ದಯವಿಟ್ಟು ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡಬೇಡಿ; ಮೀನಾ ಪುತ್ರಿಯ ಮನವಿ ಕೇಳಿ ಕಣ್ಣೀರಿಟ್ಟ ರಜನಿಕಾಂತ್

Published : Apr 22, 2023, 01:50 PM IST
ದಯವಿಟ್ಟು ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡಬೇಡಿ; ಮೀನಾ ಪುತ್ರಿಯ ಮನವಿ ಕೇಳಿ ಕಣ್ಣೀರಿಟ್ಟ ರಜನಿಕಾಂತ್

ಸಾರಾಂಶ

ದಯವಿಟ್ಟು ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡಬೇಡಿ  ಎಂದು ಮೀನಾ ಪುತ್ರಿ ಆಡಿದ ಮಾತುಗಳನ್ನು ಕೇಳಿ ರಜನಿಕಾಂತ್ ಭಾವುಕರಾದರು. 

ಬಹುಭಾಷಾ ನಟಿ ಮೀನಾ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೀನಾ ಪಂಚಭಾಷಾ ತಾರೆಯಾಗಿ ಮೆರೆದರು. 90 ದಶಕದ ಅಗ್ರಗಣ್ಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ದಕ್ಷಿಣ ದ ಬಹುತೇಕ ಸ್ಟಾರ್ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಪೋಷಕನಟಿಯಾಗಿ ಮೀನಾ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿರುವ ಮೀನಾ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪತಿಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ನಟಿ ಮೀನಾ 40 ವರ್ಷದ ಸಂಭ್ರಮ ನಡೆಸಿದರು. ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಪ್ರಭುದೇವ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ನಟಿ ಮೀನಾ 2009ರಲ್ಲಿ ಬೆಂಗಳೂರು ಮೂಲದ ವಿದ್ಯಾಸಾಗರ್‌ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ನೈನಿಕಾ ಎಂಬ ಮಗಳು ಇದ್ದಾಳೆ. ನೈನಿಕಾ ಕೂಡ ಬಾಲ ನಟಿಯಾಗಿ ಸಿನಿಮಾದಲ್ಲಿ ನಟಿಸಿದ್ದಾಳೆ. ದಳಪತಿ ವಿಜಯ್ ನಟನೆಯ ಸೂಪರ್ ಹಿಟ್ 'ತೇರಿ' ಚಿತ್ರದಲ್ಲಿ ನೈನಿಕಾ ನಟಿಸಿದ್ದಾರೆ. ಸಂತೋಷದ ಜೀವನ ನಡೆಸುತ್ತಿದ್ದ ಮೀನಾ ಬದುಕದಲ್ಲಿ ಆ ವಿಧಿ ಆಡಿದ ಆಟ ಖಿನ್ನತೆಗೆ ನೂಕಿತ್ತು. ಮೀನಾ ಕಳೆದ ವರ್ಷ ತಮ್ಮ ಪತಿಯನ್ನು ಕಳೆದುಕೊಂಡರು. ಪತಿಯ ನಿಧನದ ಬಳಿಕ ತೀವ್ರ ದುಃಖದಲ್ಲಿದ್ದ ಮೀನಾಗೆ ಸುಳ್ಳು ಸುದ್ದಿಗಳ ಕಾಟ ಮತ್ತಷ್ಟು ಕುಗ್ಗುವಂತೆ ಮಾಡಿತ್ತು.

ಮೀನಾ 2ನೇ ಮದುವೆಗೆ ಸಿದ್ಧರಾಗಿದ್ದಾರೆ, ನಟ ಧನುಷ್ ಜೊತೆ ಮದುವೆ ಆಗುತ್ತಾರೆ, ಮೀನಾ ಮತ್ತು ಗರ್ಭಿಣಿ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪತಿಯನ್ನು ಕಳೆದುಕೊಂಡ ಬಳಿಕ ಮೀನಾ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿತ್ತು. ಸದ್ಯ ಈ ಎಲ್ಲಾ ನೋವು ಸಂಕಟದಿಂದ ಹೊರ ಬಂದಿರುವ ಮೀನಾ 40 ವರ್ಷದ ಕಾರ್ಯಕ್ರಮದಲ್ಲಿ ಸಂತಸದಿಂದ ಭಾಗಿಯಾಗಿದ್ದರು.  ವೇದಿಕೆಯಲ್ಲಿ ಮೀನಾ ಪುತ್ರಿ 12 ವರ್ಷದ ನೈನಿಕಾ ಆಡಿದ ಮಾತುಗಳು ಕಾರ್ಯಕ್ರಮದಲ್ಲಿ ಇದ್ದವರನ್ನು ಭಾವುಕರನ್ನಾಗಿ ಮಾಡಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣಲ್ಲೂ ನೀರು ಜಿನುಗಿತ್ತು. 

ವೇದಿಕೆಯಲ್ಲಿ ನೈನಿಕಾ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ವಿಡಿಯೋದಲ್ಲಿ ನೈನಿಕಾ ಅಮ್ಮನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು. ನೈನಿಕಾ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನಟಿ ಮೀನಾ ಜೊತೆ ಧನುಷ್ ಮದುವೆ; ಸ್ಪೋಟಕ ಹೇಳಿಕೆ ನೀಡಿದ ಕಾಲಿವುಡ್ ನಟನಿಗೆ ಅಭಿಮಾನಿಗಳ ತರಾಟೆ

'ಅಮ್ಮಾ, ನೀವು ತಾಯಿಯಾಗಿ ಮತ್ತು ನಟಿಯಾಗಿ ನನಗೆ ತುಂಬಾ ಹೆಮ್ಮೆ ಇದೆ. ನೀವು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀರಿ, ನಾನು ಚಿಕ್ಕವಳಿದ್ದಾಗ ನಾವು ಶಾಪಿಂಗ್ ಮಾಲ್‌ಗೆ ಹೋಗಿದ್ದೆವು ಅಲ್ಲಿ ನಾನು ಕಳೆದುಹೋಗಿದ್ದೆ. ನಾನು ಒಂದು ಅಂಗಡಿಯಲ್ಲಿ ಚಾಕಲೇಟ್ ತಿನ್ನುತ್ತಿದ್ದೆ ಆಗ ನೀನು ಭಯದಿಂದ ನನ್ನನ್ನು ಹುಡುಕುತ್ತಿದ್ದೆ. ಅಪ್ಪನ ನಿಧನದ ನಂತರ ನೀನು ತುಂಬಾ ಖಿನ್ನತೆಗೆ ಒಳಗಾಗಿದ್ದೀಯ. ನೀವು ಭಾವನಾತ್ಮಕವಾಗಿ ತುಂಬಾ ನೊಂದಿದ್ದೀಯಾ. ಇಂದಿನಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ' ಎಂದು ನೈನಿಕಾ ಹೇಳಿದರು. 

'ಕೆಲವು ಸುದ್ದಿ ವಾಹಿನಿಗಳು ನಿಮ್ಮ ಬಗ್ಗೆ ಕೆಟ್ಟದಾಗಿ ಮತ್ತು ನಕಾರಾತ್ಮಕವಾಗಿ ಬರೆಯುತ್ತಿವೆ. ನನ್ನ ತಾಯಿ ನಟಿ ಜೊತೆಗೆ ಮನುಷ್ಯಳಾಗಿರುವುದರಿಂದ ಇಂತಹ ಸುದ್ದಿಗಳನ್ನು ಬರೆಯುವುದನ್ನು ನಿಲ್ಲಿಸುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆ. ಅವಳು ತುಂಬಾ ನೋಯಿಸುತ್ತಾಳೆ' ಎಂದು ಕೇಳಿಕೊಂಡಿದ್ದಾರೆ. ನೈನಿಕಾ ಮಾತುಗಳನ್ನು ಕೇಳಿ ರಜನಿಕಾಂತ್ ಕೂಡ ಕಣ್ಣೀರಾಕಿದರು.

ನಟ ಧನುಷ್ ಜೊತೆ ಮದುವೆ ವಂದತಿ; ಕೊನೆಗೂ ಮೌನ ಮುರಿದ ನಟಿ ಮೀನಾ

ಮೀನಾ ಅವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಪುತ್ರಿ ನೈನಿಕಾ ಕೂಡ ಜೊತೆಯಲ್ಲೇ ಇದ್ದರು. ಸೂಪರ್ ಸ್ಟಾರ್ ರಜನಿಕಾಂತ್ ನೈನಿಕಾರನ್ನು ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸಿದರು. ಸೂಪರ್ ಸ್ಟಾರ್ ಮತ್ತು ನೈನಿಕಾ ಅವರ ಸುಂದರ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?