ಮಹಿಳೆಯರ ಕಣ್ಣಿಗೆ ನಟ ಇರ್ಫಾನ್ 'ಸೆಕ್ಸಿ'ಯಾಗಿ ಏಕೆ ಕಾಣಿಸ್ತಿದ್ರು? ಗುಟ್ಟು ಬಿಚ್ಚಿಟ್ಟ ಪತ್ನಿ

By Suvarna News  |  First Published Aug 9, 2023, 4:02 PM IST

ಬಾಲಿವುಡ್​ ನಟ ಇರ್ಫಾನ್​ ಖಾನ್​ ಮೃತಪಟ್ಟು ಮೂರು ವರ್ಷಗಳಾಗಿದ್ದು, ಅವರ ಬಗ್ಗೆ ಪತ್ನಿ ಸುತಾಪಾ ಸಿಕ್ದರ್ ತಿಳಿಸಿದ್ದಾರೆ. ಅವರು ಹೇಳಿದ್ದೇನು? 
 


ಬಾಲಿವುಡ್‌ ಮಾತ್ರವಲ್ಲದೆ, ಹಾಲಿವುಡ್ ಸಿನಿಮಾರಂಗದಲ್ಲಿ ಗಮನಸೆಳೆದ ಪ್ರತಿಭಾನ್ವಿತ ಕಲಾವಿದ ಇರ್ಫಾನ್‌ ಖಾನ್‌ (Irrfan Khan). ಅವರು ನಿಧನರಾಗಿ ಮೂರು ವರ್ಷಗಳೇ ಕಳೆದಿವೆ. ಅವರ ಜೀವನದ ಕುರಿತು, ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು  ವಿಮರ್ಶಕಿ ಮತ್ತು ಲೇಖಕಿ ಶುಭ್ರ ಗುಪ್ತಾ ಅವರು ಇರ್ಫಾನ್​ ಖಾನ್​ ಅವರ ಜೀವನ ಚರಿತ್ರೆಯ 'ಇರ್ಫಾನ್ ಖಾನ್: ಎ ಲೈಫ್ ಇನ್ ಮೂವೀಸ್' ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇರ್ಫಾನ್​ ಅವರ ಕುರಿತ ಹಲವು ಮಹತ್ವದ ವಿಷಯಗಳನ್ನು ತಿಳಿಸಿದ್ದಾರೆ.  ಕಿರುತೆರೆಯ ಮೂಲಕ ನಟನಾ ಪ್ರಪಂಚಕ್ಕೆ ಕಾಲಿಟ್ಟಿದ್ದ ಇರ್ಫಾನ್​, 'ಸಲಾಮ್‌ ಬಾಂಬೆ' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟವರು. ನಾನಾ ರೀತಿಯ ಪಾತ್ರಗಳ ಮುಖೇನ ಸಿನಿಪ್ರಿಯರನ್ನು ರಂಜಿಸಿದರು. ಅನೇಕ ಪ್ರಶಸ್ತಿಗಳನ್ನು ಪಡೆದರು. 2020ರ ಏಪ್ರಿಲ್​ನಲ್ಲಿ  54 ವಯಸ್ಸಿನಲ್ಲೇ ನಿಧನರಾದರು. 

 ಇರ್ಫಾನ್ ಖಾನ್ ಅವರ ಪತ್ನಿ ಸುತಾಪಾ ಸಿಕ್ದರ್ (Sutapa Sikdar), ಸ್ವತಃ ಖ್ಯಾತ ಬರಹಗಾರ್ತಿ ಮತ್ತು ನಿರ್ಮಾಪಕಿ ಕೂಡ ಹೌದು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಏಕೆ ತಮ್ಮ ಪತಿಯನ್ನು ಅಷ್ಟು ಇಷ್ಟಪಡುತ್ತಿದ್ದರು. ಏಕೆ ತಮ್ಮ ಪತಿಯಲ್ಲಿ ಮಾದಕತೆಯನ್ನು ಕಾಣುತ್ತಿದ್ದರು ಎಂಬ ಬಗ್ಗೆ ವಿವರಿಸಿದ್ದಾರೆ. ಅಂದಹಾಗೆ, ಇರ್ಫಾನ್ ಖಾನ್ ಅವರು ತಮ್ಮ್ ಅಪೂರ್ವ ಅಭಿನಯದಿಂದ ಬಾಲಿವುಡ್‌ನಲ್ಲಿ ಮುಂದಿನ ಪೀಳಿಗೆಗೆ ಬದುಕುವ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದರು. ಇವರನ್ನು ಕಂಡರೆ ಮಹಿಳೆಯರು ತುಂಬಾ ಇಷ್ಟಪಡುತ್ತಿದ್ದರು. ಅದರ ಬಗ್ಗೆಯೀಗ ಅವರ ಪತ್ನಿ ಸುತಾಪಾ ಮಾತನಾಡಿದ್ದಾರೆ.

Tap to resize

Latest Videos

ಸಲಿಂಗ ಕಾಮದ 'ಓ ಮೈ ಗಾಡ್​-2' ವಿವಾದಿತ ಚಿತ್ರ ವೀಕ್ಷಿಸಿದ ಸದ್ಗುರು, ಚಿತ್ರದ ಬಗ್ಗೆ ಹೇಳಿದ್ದೇನು?

ತಮ್ಮ ಪತ್ನಿ ಶುದ್ಧ ಹೃದಯ (Pure Heart) ಮತ್ತು ಸೂಕ್ಷ್ಮ ವ್ಯಕ್ತಿಯಾಗಿದ್ದರು. ಅವರು ಮಾದಕತೆಯನ್ನು ಪ್ರತಿನಿಧಿಸುವ ವ್ಯಕ್ತಿಯಾಗಿದ್ದರು. ತಮ್ಮ  ಕೆಲಸಗಳನ್ನು ಬಹಳ ಸರಳವಾಗಿ ಮಾಡುವುದನ್ನು ನಮಬಿದ್ದರು.   ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುವ  ಅಹಂ ಅವರಲ್ಲಿ ಇರಲಿಲ್ಲ. ಕೆಲಸವನ್ನು ಎಷ್ಟೇ ಸುಲಭದಲ್ಲಿ ಮಾಡಿದರೂ ಆ ಬಗ್ಗೆ ಅಹಂ ಪಡುತ್ತಿರಲಿಲ್ಲ.  ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಬಂದಿದ್ದ ತಮ್ಮ ಪತಿಯನ್ನು ವೈಯಕ್ತಿಕವಾಗಿ ತಿಳಿದಿರುವವರಿಗೆ ಪ್ರತಿ ಹುಡುಗಿಯೂ ಇರ್ಫಾನ್‌ನನ್ನು ಪ್ರೀತಿಸುತ್ತಿದ್ದಳು, ಇಂದಿಗೂ ಅದೇ ಪ್ರೀತಿ ಉಳಿಸಿಕೊಂಡಿದ್ದಾರೆ ಎಂದು ಸುತಾಪಾ ಹೇಲಿದ್ದಾರೆ. 

ಮಹಿಳೆಯರು ಇರ್ಫಾನ್ ಅವರಲ್ಲಿ  ಆಕರ್ಷಕ ವ್ಯಕ್ತಿತ್ವವನ್ನು ಕಾಣುತ್ತಿದ್ದರು. ಇರ್ಫಾನ್​ ಹೆಣ್ಣನ್ನು (Women) ಗೌರವಿಸಿದ್ದು ಕೂಡ ಇದಕ್ಕೆ ಕಾರಣವಾಗಿತ್ತು. ಇನ್ನು ಚಿತ್ರರಂಗದ (Cine Industry) ವಿಷಯಕ್ಕೆ ಬಂದರೆ, ಇರ್ಫಾನ್​ ಸದಾ ತಮ್ಮ ಸಹ-ನಟಿಯರೊಂದಿಗೆ ವಿಶೇಷವಾದ ಬಂಧವನ್ನು ಹಂಚಿಕೊಂಡವರು ಎಂದ ಸುತಾಪಾ, ತಮ್ಮ ಪತಿಯನ್ನು ಹೆಣ್ಣುಮಕ್ಕಳು ಸೆಕ್ಸಿಯಸ್ಟ್​ ಮ್ಯಾನ್ (Sexiest Man)​ ಎಂದು ಕರೆಯಲು ಇದೇ ಕಾರಣ ಎಂದಿದ್ದಾರೆ. ಸದ್ಯ  ಧರ್ಮೇಂದ್ರ ಅವರು ಜೀವಂತವಾಗಿರುವ ಅತ್ಯಂತ ಸೆಕ್ಸಿಯೆಸ್ಟ್ ಪುರುಷ ಎಂದು ಮಹಿಳೆಯರು ನಂಬುತ್ತಾರೆ ಎಂದು ಸುತಾಪ ಬಹಿರಂಗಪಡಿಸಿದ್ದಾರೆ.

ಅಬ್ಬಬ್ಬಾ! ಶಾರುಖ್​ ಕಾಫಿಮಗ್​ ಇಷ್ಟು ದುಬಾರಿ? ಇದ್ರಲ್ಲಿ ಏನೇನಿದೆ ನೋಡಿ...
 
ಅಂದಹಾಗೆ, ಎರಡು ಆಸ್ಕರ್ ಪ್ರಶಸ್ತಿ (Oscar Award) ಪಡೆದ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯ ನಟ ಇರ್ಫಾನ್ ಖಾನ್‌. ಅವರ ನಟನೆಯ 'ಸ್ಲಮ್‌ ಡಾಗ್‌ ಮಿಲಿಯೇನರ್‌' ಹಾಗೂ 'ಲೈಫ್‌ ಆಫ್‌ ಪೈ' ಸಿನಿಮಾಗಳಿಗೆ ಆಸ್ಕರ್‌ ಪ್ರಶಸ್ತಿ ಬಂದಿದೆ. ಪಾನ್‌ ಸಿಂಗ್ ತೋಮರ್‌ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ಅವರಿಗೆ ಲಭಿಸಿದೆ. ಹಿಂದಿ ಮೀಡಿಯಂ ಚಿತ್ರದ ಅಭಿನಯಕ್ಕಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕರೆ, ಸಿನಿಮಾರಂಗದ ಸಾಧನೆಗಾಗಿ ಅವರಿಗೆ 2011ರಲ್ಲಿ ಪದ್ಮಶ್ರಿ ಪ್ರಶಸ್ತಿಯನ್ನು ನೀಡಲಾಗಿದೆ.  ಎನ್‌ಎಸ್‌ಡಿಯಲ್ಲಿ ವ್ಯಾಸಂಗ ಮಾಡಿದ್ದ ಸುತಾಪಾ ಸಿಕ್ದರ್‌ ಅವರು  ಇರ್ಫಾನ್​ ಅವರನ್ನು 1995ರಲ್ಲಿ  ವಿವಾಹವಾಗಿದ್ದರು. 

click me!