ಬಾಯ್‌ ಫ್ರೆಂಡ್‌ ಹೂಸು ನಂಗಿಷ್ಟ ಅಂದ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌!

By Suvarna News  |  First Published Aug 9, 2023, 11:37 AM IST

ಕಮಲ ಹಾಸನ್‌ (Kamala hassan) ಮಗಳು ಶ್ರುತಿ ಹಾಸನ್‌ (shruti haasan) ಮಾಡೋ ಅವಾಂತರ ಒಂದೆರಡಲ್ಲ. ಇದೀಗ ನನ್ ಬಾಯ್ ಫ್ರೆಂಡ್‌ ಹೂಸು ನಂಗಿಷ್ಟ ಅನ್ನೋ ಮೂಲಕ ಛೀ ಥೂ ಅಂತ ನೆಟ್ಟಿಗರಿಂದ ಉಗಿಸಿಕೊಳ್ತಿದ್ದಾಳೆ.


ಶ್ರುತಿ ಹಾಸನ್‌ (shruti haasan)  ತನ್ನ ವೈಯುಕ್ತಿಕ ಬದುಕಿನ ಕೊಂಚ ಅತಿಯಾಗೇ ಆಡ್ತಾರೆ. ಇದು ಇವತ್ತು ನಿನ್ನೆ ಕಥೆ ಅಲ್ಲ. ಆದರೆ ಈಗ ಈ ಹೆಣ್ ಮಗಳು ಹೇಳಿದ ಮಾತಿಗೆ ಮಾತ್ರ ನೆಟ್ಟಿಗರು ಛೀ ಥೂ ಅಂತ ಉಗೀತಿದ್ದಾರೆ. ಅದಕೆ ಕಾರಣ ಈಕೆ ಪಬ್ಲಿಕ್‌ನಲ್ಲಿ ಮಾಡಿಕೊಂಡ ಒಂದು ಯಡವಟ್ಟು. ಸಾಮಾನ್ಯವಾಗಿ ಹುಡುಗೀರು ಬಾಯ್‌ ಫ್ರೆಂಡ್‌ (boy friend) ಬಗ್ಗೆ ರೊಮ್ಯಾಂಟಿಕ್ ಆಗಿ ಬರ್ಕೊಂಡ್ರೆ ಈ ಪುಣ್ಯಾತಿಗಿತ್ತಿ ಅಸಹ್ಯವಾಗಿ ಬರ್ಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ವ್ಯಾಕ್ ಥೂ ಅಂತ ಉಗೀತಿದ್ದಾರೆ. ಅಷ್ಟೆಲ್ಲ ರೆಸ್ಪೆಕ್ಟ್‌ ಇರೋ ನಟಿ ಹೀಗೆ ಬೀದಿ ಬೀದಿಲಿ ಹೋಗೋರಿಂದ ಎಲ್ಲ ಹೀಗೆ ಅನಿಸಿಕೊಳ್ಳಬೇಕಾಗಿತ್ತಾ ಅಂತ ಒಂದಿಷ್ಟು ಮಂದಿ ಮುಸಿ ಮುಸಿ ನಗ್ತಿದ್ದಾರೆ. ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅಂತ ನಮ್ ತಾತ, ಅಜ್ಜಿ ಹೇಳ್ತಿದ್ರಲ್ಲಾ, ಸದ್ಯಕ್ಕೀಗ ಶ್ರುತಿ ಹಾಸನ್ ಮಾತು ಆಡಿಯೂ ಆಗಿದೆ, ಮುತ್ತು ಒಡೆದು ಹೋಗಿಯೂ ಆಗಿದೆ. ಆಗೋದೆಲ್ಲ ಆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರೆ ಏನು ಪ್ರಯೋಜನ ಅನ್ನೋ ಹಾಗಾಗಿದೆ ಈ ಬೆಕ್ಕಿನ ಕಣ್ಣಿನ ಸುಂದ್ರಿ ಕಥೆ. 

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಹಾಗೇ ಬಾಯ್‌ಫ್ರೆಂಡ್ ವಿಚಾರದಲ್ಲೂ ಅಷ್ಟೇ ಸುದ್ದಿಯಲ್ಲಿ ಇರುತ್ತಾರೆ. ಬಾಯ್ ಫ್ರೆಂಡ್ ವಿಚಾರದಲ್ಲಿ ದಕ್ಷಿಣ ಭಾರತದಲ್ಲೇ ಬೋಲ್ಡ್ ಈಕೆ ನಟಿ ಅನ್ನೋದರಲ್ಲಿ ಡೌಟೇ ಇಲ್ಲ. ಶ್ರುತಿ ಹಾಸನ್ ಹಾಗೂ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಇಬ್ಬರೂ ಫುಲ್ ಬಿಂದಾಸ್. ಸೋಶಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಸಂಬಂಧವನ್ನು ಮುಚ್ಚಿಡುವ ಸಾಹಸಕ್ಕೆ ಹೋಗೇ ಇಲ್ಲ. ಕೆಲವೊಮ್ಮ ಇಬ್ಬರ ಖಾಸಗಿ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೆ. ರೆಗ್ಯುಲರ್ ಆಗಿ ಈಕೆಯ ಪೋಸ್ಟ್ ಫಾಲೋ ಮಾಡೋರಿಗೆ ಶ್ರುತಿ ಹಾಸನ್ ಹಾಗೂ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. 

Tap to resize

Latest Videos

ನಾನು ಕೆಟ್ಟವನೋ, ಒಳ್ಳೆಯವನೊ? ಉತ್ತರ ಹೇಳಲು 30 ದಿನ ಗಡುವು ನೀಡಿದ ಶಾರುಖ್​ ಖಾನ್​!

2018ರಲ್ಲಿ ಶ್ರುತಿ ಹಾಸನ್ ಶಂತನು ಹಜಾರಿಕಾ ಅವರನ್ನು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿದಾಗ ಮೊದಲು ಪ್ರಪೋಸ್ ಮಾಡಿದ್ದು ಕೂಡ ಇವರೇ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಶ್ರುತಿ ಹಾಸನ್ ಆಗಾಗ ತನ್ನ ಬಾಯ್‌ಫ್ರೆಂಡ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸದ್ಯಕ್ಕೀಗ ಶ್ರುತಿ ಹಾಸನ್ ಫುಲ್ ಬ್ಯುಸಿ ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಾನಿ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಗಾಳಿ ಸುದ್ದಿ ಇದೆ. 

ಸದ್ಯಕ್ಕೀಗ ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಬಗ್ಗೆ ಏನು ಇಷ್ಟ ಅನ್ನೋದನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇ ಈಗ ನೆಟ್ಟಿಗರನ್ನು ತಲೆಕೆಡಿಸಿದೆ. ಈಕೆ ಹಿಂದೆ ತನ್ನ ಪ್ರಿಯತಮನ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ಪ್ರತಿಭೆ, ಪ್ರೀತಿ (Love), ಕಾಳಜಿ (Caring) ಬಗ್ಗೆ ಮನ ಬಿಚ್ಚಿ ಮಾತಾಡಿದ್ದರು. ಇವೆಲ್ಲವೂ ಇಷ್ಟ ಅಂತ ಹೇಳಿದ್ದರು. ಇಷ್ಟೇ ಹೇಳಿದ್ದರೆ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಒಂದೇ ಒಂದು ವಿಷಯ ನೆಟ್ಟಿಗರಿಗೆ ಹಿಡಿಸಿಲ್ಲ. ಅದು ತನ್ನ ಬಾಯ್‌ಫ್ರೆಂಡ್ (Boyfriend) ಹೂಸು ತನಗೆ ಇಷ್ಟ ಅಂದಿದ್ದು. ತೀರಾ ಈ ಲೆವೆಲ್‌ಗೆ ಇಳಿದು ಮಾತಾಡಬೇಕಾ ಅಂತ ನೆಟ್ಟಿಗರು ಕಮಲ್ ಮಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'ಸಲಾರ್‌ನಂಥ ಸಿನಿಮಾದಲ್ಲಿ ನಟಿಸುತ್ತಿದ್ದೀಯ. ಕಮಲ್‌ ಹಾಸನ್‌ನಂಥಾ ನಟನ ಮಗಳು ನೀನು. ನಿನಗೆ ಹೀಗೆ ಚೀಪ್ ಆಗಿ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಹಾಕಿ ಉಗಿಸಿಕೊಳ್ಳೋ ದರ್ದು ಬರಬಾರದಿತ್ತು' ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. 

100 ಕೋಟಿ ಕ್ಲಬ್​ ಸೇರಿದ ಆಲಿಯಾ 8ನೇ ಚಿತ್ರ! '100 ಕೋಟಿ ರಾಣಿ' ಪಟ್ಟಕ್ಕೇರಿದ ನಟಿ
 

click me!