ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಸಮ್‌ಥಿಂಗ್ ಈಸ್ ರಾಂಗ್ ಆದಂಗಿದೆ. ಇವರಿಬ್ಬರ ಹದಿನಾರು ವರ್ಷದ ದಾಂಪತ್ಯಕ್ಕೆ ಹುಳಿ ಹಿಂಡಿದವರ್ಯಾರು? ನಿಜಕ್ಕೂ ಇವರಿಬ್ಬರ ನಡುವೆ ಏನ್ ನಡೀತಿದೆ?
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ಆಗಿ ವರ್ಷ ಹದಿನಾರು ವರ್ಷ ಕಳೆದಿದೆ. ಮಗಳು ಆರಾಧ್ಯಳಿಗೆ ಹನ್ನೊಂದು ವರ್ಷ ಕಳೆದಿದೆ. ಇದೀಗ ಹನ್ನೊಂದು ವರ್ಷ ಹರೆಯದ ಆರಾಧ್ಯ ಕೋರ್ಟ್ ಮೆಟ್ಟಿಲೇರಿ ಫುಲ್ ಹೈಪ್ ಕ್ರಿಯೇಟ್ ಮಾಡಿದ್ದಾಳೆ. ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಬಗ್ಗೆ ಸುಳ್ಳು ಸುದ್ದಿ ಪ್ರಕಟ ಮಾಡಿರುವುದನ್ನು ಪ್ರಶ್ನಿಸಿ ಈ ಪುಟಾಣಿ ಕೋರ್ಟ್ ಮೊರೆ ಹೋಗುವ ಧೈರ್ಯ ಮೆರೆದಿದ್ದಾಳೆ. ಈಕೆಯ ಬಗ್ಗೆ ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಇನ್ನೊಂದೆಡೆ ಮತ್ತೊಂದು ಗಾಳಿ ಸುದ್ದಿ ರೆಕ್ಕೆ ಪುಕ್ಕ ಹಚ್ಚಿಕೊಂಡು ಹರಿದಾಡುತ್ತಿದೆ. ಈ ವಿಚಾರ ಅಭಿಷೇಕ್‌ವರೆಗೂ ತಲುಪಿದಂತಿದೆ. ಅವರು ಈ ಬಗ್ಗೆ ತೇಪೆ ಹಚ್ಚೋ ಕೆಲಸ ಮಾಡಿದರೂ ಹಲವರ ಅನುಮಾನ ಪರಿಹಾರ ಆಗಿಲ್ಲ. ಅಭಿ ಮತ್ತು ಐಶ್ ನಡುವೆ ಎಲ್ಲವೂ ಸರಿಯಿಲ್ಲ. ಏನೋ ಸಮಸ್ಯೆ ಆಗಿದೆ ಅನ್ನೋ ಮಾತು ಕೇಳಿಬರ್ತಿದೆ. ಅಷ್ಟಕ್ಕೂ ಇವರ ದಾಂಪತ್ಯಕ್ಕೆ ಏನಾಯ್ತು. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅಂತ ಜಗತ್ತಿಗೆ ಹೇಗೆ ಗೊತ್ತಾಯ್ತು ಅನ್ನೋದೇ ಇಂಟರೆಸ್ಟಿಂಗ್ ವಿಚಾರ.
ಅಂದ ಹಾಗೆ ಐಶ್ ಹಾಗೂ ಅಭಿ ನಡುವಿನ ಸಂಬಂಧದ ಕುರಿತಂತೆ ಕೊಂಚ ಗಾಸಿಪ್ ಹಬ್ಬಿದ್ದು ಇತ್ತೀಚೆಗೆ ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮ ನಡೆದಾಗ. ಸಮರಾಂಭ ಏನೋ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಪುತ್ರಿ ಆರಾಧ್ಯ ಬಚ್ಚನ್ ಜೊತೆಗೆ ಐಶ್ವರ್ಯಾ ರೈ ಭೇಟಿ ಕೊಟ್ಟಿದ್ದರು. ಅಮ್ಮ - ಮಗಳು ಕ್ಯಾಮರಾ ಕಣ್ಣುಗಳಿಗೆ ಪೋಸ್ ನೀಡಿದರು. ಅಂಬಾನಿ ಕುಟುಂಬಕ್ಕೆ ಬಚ್ಚನ್ ಫ್ಯಾಮಿಲಿ ಆತ್ಮೀಯರಾಗಿದ್ದರೂ, ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಗೆ ಐಶ್ವರ್ಯಾ ರೈ ಜೊತೆಗೆ ಪತಿ ಅಭಿಷೇಕ್ ಬಚ್ಚನ್ ಹಾಜರಾಗಲಿಲ್ಲ. ಇದಕ್ಕೆ ಕಾರಣ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಎಂದು ಗುಲ್ಲೆಬ್ಬಿತು.
undefined
ಕಳೆದ ಕೆಲವು ದಿನಗಳಿಂದ ನಡೆದ ಪಾರ್ಟಿ, ಫಂಕ್ಷನ್‌ಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಬಹಳ ಕಾಲದಿಂದ ಈ ಜೋಡಿ ಹೊರಗೆಲ್ಲೂ ಜೊತೆಯಾಗಿ ಕಾಣಿಸಿಕೊಳ್ಳದ ಕಾರಣ ಈ ಬಗ್ಗೆ ಸಮ್ ಥಿಂಗ್ ಈಸ್ ಗೋಯಿಂಗ್ ರಾಂಗ್ ಅನ್ನೋ ಮಾತುಗಳು ಆಪ್ತವಲಯದಿಂದ ಕೇಳಿಬರತೊಡಗಿತು.
ಕೆಂಪು ಬಸ್ ಏರಿ ಮಸ್ತ್ ಪೋಸ್ ನೀಡಿದ ಸಾರಾ ಅಲಿ ಖಾನ್; ಫೋಟೋ ವೈರಲ್
ಈ ಮಾತು ಅಭಿಷೇಕ್ ಬಚ್ಚನ್ ವರೆಗೂ ತಲುಪಿದೆ. ತನ್ನ ಪತ್ನಿ ಹಾಗೂ ಮಗಳ ಫೋಟೋಗೆ ಕಮೆಂಟ್(Comment) ಮಾಡಿದ ಅಭಿಷೇಕ್ ಅವರಿಬ್ಬರೂ ತನ್ನ ಅಚ್ಚುಮೆಚ್ಚಿನವರು ಅಂದಿದ್ದಾರೆ. ಅಷ್ಟಾದರೂ ಇವರಿಬ್ಬರ ಬಗ್ಗೆ ಗುಲ್ಲು ಕಡಿಮೆ ಆಗಿಲ್ಲ. ಆದರೆ ಈ ಗೊಂದಲ ಎಲ್ಲ ಬಗೆ ಹರಿದಿರುವುದು ಎರಡು ದಿನಗಳ ಕೆಳಗೆ. ಅಂದು ಈ ಇಬ್ಬರ ಹದಿನಾರನೇ ಮ್ಯಾರೇಜ್ ಆನಿವರ್ಸರಿ. ಐಶ್ವರ್ಯಾ ರೈ ತಾವಿಬ್ಬರೂ ಕ್ಲೋಸ್ ಆಗಿರೋ ಫೋಟೋ(Photo) ಹಾಕಿ ಆನಿವರ್ಸರಿ ಸೆಲೆಬ್ರೇಶನ್ (Celebretion) ಸಿಹಿ ಸುದ್ದಿ ಹೇಳಿದರು. ಇದನ್ನು ನೋಡಿದ ಮೇಲೆ ಎಲ್ಲ ಗಾಳಿ ಸುದ್ದಿಗಳೂ ತಣ್ಣಗಾಗಿವೆ. ಇಬ್ಬರ ನಡುವೆ ತಾವಂದುಕೊಂಡ ಹಾಗೆ ಏನೂ ಇದ್ದಂಗಿಲ್ಲ, ಇಬ್ಬರೂ ಚೆನ್ನಾಗಿದ್ದಾರೆ ಅನ್ನೋದು ಈ ಗುಲ್ಲೆಬ್ಬಿಸಿದವರಿಗೂ ತಿಳಿದ ಹಾಗಿದೆ.
ಅಂದ ಹಾಗೆ ಈ ಜೋಡಿ ಗುರು’, ‘ಕುಚ್ ನಾ ಕಹೋ’, ‘ರಾವಣ್’ ಮುಂತಾದ ಸಿನಿಮಾಗಳಲ್ಲಿ(Cinema) ಜೊತೆಗಾಗಿ ತೆರೆ ಹಂಚಿಕೊಂಡಿದ್ದರು. ಏಪ್ರಿಲ್ 20, 2007 ರಂದು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಮಗಳು ಆರಾಧ್ಯ ಹುಟ್ಟಿದಳು. ಕಳೆದ 15 ವರ್ಷಗಳಿಂದ ಯಾವುದೇ ವಿವಾದಕ್ಕೆ ಸಿಲುಕದ ದಂಪತಿ ಇದೀಗಲೂ ತಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಅನ್ನೋದನ್ನು ಜಗತ್ತಿಗೆ ಸಾರಿದ್ದಾರೆ.
ರಾತ್ರಿ ಮನೆಗೆ ಬಾ ಇಬ್ರೂ ಸೇರಿ ಸೋಪ್ ಮಾಡಾಣ : ಜೂಲಿ ಲಕ್ಷ್ಮೀ ಮಗಳಿಗೆ ಇದೆಂಥಾ ಟಾರ್ಚರ್!