ಎರಡನೇ ಮಗು ಹೆಸರು ಬರೆದಿಟ್ಟ ಆಲಿಯಾ ಭಟ್ ಭವಿಷ್ಯವೇನು? ಮುಂದಿನ ವರ್ಷ ಏನಾಗತ್ತೆ? ಸೆಲೆಬ್ರಿಟಿ ಸಂಖ್ಯಾಶಾಸ್ತ್ರಜ್ಞ ಹೇಳ್ತಿರೋದೇನು?
ನಟಿ ಆಲಿಯಾ ಭಟ್ ಗಂಡುಮಗುವಿನ ಹೆಸರೊಂದನ್ನು ಫಿಕ್ಸ್ ಮಾಡಿರುವುದಾಗಿ ಹೇಳುವ ಮೂಲಕ ಸಕತ್ ಸುದ್ದಿಯಲ್ಲಿದ್ದಾರೆ. ರಣಬೀರ್ ಕಪೂರ್ ಜೊತೆ ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಗು ಹುಟ್ಟಿದ್ದರಿಂದ ಸಕತ್ ಚರ್ಚೆಗೆ ಗ್ರಾಸವಾಗಿದ್ದ ನಟಿ, ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದೇ ಬಿ-ಟೌನ್ನಲ್ಲಿ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ಹುಟ್ಟಿಕೊಳ್ಳಲು ಕಾರಣ, ನಟಿ, ಸಂದರ್ಶನವೊಂದರಲ್ಲಿ ಗಂಡುಮಗುವಿನ ಹೆಸರೊಂದು ಇಷ್ಟವಾಗಿರುವುದಾಗಿ ಹೇಳಿದ್ದರಿಂದ. ಮೊದಲ ಬಾರಿ ಗರ್ಭಧರಿಸಿದಾಗ ಹೆಸರು ಹುಡುಕುತ್ತಿದ್ದ ಸಂದರ್ಭದಲ್ಲಿ, ನಮಗೆ ಒಂದು ಗಂಡು ಮಗುವಿನ ಹೆಸರು ತುಂಬಾ ಇಷ್ಟವಾಗಿತ್ತು. ಹೆಸರು ತುಂಬಾ ಚೆನ್ನಾಗಿತ್ತು. ಆದರೆ ಹೆಸರು ರಿವೀಲ್ ಮಾಡಲ್ಲ ಎಂದಿದ್ದರು. ಆದರೆ ಮಗಳು ಹುಟ್ಟಿದ್ದರಿಂದ ಬೇರೆ ಹೆಸರು ಇಟ್ಟಿದ್ದನ್ನು ಹೇಳಿದ್ದರು. ರಾಹಾ ಹೆಸರು ಇಡುವಾಗಲೂ ಇಬ್ಬರ ಕುಟುಂಬದಲ್ಲಿ ಸಾಕಷ್ಟು ಚರ್ಚೆಯಾಗಿತ್ತು ಎಂದೂ ಹೇಳಿದ್ದರು.
ಇದರ ನಡುವೆಯೇ, 32 ವರ್ಷದ ಆಲಿಯಾ ಭಟ್ ಅವರ ಭವಿಷ್ಯವನ್ನು ಸೆಲೆಬ್ರಿಟಿ ಸಂಖ್ಯಾಶಾಸ್ತ್ರಜ್ಞ ಗೌತಮ್ ಆಜಾದ್ ಅವರು ನುಡಿದಿದ್ದಾರೆ. ಆಲಿಯಾ ಹುಟ್ಟಿದ್ದು, ಮಾರ್ಚ್ 15, 1993ರಂದು. ಅಂದರೆ ನಿನ್ನೆ ನಟಿ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 15ನೇ ತಾರೀಖಿಗೆ ಹುಟ್ಟಿರುವ ಕಾರಣ, ಅವರ ಸಂಖ್ಯೆ 6. ಅಂದರೆ 5+1=6. 6ನೇ ಸಂಖ್ಯೆಯನ್ನು ಪ್ರೀತಿ, ಗ್ಲಾಮರ್, ಸೌಂದರ್ಯ ಮತ್ತು ಐಷಾರಾಮಿ ಗ್ರಹವಾದ ಶುಕ್ರನು ಆಳುತ್ತಾನೆ, ಇದು ಬಾಲಿವುಡ್‌ನಲ್ಲಿ ಅವರ ವ್ಯಕ್ತಿತ್ವ ಮತ್ತು ಯಶಸ್ಸಿನೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಇನ್ನು ಅವರ ಸಂಪೂರ್ಣ ಡೇಟ್ ಆಫ್ ಬರ್ತ್ ಲೆಕ್ಕ ಹಾಕಿದಾಗ ಬರುವ ಸಂಖ್ಯೆ 31. ಅಂದರೆ 3=1=4. 4 ರಾಹುವಿನಿಂದ ಆಳಲ್ಪಡುತ್ತದೆ - ಇದು ಅಸಾಂಪ್ರದಾಯಿಕ ಯಶಸ್ಸು ಮತ್ತು ಬಲವಾದ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಕುತೂಹಲಕಾರಿಯಾಗಿ, ಆಲಿಯಾ ಅವರು ತಮ್ಮ 31 (4) ನೇ ವರ್ಷದಲ್ಲಿ, 2023ರ ನವೆಂಬರ್ 6 (6) ರಂದು ತಮ್ಮ ಮಗಳು ರಾಹಾಳನ್ನು ಪಡೆದರು ಎಂದಿದ್ದಾರೆ ಗೌತಮ್ ಆಜಾದ್ .
ಮಗಳು ರಾಹಾಳ ಎಲ್ಲಾ ಫೋಟೋ ಡಿಲೀಟ್ ಮಾಡಿದ ಆಲಿಯಾ ಭಟ್! ಆ ಪುಸ್ತಕದಲ್ಲಿ ಇದ್ದದ್ದೇನು?
ಆಲಿಯಾ ಅವರ ಜಾತಕದ ಪ್ರಕಾರ, ಅವರ ಅದೃಷ್ಟ ಸಂಖ್ಯೆಗಳು 3, 6 ಮತ್ತು 9. ಇವು ಅವರ ಪ್ರಾಥಮಿಕ ಸಂಖ್ಯೆ 6ಕ್ಕೆ ಹೊಂದಿಕೆಯಾಗುತ್ತವೆ. ಇದೇ ಕಾರಣಕ್ಕೆ ಆಲಿಯಾ ಅವರ ಗಾಡಿ ಸಂಖ್ಯೆ ಕೂಡ ಕೂಡಿಸಿದರೆ 6 ಬರುತ್ತದೆ. ಇದುಅವರ ಜೀವನದಲ್ಲಿ ಬಲವಾದ ಶುಕ್ರ ಪ್ರಭಾವವನ್ನು ಬಲಪಡಿಸುತ್ತದೆ. ಅವರ ಮೊದಲ ಚಿತ್ರ "ಸ್ಟೂಡೆಂಟ್ ಆಫ್ ದಿ ಇಯರ್" 69 (6) ಆಗಿದ್ದು, ಇದು ಅವರನ್ನು ತಾರೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಇನ್ನು ಅವರ ಸಂಬಂಧ ಮತ್ತು ಕುಟುಂಬದ ಬಗ್ಗೆ ಹೇಳುವುದಾದರೆ, ಅವರು ರಣಬೀರ್ ಕಪೂರ್ ಅವರನ್ನು ವಿವಾಹವಾದರು, ಅವರನ್ನು 6 ನೇ ಸಂಖ್ಯೆಯಿಂದ ಆಳಲಾಗುತ್ತದೆ, ಏಕೆಂದರೆ ಅವರದ್ದು ತುಲಾ ರಾಶಿ. ಇದು ಶುಕ್ರ ಆಳ್ವಿಕೆಯ ಚಿಹ್ನೆ ಆಗಿರುತ್ತಾರೆ ಎಂದಿದ್ದಾರೆ ಗೌತಮ್ ಆಜಾದ್ . ಅವರ ಮಗಳು ರಾಹಾ 6 ನೇ ತಾರೀಖಿನಂದು ಜನಿಸಿದಳು, ಇದು ಅವರ ಕುಟುಂಬದಲ್ಲಿ ಶುಕ್ರ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.
ಇನ್ನು ನಟಿಯ ಭವಿಷ್ಯದ ಬಗ್ಗೆ ಹೇಳಿರುವ ಅವರು, ನಟಿ ತಮ್ಮ 33 ನೇ (6) ವರ್ಷವನ್ನು ಪ್ರವೇಶಿಸುತ್ತಿದ್ದಾರೆ. ನಿನ್ನೆಯಷ್ಟೇ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿಗೆ ಈಗ 33ನೇ ವರ್ಷ ನಡಯುತ್ತಿದೆ. ಇದು ಶುಕ್ರನೊಂದಿಗೆ ಬಲವಾಗಿ ಪ್ರತಿಧ್ವನಿಸುತ್ತದೆ. ಇದು ಅವರ ಜೀವನದಲ್ಲಿ ಗಮನಾರ್ಹ ಹಂತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಹೆಚ್ಚಿನ ಯಶಸ್ಸು, ಸೃಜನಶೀಲ ಬೆಳವಣಿಗೆ ಮತ್ತು ವೈಯಕ್ತಿಕ ಸಂತೋಷವನ್ನು ತರುತ್ತದೆ. 2025(9) ಸಹ ಸಾರ್ವತ್ರಿಕ ವರ್ಷ 9 (ಮಂಗಳ) ಆಗಿರುವುದರಿಂದ, ಇದು ಕಠಿಣ ಪರಿಶ್ರಮ, ಶಿಸ್ತು ಮತ್ತು ವೃತ್ತಿ ವಿಸ್ತರಣೆಗೆ ಪ್ರತಿಫಲ ನೀಡುತ್ತದೆ - ಇವೆಲ್ಲವೂ ಅವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ. ನಟಿಗೆ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್ ಶಾಕ್