ಕಿರುತೆರೆ ನಟ ಲೋಕೇಶ್ ರಾಜೇಂದ್ರ ಆತ್ಮಹತ್ಯೆ; ದಾಂಪತ್ಯದಲ್ಲಿ ಬಿರುಕು?

By Vaishnavi Chandrashekar  |  First Published Oct 6, 2022, 2:44 PM IST

ವಿಡತ್ತು ಕರುಪ್ಪು ಧಾರಾವಾಹಿ ನಟ ಲೋಕೇಶ್ ಇನಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?


1996ರಲ್ಲಿ ತಮಿಳು ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ವಿಡತ್ತು ಕರುಪ್ಪು ಧಾರಾವಾಹಿಯಲ್ಲಿ ರಾಸು ಎಂದೇ ಜನಪ್ರಿಯತೆ ಪಡೆದುಕೊಂಡ ಬಾಲನಟ ಲೋಕೇಶ್‌ ಅಗಲಿದ್ದಾರೆ. 1996ರಿಂದ ಈಗಿನವರೆಗೂ ಲೋಕೇಶ್‌ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರುವ ನಟ, ಈಗ ಮಾಧ್ಯಮ ಸೇರುವ ಮನಸ್ಸು ಮಾಡಿದ್ದರು ಎನ್ನಲಾಗಿತ್ತು. ದುರ್ವಿಧಿ ಲೋಕೇಶ್‌ ಆತ್ಮಹತ್ಯೆ ಮಾಡಿಕೊಳ್ಳುವ ಜೀವನ ಈ ಬದುಕಿಗೆ ಅಂತ್ಯವಾಡಿದ್ದಾರೆ. 

ಹೌದು! 34 ವರ್ಷದ ಲೋಕೇಶ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ವೈವಾಹಿಕ ಜೀವನದಲ್ಲಿ ಆಗುತ್ತಿರುವ ಸಮಸ್ಯೆ ಎಂದಿದ್ದಾರೆ ಇನ್ನೂ ಕೆಲವರು ಹಣಕಾಸಿನ ಸಮಸ್ಯೆ ಎಂದಿದ್ದಾರೆ. ಲೋಕೇಶ್ ತಂದೆ ನೀಡಿರುವ ಮಾಹಿತಿ ಪ್ರಕಾರ 150 ಸೀರಿಯಲ್ ಮತ್ತು 15 ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರಂತೆ. 

Tap to resize

Latest Videos

'ಒಂದು ತಿಂಗಳ ಹಿಂದೆ ಲೋಕೇಶ್ ಮತ್ತು ಆವರ ಹೆಂಡತಿ ನಡುವೆ ಮನಸ್ತಾಪ ಆಗಿತ್ತು ಇದರಿಂದ ಬೇಸರಗೊಂಡು ಇಬ್ಬರೂ ವಿಚ್ಛೇದನವರೆಗೂ ಹೋಗಿದ್ದಾರೆ ಎನ್ನುವ ವಿಚಾರ ಗಮನಕ್ಕೆ ಬಂತು. ನಾಲ್ಕು ದಿನಗಳ ಹಿಂದೆ ಲೋಕೇಶ್‌ಗೆ ಲೀಗಲ್‌ ಡಿವೋರ್ಸ್‌ ನೋಟಿಸ್‌ ಕೂಡ ಬಂದಿತ್ತು. ಈ ವಿಚಾರದಿಂದ ಆತ ಡಿಪ್ರೆಸ್ ಆಗಿದ್ದ. ಕೊನೆಯ ಸಲ ನೋಡಿದ್ದು ಶುಕ್ರವಾರ ಆತನಿಗೆ ಹಣ ಅಗತ್ಯವಿತ್ತು ಕೇಳಿದ ನಾನು ಕೊಟ್ಟೆ. ಶೀಘ್ರದಲ್ಲಿ ಎಡಿಟರ್‌ ಆಗಿ ಕೆಲಸ ಆರಂಭಿಸುವುದಾಗಿ ನನಗೆ ಹೇಳಿದ' ಎಂದು ಲೋಕೇಶ್ ತಂದೆ ಹೇಳಿದ್ದಾರೆ.

ಜಿಯಾ ಖಾನ್ ಪ್ರಕರಣ: ಪಾಂಚೋಲಿಗೆ ಮುಗಿಯದ ಕಷ್ಟ, ನಟಿಯ ತಾಯಿಗೆ ನ್ಯಾಯಾಲಯ ಛೀಮಾರಿ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಲೋಕೇಶ್ ಕೆಲವು ತಿಂಗಳುಗಳಿಂದ ಮಧ್ಯಪಾನವನ್ನು ಹೆಚ್ಚಿಗೆ ಸೇವಿಸುತ್ತಿದ್ದರಂತೆ ಅಲ್ಲದೆ ಫ್ಯಾಮಿಲಿ ಕಲಹ ಹೆಚ್ಚಾದ ಮೇಲೆ ಚೆನ್ನೈನ ಮೊಫುಸಿಲ್ ಬಸ್ ಟರ್ಮಿನಸ್‌ನಲ್ಲಿ ಮಲಗುತ್ತಿದ್ದರಂತೆ. 

'ಸೋಮವಾರ ಬಸ್‌ ಟರ್ಮಿನಸ್‌ ಬಳಿ ಲೋಕೇಶ್ ಅಸ್ವಸ್ಥತೆವಾಗಿದದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಸ್ಥಳಿಯರು ಆಂಬ್ಯುಲೆನ್ಸ್‌ 108ಕ್ಕೆ ಕರೆ ಮಾಡಿದ್ದಾರೆ ಹಾಗೂ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ತಕ್ಷಣವೇ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಮಂಗಳವಾರ ಕೊನೆ ಉಸಿರೆಳೆದಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಷನ್ 174 Crpc ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಕೊನೆವರೆಗೂ ನಿನ್ನೇ ಪ್ರೀತಿಸುವೆ.. ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ನಟಿ

ಇಬ್ಬರು ಮುದ್ದಾದ ಮಗಳು, ಕುಟುಂಬಸ್ಥರು ಮತ್ತು ಆಪ್ತರನ್ನು ಅಗಲಿರುವ ಲೋಕೇಶ್ ಆತ್ಮಕ್ಕೆ ಶಾಂತಿ ಸಿಗಲಿ.

click me!