ಸೆಲೆಬ್ರಿಟಿ ಆಗಿದ್ದಕ್ಕೆ ತೆತ್ತ ಬೆಲೆ; 'ಸ್ನೇಹಿತೆಯ ಪತಿಯನ್ನೇ ಪಟಾಯಿಸಿದ್ಳು' ಆರೋಪಕ್ಕೆ ಹನ್ಸಿಕಾ ರಿಯಾಕ್ಷನ್

Published : Feb 11, 2023, 10:41 AM ISTUpdated : Feb 11, 2023, 10:42 AM IST
ಸೆಲೆಬ್ರಿಟಿ ಆಗಿದ್ದಕ್ಕೆ ತೆತ್ತ ಬೆಲೆ; 'ಸ್ನೇಹಿತೆಯ ಪತಿಯನ್ನೇ ಪಟಾಯಿಸಿದ್ಳು' ಆರೋಪಕ್ಕೆ ಹನ್ಸಿಕಾ ರಿಯಾಕ್ಷನ್

ಸಾರಾಂಶ

ಗೆಳತಿಯ ಪತಿಯನ್ನೇ ಪಟಾಯಿಸಿ ಮದುವೆಯಾದರು ಎನ್ನುವ ಗಂಭೀರ ಆರೋಪದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೇಲ್ ಕಥರಿಯಾ ಜೊತೆ ಕಳೆದ ವರ್ಷ ದಾಂಪತ್ಯಕ್ಕೆ ಕಾಲಿಟ್ಟರು. ರಾಜಾಸ್ಥಾನ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಹನ್ಸಿಕಾ ಮತ್ತು ಸೊಹೇಲ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಅನೇಕ ತಿಂಗಳ ಬಳಿಕ ಹನ್ಸಿಕಾ ಮತ್ತು ಸೊಹೇಲ್ ಮದುವೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮದುವೆ ವಿಡಿಯೋದಲ್ಲಿ ಹನ್ಸಿಕಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

ಹನ್ಸಿಕಾ ಮದುವೆ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅನೇಕರು ಆಕ್ರೋಶ ಹೊರಹಾಕಿದ್ದರು. ಹನ್ಸಿಕಾರನ್ನು ವಿಲನ್ ಎಂದು ಕರೆದಿದ್ದರು. ಕಾರಣ ಹನ್ಸಿಕಾ ಮದುವೆಯಾಗಿದ್ದು ತನ್ನ ಆತ್ಮೀಯ ಗೆಳತಿಯ ಮಾಜಿ ಪತಿಯನ್ನು. ಹನ್ಸಿಕಾ ಗೆಳತಿಯ ಪತಿಯನ್ನೇ ಪಟಾಯಿಸಿ ಮದುವೆಯಾದರು ಎನ್ನುವ ಗಂಭೀರ ಆರೋಪ ಎದುರಿಸಿದ್ದರು. ಹಳೆಯ ವಿಡಿಯೋಗಳನ್ನು ವೈರಲ್ ಮಾಡಿ ಟ್ರೋಲ್ ಮಾಡಲಾಗಿತ್ತು. ಇದೀಗ ಎಲ್ಲಾ ಆರೋಪದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ ಹನ್ಸಿಕಾ.

ಲವ್ ಶಾದಿ ಡ್ರಾಮಾ ಹೆಸರಿನಲ್ಲಿ ಹನ್ಸಿಕಾ ಮದುವೆ ವಿಡಿಯೋ ಸ್ಟ್ರೀಮಿಂಗ್ ಪ್ರಾರಂಭಿಸಿದೆ.  ವಿಡಿಯೋದಲ್ಲಿ ಹನ್ಸಿಕಾ ಚಿತ್ರೀಕರಣ ಮುಗಿಸಿ ಮನೆಗೆ ಹೋದಾಗ ಸೋಹೇಲ್ ಮೊದಲ ಮದುವ ಮತ್ತು ತನನ್ನು ಆರೋಪಿಯಾಗಿ ಮಾಡಿದ್ದ ಅನೇಕ ಆರ್ಟಿಕಲ್ ನೋಡಿದೆ ಎಂದು ಹೇಳಿದ್ದಾರೆ. ಸೋಹೇಲ್ ಮಾತನಾಡಿ, 'ನಾನು ಈಗಾಗಲೇ ಮದುವೆಯಾಗಿದ್ದೇನೆ ಎನ್ನುವ ಸುದ್ದಿ ವೈರಲ್ ಆಗಿದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಹನ್ಸಿಕಾ ಕಾರಣದಿಂದ ಬ್ರೇಕಪ್ ಆಗಿದೆ ಎಂದು ಹೇಳಲಾಗಿದೆ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ ಮತ್ತು ಆಧಾರರಹಿತವಾಗಿದೆ'  ಎಂದು ಹೇಳಿದರು.  

ಗೆಳತಿಯ ಗಂಡನನ್ನೇ ಪಟಾಯಿಸಿ ಮದುವೆಯಾಗುತ್ತಿರುವ ಹನ್ಸಿಕಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್

ಸೆಲೆಬ್ರೆಟಿಯಾಗಿದ್ದಕ್ಕೆ ನಾನು ತೆರಬೇಕಾದ ಬೆಲೆ ಇದು

ಈ ಬಗ್ಗೆ ಮಾತನಾಡಿದ ಹನ್ಸಿಕಾ, 'ಅದು ನನ್ನ ತಪ್ಪಾಗಿರಲಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧವಿಲಲ್ಲ. ನಾನು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ. ಹಾಗಾಗಿ ನನ್ನ ಕಡೆ ಬೊಟ್ಟು ಮಾಡಿ ತೋರಿಸಲಾಯಿತು. ನನ್ನನ್ನೇ ವಿಲನ್ ಆಗಿ ಮಾಡುವುದು ತುಂಬಾ ಸುಲಭವಾಗಿತ್ತು. ಸೆಲೆಬ್ರೆಟಿಯಾಗಿರುವುದಕ್ಕೆ ನಾನು ತೆರಬೇಕಾದ ಬೆಲೆ ಇದು' ಎಂದು ಹೇಳಿದರು.

ಮೊದಲ ಮದುವೆ ಬಗ್ಗೆ ಸೋಹೇಲ್ ಹೇಳಿದ್ದೇನು? 

'ನಾನು ಮೊದಲು 2014 ರಲ್ಲಿ ವಿವಾಹವಾದೆ ಮತ್ತು ಆ ಮದುವೆ ತುಂಬಾ ಸಮಯ ಉಳಿಯಲಿಲ್ಲ. ಕಡಿಮೆ ಆವಧಿಯಲ್ಲೇ ಬ್ರೇಕಪ್ ಆಯಿತು. ನಾವು ಸ್ನೇಹಿತರು ಮತ್ತು ಹನ್ಸಿಕಾ ನನ್ನ ಮದುವೆಗೆ ಹಾಜರಾಗಿದ್ದ ಚಿತ್ರಗಳನ್ನು ನೋಡಿದ ಕಾರಣ ಈ ಊಹಾಪೋಹ ಪ್ರಾರಂಭವಾಯಿತು' ಎಂದು ಹೇಳಿದ್ದಾರೆ. ಆದರೆ ನಿಜಕ್ಕೂ ನಡೆದಿದ್ದೇನು ಎನ್ನುವ ಬಗ್ಗೆ ಇಬ್ಬರೂ ಬಹಿರಂಗ ಪಡಿಸಿಲ್ಲ. 

Hansika Motwani; ಹನಿಮೂನ್‌ನಲ್ಲಿ 'ಬಿಂದಾಸ್' ದಂಪತಿ; ಫೋಟೋ ವೈರಲ್

ಹನ್ಸಿಕಾ ಸಿನಿಮಾಗಳು 

ನಟಿ ಹನ್ಸಿಕಾ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಹಿಂದಿ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ ಹನ್ಸಿಕಾ ನಂತರ ಸೌತ್ ಇಂಡಿಯಾ ಕಡೆ ಮುಖ ಮಾಡಿದರು. ತೆಲುಗು ಸಿನಿಮಾ ಮೂಲಕ ದಕ್ಷಿಣಕ್ಕೆ ಎಂಟ್ರಿ ಹನ್ಸಿಕಾ ಬಳಿಕ ಸೌತ್ ನಟಿಯಾಗಿಯೇ ಖ್ಯಾತಿ ಗಳಿಸಿದರು. ಕನ್ನಡ ಸಿನಿಮಾದಲ್ಲೂ ಹನ್ಸಿಕಾ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ನಟಿಸಿದ್ದರು. ಆದರೆ ಆ ಸಿನಿಮಾ ಬಳಿಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿಲ್ಲ.  ಸದ್ಯ ತಮಿಳಿನ ಅನೇಕ ಸಿನಿಮಾಗಳು ಹನ್ಸಿಕಾ ಕೈಯಲ್ಲಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?