ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ ದಯಾಳ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಕುಝಂಧಿಗಲ್ ಮುನ್ನೇತ್ರ ಕಳಗಂ' ಚಿತ್ರದ ಪತ್ರಿಕಾಗೋಷ್ಠಿಯ ತಯಾರಿಯಲ್ಲಿದ್ದಾಗ ಹಠಾತ್ ಅನಾರೋಗ್ಯಕ್ಕೆ ಈಡಾಗಿ ನಿಧನರಾದರು.
ಸಿನಿಮಾ ಲೋಕದಲ್ಲಿ ಒಬ್ಬರ ನಂತರ ಒಬ್ಬರು ಯಾರೂ ಊಹಿಸದ ರೀತಿಯಲ್ಲಿ ಸಾವುಗಳು ಸಂಭವಿಸುತ್ತಿವೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ ದಯಾಳ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಿಸೆಂಬರ್ 19ರಂದು 47 ವರ್ಷದ ಶಂಕರ್ ದಯಾಳ್ ತಮ್ಮ ಮುಂದಿನ ಚಿತ್ರ ಕುಝಂಧಿಗಲ್ ಮುನ್ನೇತ್ರ ಕಳಗಂನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾಗ ಹಠಾತ್ ಅನಾರೋಗ್ಯಕ್ಕೆ ಈಡಾದರು.
2012 ರಲ್ಲಿ ನಟ ಕಾರ್ತಿ ಅಭಿನಯದ ಸಗುಣಿ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಿತರಾದವರು ಶಂಕರ್ ದಯಾಳ್. ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಿಸಿದ್ದ ಈ ಚಿತ್ರದಲ್ಲಿ ನಟ ಕಾರ್ತಿ ನಾಯಕನಾಗಿ ನಟಿಸಿದ್ದರು. ಕಾರ್ತಿ ಮತ್ತು ಸಂತಾನಂ ನಡುವಿನ ಹಾಸ್ಯ ದೃಶ್ಯಗಳು ಇಂದಿಗೂ ಅನೇಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿವೆ. ಈ ಚಿತ್ರದಲ್ಲಿ ಕಾರ್ತಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ನಟಿಸಿದ್ದರು. ಪ್ರಕಾಶ್ ರಾಜ್, ಕೋಟ ಶ್ರೀನಿವಾಸ ರಾವ್, ರಾಧಿಕಾ, ನಾಸರ್, ಕಿರಣ್ ರತೋಡ್, ವಿ ಎಸ್ ರಾಘವನ್, ಮನೋಬಾಲ, ಆಡುಕಳಂ ನರೇನ್, ಚಿತ್ರಾ ಲಕ್ಷ್ಮಣನ್, ಮೀರಾ ಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದರು.
undefined
ಹಿಟ್ ಚಿತ್ರ ಬಳಿಕ ಸತತ ಸೋಲಿನ ಕಾರಣಕ್ಕೆ ಚಿತ್ರರಂಗ ತೊರೆದ್ರಾ ಈ ಸ್ಟಾರ್‌ಗಳು?
ಅನುಷ್ಕಾ ಶೆಟ್ಟಿ, ದೇವದರ್ಶಿನಿ, ಆಂಡ್ರಿಯಾ ಜೆರ್ಮಿಯಾ, ಚಂದ್ರಾ ಮೋಹನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದರೂ, ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಈ ಚಿತ್ರದ ನಂತರ, ನಿರ್ದೇಶಕ ಶಂಕರ್ ದಯಾಳ್ ಸುಮಾರು 12 ವರ್ಷಗಳ ನಂತರ ನಿರ್ದೇಶಿಸಿದ ಚಿತ್ರ 'ಕುಝಂಧಿಗಲ್ ಮುನ್ನೇತ್ರ ಕಳಗಂ'. ಈ ಚಿತ್ರದ ಪ್ರಚಾರಕ್ಕಾಗಿ ಪತ್ರಕರ್ತರನ್ನು ಭೇಟಿಯಾಗಲು ಶಂಕರ್ ದಯಾಳ್ ಬಂದಿದ್ದರು. ಆಗ ಅಸ್ವಸ್ಥತೆ ಉಂಟಾಗಿ ಎದೆನೋವು ಇದೆ ಎಂದು ಹೇಳಿದ್ದರಿಂದ ಅಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ದಾರಿ ಮಧ್ಯೆಯೇ ಶಂಕರ್ ದಯಾಳ್ ನಿಧನರಾದ ಘಟನೆ ಆಘಾತವನ್ನುಂಟು ಮಾಡಿದೆ.
ಜೈಲಿನಿಂದಲೇ ಪರೀಕ್ಷೆ ಪಾಸ್ ಮಾಡಿದ್ದ ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ ಚೌಟಾಲಾ ನಿಧನ
ಶಂಕರ್ ದಯಾಳ್ ನಿರ್ದೇಶಿಸಿ ಮುಗಿಸಿರುವ 'ಕುಝಂಧಿಗಲ್ ಮುನ್ನೇತ್ರ ಕಳಗಂ' ಚಿತ್ರದಲ್ಲಿ ನಟ ಸೆಂಥಿಲ್ ಮತ್ತು ಯೋಗಿ ಬಾಬು ನಾಯಕರಾಗಿ ನಟಿಸಿದ್ದಾರೆ. ರಾಜಕೀಯ ವ್ಯಂಗ್ಯ ಹಾಸ್ಯ ಚಿತ್ರವಾಗಿ ಈ ಚಿತ್ರವನ್ನು ತಯಾರಿಸಲಾಗಿದೆ ಎನ್ನಲಾಗಿದೆ. ಮುಂದಿನ ವರ್ಷ ಬೇಸಿಗೆ ರಜೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾಗಬೇಕಿದ್ದ ಈ ಚಿತ್ರದ ಬಿಡುಗಡೆಗೆ ಮುನ್ನವೇ ಶಂಕರ್ ದಯಾಳ್ ನಿಧನರಾಗಿದ್ದಾರೆ.