70ರ ಬಾಲಿವುಡ್​ ನಟನ ವರಿಸಿದ 31ರ ಖ್ಯಾತ ನಟಿ? ಅಸಲಿ ಲವ್​ ಸ್ಟೋರಿ ಕಥೆ ಕೇಳಿ ತಲೆ ಚಚ್ಚಿಕೊಂಡ ನೆಟ್ಟಿಗರು!

By Suchethana D  |  First Published Dec 21, 2024, 4:37 PM IST

ಬಾಲಿವುಡ್​ನ ಖ್ಯಾತ ನಟ 70 ವರ್ಷದ ಗೋವಿಂದ್ ನಾಮದೇವ್ ಅವರು 31 ವರ್ಷದ ನಟಿ ಶಿವಾಂಗಿಯನ್ನು ಪ್ರೀತಿಸ್ತಿದ್ದಾರಾ? ಇವರ ಸ್ಟೋರಿ ಕೇಳಿ ಫ್ಯಾನ್ಸ್​ ಶಾಕ್​. 
 


ನಿರುದ್ಯೋಗಿಗಳು ದೂರದ ಮಾತು.  ಒಳ್ಳೆಯ ಉದ್ಯೋಗದಲ್ಲಿ, ಕೈತುಂಬಾ ಸಂಬಳ ಇದ್ದರೂ ಹುಡುಗಿಯರು ಸಿಗೋದೇ ಕಷ್ಟವಾಗಿದೆ ಅಂತ ಗೋಳೋ ಅಂತಿರೋ ಈ ಟೈಮ್​ನಲ್ಲಿ ಚಿಕ್ಕ ಪ್ರಾಯದವರು ಅಪ್ಪನ ವಯಸ್ಸಿನವರ ಜೊತೆ ಲವ್​ ಮಾಡೋದು, ಮದ್ವೆಯಾಗೋದು ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲಿಯೂ ಈಚೆಗೆ ಕೆಲವು ನಟಿಯರು ಹೀಗೆ ಶಾಕ್​ ಕೊಡುವುದೂ ಉಂಟು.  ಇಂಥ ವಿಷಯ ಬೆಳಕಿಗೆ ಬಂದಾಗಲೆಲ್ಲಾ ದುಡ್ಡಿನ ಆಸೆ, ಆಸ್ತಿಯ ಮೇಲೆ ಕಣ್ಣು... ಎಂದೆಲ್ಲಾ ಕಮೆಂಟ್​ ಮಾಡುವುದು ಮಾಮೂಲಿ. ಪ್ರೀತಿ ಕುರುಡು ಎನ್ನುವ ಮಾತು ಇಂದು, ನಿನ್ನೆಯದ್ದಲ್ಲ. ಯಾರಿಗೆ ಯಾರ ಮೇಲೆ, ಹೇಗೆ ವ್ಯಾಮೋಹ ಆಗುತ್ತದೆ ಎಂದು ಊಹಿಸಲೂ ಸಾಧ್ಯವಾಗದ ಮಾತು. ಕಾರಣ ಏನೇ ಇರಲಿ, ಪ್ರೀತಿ-ಮದ್ವೆಯ ಹಿಂದೆ ಸದುದ್ದೇಶ, ದುರದ್ದೇಶ ಏನೇ ಇರಲಿ... ಇಂಥ ಪೋಸ್ಟ್​ಗಳನ್ನು ನೋಡಿದಾಗ ಅವಿವಾಹಿತ ತರುಣರ ಹೊಟ್ಟೆ ಚುರ್​ ಅನ್ನೋದಂತೂ ದಿಟ.

ಇದೀಗ ಅಂಥದ್ದೇ ಒಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, 70 ವಯಸ್ಸಿನ ಹಿರಿಯ ನಟ  ಗೋವಿಂದ್ ನಾಮದೇವ್ ಮತ್ತು 31 ವರ್ಷದ ಖ್ಯಾತ ಕಿರುತೆರೆ ನಟಿ ಶಿವಾಂಗಿ ವರ್ಮಾ ಅವರ ಲವ್​ ಸ್ಟೋರಿ. ಇತ್ತೀಚೆಗೆ ನಟಿ ಇವರ ಜೊತೆಗಿನ ಪೋಸ್ಟ್​ ಶೇರ್​ ಮಾಡಿಕೊಂಡು,  ಪ್ರೀತಿಗೆ ವಯಸ್ಸಿಲ್ಲ, ಮಿತಿಯಿಲ್ಲ ಎಂಬ ಸಾಲನ್ನು ಬರೆದುಕೊಂಡಿದ್ದರು. ಈ ಫೋಟೋ ನೆಟ್ಟಿಗರ ಹುಬ್ಬೇರಿಸಿತ್ತು. ಇದು ನಿಜನೋ ಅಥವಾ ತಮಾಷೆಗೆ ಬರೆದಿದ್ದಾರೋ ಎಂದು ಇಂಟರ್​ನೆಟ್​ ತಡಕಾಡಿದವರೇ ಎಲ್ಲಾ. ಇದೀಗ ಈ ಬಗ್ಗೆ ನಟ ಗೋವಿಂದ್ ನಾಮದೇವ್ ಅವರು ಎಲ್ಲರ ಸಂದೇಹಕ್ಕೆ ತೆರೆ ಎಳೆದಿದ್ದಾರೆ. ನಮ್ಮಿಬ್ಬರ ಸಂಬಂಧವು ಸಂಪೂರ್ಣವಾಗಿ ವೃತ್ತಿಪರವಾಗಿದೆ ಮತ್ತು ಪರಸ್ಪರ ಗೌರವವನ್ನು ಆಧರಿಸಿದೆ.  ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಸಂಬಂಧಗಳನ್ನು ಗೌರವಿಸಬೇಕು. ವಯಸ್ಸು ಅಥವಾ ಊಹೆಗಳ ಆಧಾರದ ಮೇಲೆ ನಿರ್ಣಯಿಸಬಾರದು ಎಂದಿದ್ದಾರೆ.

Tap to resize

Latest Videos

undefined

ಮತ್ತೊಂದು ಹಾಟ್​ ವಿಡಿಯೋ ಹರಿಬಿಟ್ಟ ನಿವೇದಿತಾ ಗೌಡ: ಕಮೆಂಟಿಗರ ಸುರಕ್ಷತೆಗೆ 'ಹಿತ ರಕ್ಷಣಾ ವೇದಿಕೆ' ಶುರು!
 
ಈ ಮೂಲಕ ಅವರು, ಇದು ರಿಯಲ್​ ಲೈಫ್​ ಸ್ಟೋರಿ ಅಲ್ಲ. ಸಿನಿಮಾ ಒಂದರ ಕಥೆ. ನಾವು ಇಂದೋರ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಇದು ‘ಗೌರಿಶಂಕರ್ ಗೌಹರ್‌ಗಂಜ್ ವಾಲೆ’ ಎಂಬ ಚಿತ್ರ. ಈ  ಚಿತ್ರದ ಕಥಾವಸ್ತು ಮುದುಕನೊಬ್ಬ ಚಿಕ್ಕ ಹುಡುಗಿಯನ್ನು ಪ್ರೀತಿಸುವುದು.  ಇದು ರೀಲ್​ ಲೈಫ್​ ಸರ್​, ದಯವಿಟ್ಟು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದಿದ್ದಾರೆ. ನಟಿಯ ಪೋಸ್ಟ್​ ನೋಡಿ ಇನ್ನಿಲ್ಲದಂತೆ ಕಮೆಂಟ್​ ಮಾಡಿದ್ದವರು ಈ ಪೋಸ್ಟ್​ ನೋಡಿ ಸುಸ್ತಾಗಿ ಹೋಗಿದ್ದಾರೆ. ನಟಿಯರಿಗೆ ಹಣದ ದುರಾಸೆ ಹಾಗೆ ಹೀಗೆ ಎಂದು ಸಿಕ್ಕಾಪಟ್ಟೆ ಕಮೆಂಟ್​ಗಳನ್ನು ನೆಟ್ಟಿಗರು ನಟಿ ಶಿವಾಂಗಿ ವಿರುದ್ಧ ಮಾಡಿದ್ದರು. ಇದೇ ವೇಳೆ ನಟನ ವಿರುದ್ಧವೂ ಹರಿಹಾಯ್ದಿದ್ದರು. ಆದರೆ ಇದೀಗ ಇದು ಸಿನಿಮಾ ಕಥೆ ಎನ್ನುವುದು ಗೊತ್ತಾಗಿ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. 
 
ಅಂದಹಾಗೆ ಶಿವಾಂಗಿ ವರ್ಮಾ ಉದಯೋನ್ಮುಖ ನಟಿ.  ಹಿಂದಿ ಕಿರುತೆರೆ ವಲಯದಲ್ಲಿ ಚಿರಪರಿಚಿತವಾಗಿದ್ದಾರೆ.  ಹತ್ತು ವರ್ಷಕ್ಕೂ ಅಧಿಕ ಕಾಲ ಕಿರುತೆರೆಯಲ್ಲಿ ಫೇಮಸ್​  ಆಗಿರೋ ನಟಿ ಈಗ ಸಿನಿಮಾಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮುದುಕನೊಬ್ಬ ಯುವತಿಯನ್ನು ಪ್ರೀತಿಸುವ ಸಂಪೂರ್ಣ ಹಾಸ್ಯಮಯ ಕಥಾಹಂದರವನ್ನು ಹೊಂದಿದೆ ಈ ಚಿತ್ರ. ಇನ್ನು ನಟ ಗೋವಿಂದ್ ನಾಮ್‌ದೇವ್ ಅವರ ಬಗ್ಗೆ ಬಾಲಿವುಡ್​ ಪ್ರಿಯರಿಗೆ ಹೇಳಬೇಕಾದ ಅಗತ್ಯವೇ ಇಲ್ಲ.  ಕಳೆದ ಮೂರು ದಶಕಗಳಲ್ಲಿ ನೂರಾರು ಚಿತ್ರ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ. ಇಂತಹ ಹಿರಿಯ ಕಲಾವಿದನ ಜೊತೆ ತಮ್ಮ ಮೊದಲ ಚಿತ್ರದಲ್ಲಿಯೇ ಶಿವಾಂಗಿ ವರ್ಮಾ ತೆರೆ ಹಂಚಿಕೊಳ್ಳುತ್ತಿದ್ದಾರೆ.  ಇವರಿಗೆ ಪತ್ನಿ  ಸುಧಾ ಹಾಗೂ  ಪಲ್ಲವಿ, ಮೇಘಾ ಮತ್ತು ಪ್ರಗತಿ ಎಂಬ ಮೂರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಪಲ್ಲವಿ ಮತ್ತು ಮೇಘಾ ಅವರ ಮದುವೆ ಕೂಡ ಆಗಿದೆ. 

ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...
 

click me!