
ಸದ್ಯ ಬಾಲಿವುಡ್ನಲ್ಲಿ ಸಕತ್ ಸುದ್ದಿಯಾಗ್ತಿರೋ ನಟ ಆಮೀರ್ ಖಾನ್. 60ನೇ ವಯಸ್ಸಿನಲ್ಲಿ ಮೂರನೆಯ ಮದುವೆಗೆ ರೆಡಿಯಾಗಿದ್ದಾರೆ ಆಮೀರ್. ಕುತೂಹಲದ ವಿಷಯ ಏನೆಂದರೆ, ಇವರ ಮೊದಲ ಇಬ್ಬರು ಪತ್ನಿಯರು ಹಾಗೂ ಈಗ ಮದುವೆಯಾಗ ಹೊರಟವರು ಎಲ್ಲರೂ ಹಿಂದೂಗಳೇ. ಮೊದಲ ಪತ್ನಿಯ ಹೆಸರು ರೀನಾ ದತ್ತಾ. 1986 ರಿಂದ 2002ರ ತನಕ ಇವರ ಜೊತೆ ಆಮೀರ್ ಖಾನ್ ಸಂಸಾರ ಮಾಡಿದ್ದರೆ, 2005 ರಿಂದ 2021ರ ವರೆಗೆ ಕಿರಣ್ ರಾವ್ ಜೊತೆ ಸಂಸಾರ ಮಾಡಿದ್ದರು. ಮಗಳು ಇರಾ ಖಾನ್ ಮದುವೆಯಾಗಿದೆ. ಮಗ ಜುನೈದ್ ಖಾನ್ ಕೂಡ ಮದುವೆಗೆ ಸಿದ್ಧರಾಗಿದ್ದಾರೆ. ಇದೀಗ ಆಮೀರ್ ಖಾನ್ ಗೌರಿ ಸ್ಪ್ರಾಟ್ ಎನ್ನುವವರ ಜೊತೆ ಮದುವೆಗೆ ಸಿದ್ಧರಾಗಿದ್ದಾರೆ. ಇವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ, ನಟ ಶಾರುಖ್ ಖಾನ್ ಅವರ ಪತ್ನಿ ಕೂಡ ಗೌರಿ. ಅವರೀಗ ಗೌರಿ ಖಾನ್ ಎಂದೇ ಫೇಮಸ್ಸು. ಆಮೀರ್ ಖಾನ್ ಪತ್ನಿ ಕೂಡ ಇನ್ನು ಮುಂದೆ ಗೌರಿ ಖಾನ್ ಆಗಲಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಆಮೀರ್ ಖಾನ್ ಮೂರು ಮದುವೆಯೂ ಹಿಂದೂಗಳ ಜೊತೆ. ಅತ್ತ ಶಾರುಖ್ಗೂ ಹಿಂದೂ ಹುಡುಗಿಯೇ ಬೇಕಾಯ್ತು, ಇನ್ನು ಸೈಫ್ ಅಲಿ ಖಾನ್ ಕೂಡ ಇಬ್ಬರು ಹಿಂದೂ ಹುಡುಗಿಯರನ್ನೇ ಮದುವೆಯಾಗಿದ್ದಾರೆ. ಏನಪ್ಪಾ ಇದು ಖಾನ್ಗಳ ಮಸಲತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಬಾಲಿವುಡ್ನ ಖಾನ್ತ್ರಯರು ಎಂದೇ ಫೇಮಸ್ ಆದವರು ಶಾರುಖ್, ಆಮೀರ್ ಮತ್ತು ಸಲ್ಮಾನ್. ಆದರೆ ಸಲ್ಮಾನ್ ಖಾನ್ ಇದಾಗಲೇ ಹಲವು ನಟಿಯರ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದ್ದರೂ ಇನ್ನೂ ಮದುವೆಯಾಗಲಿಲ್ಲ ಎನ್ನುವುದು ಬಿಟ್ಟರೆ ಉಳಿದವರಿಗೆ ಹಿಂದೂ ಹುಡುಗಿಯರೇ ಯಾಕೆ ಬೇಕು ಎನ್ನುವ ಚರ್ಚೆಯನ್ನು ಜಾಲತಾಣದಲ್ಲಿ ಹುಟ್ಟುಹಾಕಲಾಗಿದೆ.
23 ವರ್ಷಗಳ ಬಳಿಕ ಶಾರುಖ್ ಪತ್ನಿ ಗೌರಿ ಮತಾಂತರ? ವೈರಲ್ ಫೋಟೋಗಳ ಹಿಂದೆ ಭಯಾನಕ ಸತ್ಯ!
ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರನ್ನು ಗೌರಿಗೆ ಹೋಲಿಸಲಾಗುತ್ತದೆ. ಕುತೂಹಲದ ವಿಷಯ ಎಂದರೆ ಶಾರುಖ್ ಮತ್ತು ಆಮೀರ್ ಇಬ್ಬರಿಗೂ ಗೌರಿಯರೇ ಒಲಿದಿರುವ ಕಾರಣ ಗೌರಿಯರಿಗೆ ಯಾಕಿಷ್ಟು ಡಿಮಾಂಡ್ ಎನ್ನುವ ತಲೆಬಿಸಿ ಮಾಡಿಕೊಂಡಿದ್ದಾರೆ ಕೆಲವು ನೆಟ್ಟಿಗರು. ಇನ್ನು ಆಮೀರ್ ಖಾನ್ರವರ ಈ ಮೂರನೆಯ ಭಾವಿ ಪತ್ನಿಯ ಬಗ್ಗೆ ಹೇಳುವುದಾದರೆ, ಇವರಿಬ್ಬರೂ 25 ವರ್ಷಗಳಿಂದ ತಿಳಿದಿದ್ದಾರೆ ಎನ್ನಲಾಗಿದೆ. ಆದರೆ ಲವ್ ಶುರುವಾಗಿ 18 ತಿಂಗಳು ಆಗಿದ್ದು, ಇದೀಗ ಅದನ್ನು ರಿವೀಲ್ ಮಾಡಿದ್ದದಾರೆ ನಟ. ಅಷ್ಟಕ್ಕೂ ಗೌರಿ ಅವರು ಬೆಂಗಳೂರಿನ ಮಹಿಳೆ. ಸಿನಿಮಾಗಳ ಬಗ್ಗೆ ಅಷ್ಟೇನೂ ಅಟ್ರಾಕ್ಷನ್ ಇಲ್ಲದಿದ್ದರೂ ಆಮೀರ್ ಖಾನ್ರ ದಿಲ್ ಚಾಹತಾ ಹೈ ಮತ್ತು ಲಗಾನ್ ನೋಡಿ ಸಕತ್ ಖುಷಿ ಪಟ್ಟಿದ್ದರಂತೆ. ಕಿರಣ್ ಅವರ ಜೊತೆ ವಿಚ್ಛೇದನದ ಬಳಿಕ ಮಾಜಿ ಪತ್ನಿಯನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರೂ ಆಮೀರ್ ಅವರಿಗೆ ಒಬ್ಬ ಸಂಗಾತಿ ಬೇಕು ಎನ್ನಿಸಿದ್ದರಿಂದ ಅವರೂ ಗೌರಿ ಜೊತೆ ಪ್ರೀತಿಗೆ ಬಿದ್ದಿದ್ದಾರೆ.
"ನಾನು ಯಾರೊಂದಿಗಾದರೂ ಶಾಂತಿಯುತ ಜೀವನ ನಡೆಸಬೇಕೆಂದು ಬಯಸಿದ್ದೆ, ಮತ್ತು ನನಗೆ ಗೌರಿ ಸಿಕ್ಕಳು!" ಎಂದು ನಟ ಹೇಳಿಕೊಂಡಿದ್ದಾರೆ. ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇನ್ನು, ಶಾರುಖ್ ಮತ್ತು ಗೌರಿ ಅವರು ಆದರ್ಶ ದಂಪತಿಯೆಂದೇ ಬಿಂಬಿತರಾದವರು. ಅದಕ್ಕಿಂತ ಹೆಚ್ಚಾಗಿ ಏಕಪತ್ನಿವ್ರತಸ್ಥನಾಗಿರುವ ಕಾರಣ ಶಾರುಖ್ ಬಗ್ಗೆ ಅವರ ಅಭಿಮಾನಿಗಳಿಗೆ ಹೆಮ್ಮೆ ಇದೆ. ಹಿಂದೊಮ್ಮೆ ನಟ, ನನ್ನ ಮಕ್ಕಳು ಗಾಯತ್ರಿ ಮಂತ್ರ ಹೇಳುತ್ತಾರೆ, ನಾನು ಬಿಸ್ಮಿಲ್ಲಾ ಹೇಳುತ್ತೇನೆ. ಇದೆಲ್ಲವೂ ಓಕೆ. ನನ್ನ ಹಲವಾರು ಮುಸ್ಲಿಂ ಸ್ನೇಹಿತರು ಮನೆಗೆ ಬರುತ್ತಾರೆ. ಅವರೂ ಗಾಯತ್ರಿ ಮಂತ್ರ ಕೇಳುತ್ತಾರೆ. ನಾವು ನಮಾಜ್ ಮಾಡುವುದನ್ನು ನೋಡುತ್ತಾರೆ. ಕೆಲವೊಮ್ಮೆ ಅದನ್ನು ನಾವು ಸರಿಯಾಗಿ ಮಾಡುವುದೇ ಇಲ್ಲ. ಆ ಸಮಯದಲ್ಲಿ ನನ್ನ ಸ್ನೇಹಿತರು ಸರಿಯಾಗಿ ಹೇಗೆ ಮಾಡುವುದು ಎನ್ನುವುದನ್ನು ಕಲಿಸುತ್ತಾರೆ. ನನ್ನ ಯಾವುದೇ ಸ್ನೇಹಿತರಿಗೂ ನನ್ನ ಬಗ್ಗೆ ಅಸಮಾಧಾನ ಇಲ್ಲ. ನಾನು ಖುರಾನ್ ಓದುತ್ತೇನೆ. ಅಷ್ಟಕ್ಕೂ ಬೈಬಲ್, ಗೀತಾ, ಖುರಾನ್ ಎಲ್ಲವೂ ಒಂದೇ. ಇದಕ್ಕಾಗಿ ಎಲ್ಲರೂ ಬಡಿದಾಡುವುದನ್ನು ನೋಡಿದರೆ ಆಶ್ಚರ್ಯ ಆಗುತ್ತದೆ ಎಂದಿದ್ದರು.
ಸ್ಮಾರ್ಟ್ಫೋನ್ನಿಂದ ಕೆಲ ಕಾಲ ದೂರವಿದ್ದ ಆ ದಿನಗಳು... ರೋಮಾಂಚಕ ಅನುಭವ ಹಂಚಿಕೊಂಡ ಆಮೀರ್ ಖಾನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.