಪ್ರಮುಖ ಜೋಡಿಗಳಾದ ರಣವೀರ್ ಮತ್ತು ಆಲಿಯಾ ನಡುವಿನ ಕೆಮೆಸ್ಟ್ರಿ ಹೊರತಾಗಿ, ಪ್ರೇಕ್ಷಕರನ್ನು ಆಶ್ಚರ್ಯದಿಂದ ಸೆಳೆದದ್ದು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಈ ಇಬ್ಬರು ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು 'ಅಭಿ ನ ಜಾವೋ ಛೋಡ್ ಕರ್' ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ. ಇದೀಗ ಸಕತ್​ ಸದ್ದು ಮಾಡುತ್ತಿದೆ. 

ಚಿತ್ರಗಳಲ್ಲಿ ಇವೆಲ್ಲವೂ ಮಾಮೂಲಾಗಿದ್ದರೂ, ಈ ವಯಸ್ಸಿನಲ್ಲಿ ಇಂಥದ್ದೊಂದು ದೃಶ್ಯ ಮಾಡುತ್ತಿರುವುದಕ್ಕೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಧರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬನಾ ಅಜ್ಮಿ (Shabana Azmi) ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರ ಕೆಮೆಸ್ಟ್ರಿಯನ್ನೂ (Chemistry) ಜನ ಮೆಚ್ಚಿಕೊಂಡಿದ್ದಾರೆ.  ಈ ಚುಂಬದನ ಕುರಿತು ನಟ  ಧರ್ಮೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಶಬಾನಾ ಅಜ್ಮಿ ಮತ್ತು ನಾನು ಚುಂಬನದ ದೃಶ್ಯದಲ್ಲಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ನಮ್ಮ ಫ್ಯಾನ್ಸ್​ ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಖುದ್ದು ಧರ್ಮೇಂದ್ರ ಕೂಡ ಹೇಳಿದ್ದಾರೆ. ಇಷ್ಟೊಂದು ಪ್ರೀತಿ ಜನರಿಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ಲೈಫ್ ಇನ್ ಎ ಮೆಟ್ರೋದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಜನರು ಅದನ್ನು ಮೆಚ್ಚಿದ್ದರು. ಈಗ ಇದನ್ನು ಕೂಡ ಜನ ಮೆಚ್ಚಿಕೊಂಡಿರುವುದು ಅಚ್ಚರಿಯಾಗುತ್ತಿದೆ, ಎಂದು  ಧರ್ಮೇಂದ್ರ ಹೇಳಿದ್ದರು. ಇದೀಗ ಲಿಪ್​ಲಾಕ್​ ಕುರಿತು ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿಗೂ ಪ್ರಶ್ನೆ ಕೇಳಲಾಗಿದೆ.

Tap to resize

Latest Videos

RRPK: 72 ವರ್ಷದ ಶಬನಾ ಜೊತೆ ಲಿಪ್​ಲಾಕ್​ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಹೇಮಾ ಮಾಲಿನಿ,  ಇನ್ನೂ ನಾನು ಸಿನಿಮಾ ನೋಡಿಲ್ಲ. ಆದರೆ ಶಬನಾ ಅಜ್ಮಿ ಮತ್ತು  ಧರ್ಮೇಂದ್ರ ಅವರ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡಿರುವಂತೆ ತೋರುತ್ತದೆ. ಲಿಪ್​ಲಾಕ್​ ಕುರಿತು ಪ್ರತಿಕ್ರಿಯಿಸಲು ಸಿನಿಮಾ  ನೋಡದ್ದರಿಂದ ಸಾಧ್ಯವಾಗುತ್ತಿಲ್ಲ. ಆದರೆ ಧರ್ಮೇಂದ್ರ ಅವರ ನಟನೆಯನ್ನು ಇಂದಿಗೂ ಜನರು ಇಷ್ಟಪಡುವುದು ಹಾಗೂ  ಧರ್ಮೇಂದ್ರ  (Dharmendra) ಅವರಿಗೆ ಜನ ಪ್ರೀತಿ ತೋರಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ. ಧರ್ಮೇಂದ್ರ ಅವರು ಈಗಲೂ ತಮ್ಮ ಹಳೆಯ ವಿಡಿಯೋಗಳನ್ನು ನೋಡಿ ಇದರಲ್ಲಿ ತಮ್ಮ ನಟನೆ ಹೇಗಿದೆ ಎಂದು ಪ್ರಶ್ನಿಸುತ್ತಿರುತ್ತಾರೆ. ಈಗಲೂ ಅವರಿಗೆ  ಕ್ಯಾಮೆರಾದ ಗೀಳು ಇರುವುದು ಖುಷಿಕೊಡುತ್ತಿದೆ ಎಂದಿದ್ದಾರೆ.
 
 ನಂತರ ನಟನೆಗೆ ಮರಳುವ ಬಗ್ಗೆ ಪ್ರಶ್ನಿಸಿದಾಗ, ಹೇಮಾ ನಾನು ಅದಕ್ಕೆ ತಾವು ಸಿದ್ಧ ಎಂದು ಹೇಳಿದರು.  ತಮ್ಮ ವಯಸ್ಸಿಗೆ ತಕ್ಕಂತೆ ಪಾತ್ರ ಇರಬೇಕು ಎಂದಿರುವ ಅವರು,  ಈ ಪಾತ್ರವು ಮನಮೋಹಕವಾಗಿರಬಹುದು, ಆದರೆ ಅದು ತನ್ನ ವಯಸ್ಸಿಗೆ ತಕ್ಕಂತೆ ಇರಬೇಕು ಎಂದಿದ್ದಾರೆ.  ಯಾವುದೇ ರೀತಿಯ ಪಾತ್ರವನ್ನು ಮಾಡಲು ಸಿದ್ಧ.  ಆದರೆ ಬೆಳ್ಳಿತೆರೆಯಲ್ಲಿ ನಕಾರಾತ್ಮಕ ಚಿತ್ರಣಗಳನ್ನು ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ನಿಜ ಜೀವನದಲ್ಲಿ ನಾನು ನಕಾರಾತ್ಮಕ ವ್ಯಕ್ತಿಯಲ್ಲ, ಆದ್ದರಿಂದ ಯಾರಿಗೂ ಕೆಟ್ಟದ್ದನ್ನು ಯೋಚಿಸಲು ಸಾಧ್ಯವಿಲ್ಲ. ಪಾತ್ರವು ಸಕಾರಾತ್ಮಕವಾಗಿರಬೇಕು ಮತ್ತು ಸಕಾರಾತ್ಮಕ ಸಂದೇಶವನ್ನು ಹೊಂದಿರಬೇಕು ಎಂದಿದ್ದಾರೆ. ಹೇಮಾ ಮಾಲಿನಿ 2020 ರ ಚಿತ್ರ 'ಶಿಮ್ಲಾ ಮಿರ್ಚಿ' (Shimla Mirchi) ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.

ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

click me!