
ಸಿನಿವಾರ್ತೆ
ಯಶ್ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಸರಿ ಸುಮಾರು 6 ಕೋಟಿ ಹಿಟ್ಸ್ ಪಡೆದು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಯಶ್ ಬಗ್ಗೆ ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್‌ದಾಸ್ ಹಂಚಿಕೊಂಡಿರುವ ಅಭಿಪ್ರಾಯ ಟ್ರೆಂಡಿಂಗ್ ಆಗುತ್ತಿದೆ.
‘ಯಶ್ ಪ್ರತಿಭೆ ಮತ್ತು ಸ್ಟಾರ್‌ಡಮ್‌ಗಳ ಅಪರೂಪದ ಕಾಂಬಿನೇಶನ್. ಜಗತ್ತು ಇನ್ನೂ ನೋಡದ ರಾಯ ಪಾತ್ರದ ಅಭಿನಯಕ್ಕಾಗಿ ಮಾತ್ರವಲ್ಲ, ನಮ್ಮ ಚಿತ್ರಕ್ಕೆ ಪ್ರತಿದಿನ ತಂದ ಶಿಸ್ತು ಮತ್ತು ಹೃದಯವಂತಿಕೆಗಾಗಿ ಯಶ್ ಬಗ್ಗೆ ಅಪಾರ ಹೆಮ್ಮೆ ಇದೆ. ಈ ಪಾತ್ರವನ್ನು ತಮ್ಮೊಳಗೆ ಆವಾಹಿಸಿಕೊಳ್ಳುವ ಮೂಲಕ ತನ್ನ ನಟನೆಯ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನೇ ಕೆತ್ತಿದ್ದಾರೆ.
ಸಿನಿಮಾ ಮಾಡುವ ವೇಳೆ ನಮ್ಮ ನಡುವೆ ಪಾಟಿ ಸವಾಲುಗಳು ಎದುರಾಗುತ್ತಿದ್ದವು, ಪ್ರಶ್ನೆಗೆ ಪ್ರಶ್ನೆ ಬೆಳೆಯುತ್ತಿತ್ತು. ಆ ಮೂಲಕ ಅವರು ಪಾತ್ರವನ್ನು ಅನ್ವೇಷಿಸುತ್ತ ಹೋದರು, ಪಾತ್ರಕ್ಕೆ ಶರಣಾದರು. ಯಶ್ ಜೊತೆಗೆ ಈ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಕಥೆ ಹೇಳುವಿಕೆಯಲ್ಲಿನ ಆಳದ ಅರಿವಾಯ್ತು. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಅವರು ನೀಡಿದ ಬೆಂಬಲದಿಂದ ಒಂದೊಳ್ಳೆ ಅರ್ಥಪೂರ್ಣ ಸಿನಿಮಾ ಜರ್ನಿ ನನ್ನದಾಯಿತು’ ಎಂದಿದ್ದಾರೆ.
‘ಮುಂದೆ ಕೆಲವು ನಿರ್ದೇಶಕರು ಯಶ್ ಅವರ ಖ್ಯಾತಿಯ ಬೆನ್ನು ಹತ್ತಿ ಅವರಲ್ಲಿರುವ ಪ್ರತಿಭೆಯನ್ನು ಕಡೆಗಣಿಸುವ ಸಾಧ್ಯತೆ ಇದೆ. ಅವರಿಗೆ ನನ್ನ ಕಳಕಳಿಯ ಸಲಹೆ, ಮೊದಲು ಯಶ್ ಅವರ ಅದ್ಭುತ ನಟನಾ ಪ್ರತಿಭೆಯನ್ನು ಅನ್ವೇಷಿಸುವ ಧೈರ್ಯ ಮಾಡಿ. ಖ್ಯಾತಿಯ ಸುಂಟರಗಾಳಿಯಲ್ಲಿ ಅವರ ಪ್ರತಿಭೆ ಮರೆಯಾಗಿಸದಿರಿ’ ಎಂದೂ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.