ವೀಲ್‌ಚೇರ್‌ನಲ್ಲೇ 3 ವರ್ಷ ಕಳೆದಿದ್ದ ವಿಕ್ರಮ್; ಸಾವಿನ ದವಡೆಯಿಂದ ಪಾರಾದ ಘಟನೆ ಬಿಚ್ಚಿಟ್ಟ ಖ್ಯಾತ ನಟ

Published : Apr 22, 2023, 01:01 PM ISTUpdated : Apr 22, 2023, 01:55 PM IST
ವೀಲ್‌ಚೇರ್‌ನಲ್ಲೇ 3 ವರ್ಷ ಕಳೆದಿದ್ದ ವಿಕ್ರಮ್; ಸಾವಿನ ದವಡೆಯಿಂದ ಪಾರಾದ ಘಟನೆ ಬಿಚ್ಚಿಟ್ಟ ಖ್ಯಾತ ನಟ

ಸಾರಾಂಶ

ವೀಲ್‌ಚೇರ್‌ನಲ್ಲೇ 3 ವರ್ಷ ಕಳೆದಿದ್ದ ಚಿಯಾನ್ ವಿಕ್ರಮ್, ಸಾವಿನ ದವಡೆಯಿಂದ ಪಾರಾದ ಘಟನೆ ಕಾಲಿವುಡ್ ಖ್ಯಾತ ನಟ ಬಿಚ್ಚಿಟ್ಟಿದ್ದಾರೆ. 

ಸೌತ್ ಸಿನಿಮಾರಂಗದ ಖ್ಯಾತ ನಟರಲ್ಲಿ ಚಿಯಾನ್ ವಿಕ್ರಮ್ ಕೂಡ ಒಬ್ಬರು. ತಮಿಳಿನ ಈ ಸ್ಟಾರ್ ಯಾವಾಗಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಪಾತ್ರಕ್ಕಾಗಿ ವಿಕ್ರಮ್ ಯಾವ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ. ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ನಡೆಸುವ ವಿಕ್ರಮ್ ಅನ್ನಿಯನ್ ಮತ್ತು ಐ ಅಂತಹ ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಚಿಯಾನ್ ವಿಕ್ರಮ್ ಅಪಘಾತದಲ್ಲಿ ಬದುಕುಳಿದು 3 ವರ್ಷಗಳು ವೀಲ್‌ಚೇರ್‌ನಲ್ಲೇ ಕಾಲ ಕಳೆದ ಘಟನೆ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆ?. ಬಹುತೇಕರಿಗೆ ಈ ಬಗ್ಗೆ ತಿಳಿದಿಲ್ಲ. ಚಿಯಾನ್ ವಿಕ್ರಮ್ ಒಮ್ಮೆ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಆ ಭಯಾನಕ ಘಟನೆ ಬಗ್ಗೆ ವಿವರಿಸಿದ್ದಾರೆ ಚಿಯಾನ್ ವಿಕ್ರಮ್. 

ಚಿಯಾನ್ ಸದ್ಯ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಇಡೀ ಸಿನಿಮಾತಂಡ ಪ್ರಚಾರದಲ್ಲಿ ನಿತರವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು ದೇಶದ ಅನೇಕ ಭಾಗಗಳಿಗೆ  ತೆರಳಿ ಸಿನಿಮಾತಂಡ ಪ್ರಚಾರ ಮಾಡುತ್ತಿದೆ. ಪ್ರಚಾರದ ವೇಳೆ ವಿಕ್ರಮ್ ಒಂದಿಷ್ಟು ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ವಿಕ್ರಮ್ ಕಾಲೇಜು ದಿನಗಳಲ್ಲೇ ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲೇ ನಟಿಸಿ ಉತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು ವಿಕ್ರಮ್. 

ಆದರೆ ಆ ಸಮಯದಲ್ಲೇ ವಿಕ್ರಮ್ ಅಪಘಾತದಿಂದ ತೀವ್ರ ಹಿನ್ನಡೆ ಅನುಭವಿಸಿದರು. ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿದ್ದರು. ಬಳಿಕ ಸಿಕ್ಕಾಪಟ್ಟೆ ಕಷ್ಟ ಅನುಭವಿಸಿದ್ದರು ವಿಕ್ರಮ್. ಆಕ್ಸಿಡೆಂಟ್‌ನಲ್ಲಿ ವಿಕ್ರಮ್ ಬಲಗಾಲಿಗೆ ತೀವ್ರ ಏಟಾಗಿತ್ತು. ಶೀಘ್ರದಲ್ಲೇ ಗುಣುಮುಖರಾಗಲು ಸಾಧ್ಯವಿಲ್ಲ ಎಂದು ಸಹ ವೈದ್ಯರು ಹೇಳಿದ್ದರು. ಆ ದಿನಗಳು ಅತ್ಯಂತ ಕೆಟ್ಟ ದಿನಗಳು ಎಂದು ವಿಕ್ರಮ್ ಹೇಳಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಕಾಲನ್ನೇ ಕತ್ತರಿಸಬೇಕು ಎಂದು ವೈದ್ಯರು ಹೇಳಿದ್ದರು, ಆದರೆ ಎಂದಿಗೂ ಆತ್ಮವಿಶ್ವಾಸ ಬಿಟ್ಟುಕೊಟ್ಟಿಲ್ಲ ಎಂದು ವಿಕ್ರಮ್ ಹೇಳಿದ್ದಾರೆ. 

ಗುರುತೇ ಸಿಗದ ಹಾಗೆ ಬದಲಾದ ಚಿಯಾನ್ ವಿಕ್ರಮ್; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಹೊಸ ಅವತಾರ

ಎಲ್ಲಾ ನೋವು ಮತ್ತು ಸಂಕಟಗಳ ನಡುವೆಯೂ ಚೇತರಿಸಿಕೊಳ್ಳಲು ಪ್ರಾರಂಭಿಸಿದೆ 23 ಕಡೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಬಳಿಕ ವೀಲ್‌ಚೇರ್ಗೆ ನನ್ನನ್ನು ಸ್ಥಳಾಂತರಿಸಬೇಕಾಯಿತು ಸುಮಾರು 3 ವರ್ಷಗಳ ಕಾಲ ವೀಲ್‌ಚೇರ್‌ನಲ್ಲೇ ಇರಬೇಕಾಯಿತು ಎಂದು ವಿಕ್ರಮ್ ಹೇಳಿದರು. 

'ನಾನು ನಟನಾಗಲು ಬಯಸಿದ್ದೆ ಅದೇ ನನ್ನನ್ನು ಮುಂದುವರಿಸಿದೆ' ಎಂದು ವಿಕ್ರಮ್ ಹೇಳಿದರು. 1990 ರಲ್ಲಿ "ಎನ್ ಕಾದಲ್ ಕಣ್ಮಣಿ" ಸಿನಿಮಾ ಮೂಲಕ ತಮ್ಮ ಮೊದಲ ದೊಡ್ಡ ಬ್ರೇಕ್ ಪಡೆದರು. ಕೆಟ್ಟ ಅನುಭವವು ಸಕಾರಾತ್ಮಕ ಪ್ರೇರಣೆಯ ಮೌಲ್ಯವನ್ನು ಕಲಿಸಿತು ಮತ್ತು ಸ್ವಯಂ-ಪ್ರೋತ್ಸಾಹವು ಕಠಿಣ ಸಮಯ ಡಾಟುವುದು ಹೇಗೆ ಎಂದು ಸಹಾಯ ಮಾಡಿತು ಎಂದು ವಿಕ್ರಮ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್; ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕೋಬ್ರಾ' ಸ್ಟಾರ್

ವಿಕ್ರಮ್ ಸದ್ಯ ಪ್ಯಾನ್ ಇಂಡಿಯನ್ ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಜಯಂ ರವಿ, ಐಶ್ವರ್ಯಾ ರೈ ಬಚ್ಚನ್, ಕಾರ್ತಿ ಮತ್ತು ತ್ರಿಷಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.  ಏಪ್ರಿಲ್ 28 ರಂದು ಈ ಸಿನಿಮಾ ಬಿಡುಗಡೆಗೆಯಾಗುತ್ತಿದೆ. ವಿಕ್ರಮ್ ಅವರ ವೃತ್ತಿಜೀವನದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ ಜೊತೆಗೆ ವಿಕ್ರಮ್ ನಿರ್ದೇಶಕ ಪಾ. ರಂಜಿತ್ ಜೊತೆ ತಂಗಲಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಮೇಕಿಂಗ್ ರಿಲೀಸ್ ಮಾಡಲಾಗಿದ್ದು ವಿಕ್ರಮ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?