Arun Bali Death; ರಶ್ಮಿಕಾ ಜೊತೆ ನಟಿಸಿದ್ದ 'ಗುಡ್‌‌ಬೈ' ಚಿತ್ರ ರಿಲೀಸ್ ದಿನವೇ ನಿಧನ ಹೊಂದಿದ ಹಿರಿಯ ನಟ

Published : Oct 07, 2022, 11:55 AM IST
Arun Bali Death; ರಶ್ಮಿಕಾ ಜೊತೆ ನಟಿಸಿದ್ದ 'ಗುಡ್‌‌ಬೈ' ಚಿತ್ರ ರಿಲೀಸ್ ದಿನವೇ ನಿಧನ ಹೊಂದಿದ ಹಿರಿಯ ನಟ

ಸಾರಾಂಶ

ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟ ಅರುಣ್​ ಬಾಲಿ ನಿಧನರಾಗಿದ್ದಾರೆ. 79 ವರ್ಷ ನಟ ಅರುಣ್ ಬಾಲಿ ಇಂದು (ಅಕ್ಟೋಬರ್ 7)  ಬೆಳಗ್ಗೆ 4.30ರ ಸುಮಾರಿಗೆ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 

ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟ ಅರುಣ್​ ಬಾಲಿ ನಿಧನರಾಗಿದ್ದಾರೆ. 79 ವರ್ಷ ನಟ ಅರುಣ್ ಬಾಲಿ ಇಂದು (ಅಕ್ಟೋಬರ್ 7)  ಬೆಳಗ್ಗೆ 4.30ರ ಸುಮಾರಿಗೆ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅರುಣ್ ಬಾಲಿ ನಟನೆಯ ಕೊನೆಯ ಸಿನಿಮಾ ಗುಡ್‌ಬೈ ಇಂದು ರಿಲೀಸ್ ಆಗಿದೆ. ಅವರ ಅಗಲಿಕೆಯ  ಸುದ್ದಿ ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ. ಅನೇಕ ಸಿನಿ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಸ್ವಾಭಿಮಾನ್ ಸಿನಿಮಾದ ಕನ್ವರ್ ಸಿಂಗ್ ಪಾತ್ರ ಅರುಣ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. 

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅರುಣ್ ಬಾಲಿ ಈ ವರ್ಷದ ಪ್ರಾರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು. ಅರುಣ್ ಬಾಲಿ ಅಪರೋಪದ ನರದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯದ ನಡುವೆಯೂ  ಅರುಣ್ ಬಾಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದರು. ಅರುಣ್ ಬಾಲಿ ಆಮೀರ್ ಖಾನ್ ನಟನೆಯ ಲಾಲ್ ಸಿಂಗ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಗುಡ್‌ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

ಬಣ್ಣದ ಲೋಕದಲ್ಲಿ ಅರುಣ್​ ಬಾಲಿ ಅವರಿಗೆ ಹಲವು ವರ್ಷಗಳ ಅನುಭವ ಇತ್ತು. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕ ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. 

ಬಾಲಿವುಡ್‌ನಲ್ಲಿ ರಶ್ಮಿಕಾ ಮಿಂಚಿಂಗ್; 'ಗುಡ್‌ಬೈ' ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ತಂದೆ ಅರುಣ್ ಬಾಲಿ ನಿಧನದ ಬಗ್ಗೆ ಪುತ್ರ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, 'ನನ್ನ ತಂದೆ ನಮ್ಮೆಲ್ಲರನ್ನು ಅಗಲಿದ್ದಾರೆ. ಅವರು ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ಬಳಲುತ್ತಿದ್ದರು. ಅವರಿಗೆ ಎರಡು ಮೂರು ದಿನಗಳಿಂದ ಮೂಡ್ ಸ್ವಿಂಗ್ ಇತ್ತು. ವಾಶ್‌ರೂಮ್‌ಗೆ ಹೋಗಬೇಕೆಂದು ಕೇರ್‌ಟೇಕರ್‌ಗೆ ಹೇಳಿದರು. ಬಳಿಕ ಹೊರಬಂದವರು  ಕುಳಿತುಕೊಳ್ಳುತ್ತೇನೆ ಎಂದರು. ಆದರೆ ಮತ್ತೆ ಏಳಲೇ ಇಲ್ಲ' ಎಂದು ಪುತ್ರ ಭಾವುಕರಾದರು.   

ಮೈ ಕಾಣೊ ಬಟ್ಟೆ ಧರಿಸಿ ಗಣೇಶ ದರ್ಶನ ಮಾಡಿದ ರಶ್ಮಿಕಾ ಮಂದಣ್ಣ ವಿರುದ್ಧ ನೆಟ್ಟಿಗರ ಆಕ್ರೋಶ

ಅರುಣ್ ಬಾಲಿ, ಶಾರುಖ್​ ಖಾನ್​ ನಟಿಸಿದ್ದ ದೂರ್ಸಾ ಕೇವಲ್​ ಧಾರಾವಾಹಿಯ ಮೂಲಕ 1989ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಶಾರುಖ್​ ಖಾನ್​ರ ಅಂಕಲ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಬಳಿಕ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಅವರು ಫೇಮಸ್​ ಆದರು. ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೌಗಂಧ್, ರಾಜು ಬನ್ ಗಯಾ ಜೆಂಟಲ್‌ಮ್ಯಾನ್, ಖಳನಾಯಕ್, ಸತ್ಯ, ಹೇ ರಾಮ್, ಲಗೇ ರಹೋ ಮುನ್ನಾ ಭಾಯ್, 3 ಈಡಿಯಟ್ಸ್, ರೆಡಿ, ಬರ್ಫಿ, ಮನ್ಮರ್ಜಿಯಾನ್, ಕೇದಾರನಾಥ್, ಸಾಮ್ರಾಟ್ ಪೃಥ್ವಿರಾಜ್ ಮತ್ತು ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಅವನೇಕ ಹಿಟ್ ಸಿನಿಮಾಗಳಲ್ಲಿ ಬಾಲಿ ನಟಿಸಿದ್ದಾರೆ. 

ಬಾಲಿ ಅವರ ಕೊನೆಯ ಸಿನಿಮಾ ಗುಡ್‌ಬೈ ಇಂದು ರಿಲೀಸ್ ಆಗಿದೆ. ರಸ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?