ಗಳಿಕೆಯಲ್ಲಿ ಧೂಳೆಬ್ಬಿಸಿದ 'ದಿ ರಾಜಾ ಸಾಬ್'... ಮತ್ತೊಮ್ಮೆ 'ಬಾಕ್ಸ್ ಆಫೀಸ್‌ ಕಿಂಗ್‌' ಆದ ಡಾರ್ಲಿಂಗ್ ಪ್ರಭಾಸ್!

Published : Jan 10, 2026, 11:33 AM IST
Prabhas

ಸಾರಾಂಶ

ಪ್ರಭಾಸ್ ನೆಲವಾದ ಆಂಧ್ರಪ್ರದೇಶ, ತೆಲಂಗಾಣದಲ್ಲಿ 'ದಿ ರಾಜಾ ಸಾಬ್' ಅಕ್ಷರಶಃ ಹವಾ ಸೃಷ್ಟಿಸಿದೆ. ಮೊದಲ ದಿನ ಅಲ್ಲಿ ಒಟ್ಟಾರೆ ಶೇಕಡಾ 57.16 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಅದರಲ್ಲೂ ರಾತ್ರಿಯ ಪ್ರದರ್ಶನಗಳಿಗೆ ಅಭಿಮಾನಿಗಳು ಮುಗಿಬಿದ್ದಿದ್ದು, ಶೇ. 69.20 ರಷ್ಟು ಸೀಟುಗಳು ಭರ್ತಿಯಾಗಿದ್ದವು.

ಬಾಕ್ಸ್ ಆಫೀಸ್ ಸುಲ್ತಾನ್ ಪ್ರಭಾಸ್ ಆರ್ಭಟ: 'ದಿ ರಾಜಾ ಸಾಬ್' ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ದಂಗಾಗ್ತೀರಾ!

ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ (Darling Prabhas) ಅಂದ್ರೆ ಸಾಕು, ಅಲ್ಲಿ ದಾಖಲೆಗಳು ಧೂಳಿಪಟವಾಗಲೇಬೇಕು. ಈಗ ಅವರ ಬಹುನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ 'ದಿ ರಾಜಾ ಸಾಬ್' (The Raja Saab) ಬೆಳ್ಳಿ ಪರದೆಯ ಮೇಲೆ ಅಪ್ಪಳಿಸಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ನಿರ್ದೇಶಕ ಮಾರುತಿ ಮತ್ತು ಪ್ರಭಾಸ್ ಕಾಂಬಿನೇಷನ್‌ನ ಈ ಚಿತ್ರವು ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು, ಆ ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಮೊದಲ ದಿನದ ಕಲೆಕ್ಷನ್ ಎಷ್ಟು?

sacnilk ಜಾಲತಾಣದ ಆರಂಭಿಕ ಅಂದಾಜಿನ ಪ್ರಕಾರ, 'ದಿ ರಾಜಾ ಸಾಬ್' ಚಿತ್ರ ಮೊದಲ ದಿನವೇ ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಸುಮಾರು 45.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇನ್ನು ಗುರುವಾರ ನಡೆದ ವಿಶೇಷ 'ಪೇಯ್ಡ್ ಪ್ರಿವ್ಯೂ' ಪ್ರದರ್ಶನಗಳಿಂದ 9.15 ಕೋಟಿ ರೂಪಾಯಿ ಹರಿದು ಬಂದಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಚಿತ್ರವು ಮೊದಲ ದಿನವೇ 54.15 ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುವ ಮೂಲಕ ಭರ್ಜರಿ ಆರಂಭ ಪಡೆದಿದೆ.

ತೆಲುಗು ರಾಜ್ಯಗಳಲ್ಲಿ ಹಬ್ಬದ ವಾತಾವರಣ:

ಪ್ರಭಾಸ್ ಅವರ ತವರು ನೆಲವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 'ದಿ ರಾಜಾ ಸಾಬ್' ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದೆ. ಮೊದಲ ದಿನ ತೆಲುಗು ರಾಜ್ಯಗಳಲ್ಲಿ ಒಟ್ಟಾರೆ ಶೇಕಡಾ 57.16 ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಅದರಲ್ಲೂ ರಾತ್ರಿಯ ಪ್ರದರ್ಶನಗಳಿಗೆ ಅಭಿಮಾನಿಗಳು ಮುಗಿಬಿದ್ದಿದ್ದು, ಶೇ. 69.20 ರಷ್ಟು ಸೀಟುಗಳು ಭರ್ತಿಯಾಗಿದ್ದವು. ಹಿಂದಿ ಮಾರುಕಟ್ಟೆಯಲ್ಲಿ ಆರಂಭ ಸ್ವಲ್ಪ ನಿಧಾನವಾಗಿದ್ದರೂ (ಶೇ. 15.63), ರಾತ್ರಿಯ ಹೊತ್ತಿಗೆ ಅಲ್ಲಿಯೂ ಜನಸಂಖ್ಯೆ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಶೇ. 22.61 ರಷ್ಟು ಮಂದಿ ಸಿನಿಮಾ ವೀಕ್ಷಿಸಿದ್ದಾರೆ.

ಪ್ರಭಾಸ್ 'ಸ್ವಾಗ್'ಗೆ ಫ್ಯಾನ್ಸ್ ಫಿದಾ:

ನಿರ್ದೇಶಕ ಮಾರುತಿ ಅವರು ಪ್ರಭಾಸ್ ಅವರನ್ನು ಈ ಚಿತ್ರದಲ್ಲಿ ಅತ್ಯಂತ ವಿಭಿನ್ನವಾಗಿ ತೋರಿಸಿದ್ದಾರೆ. ಮಾಸ್ ಲುಕ್ ಜೊತೆಗೆ ಕಾಮಿಡಿ ಮತ್ತು ಹಾರರ್ ಎಲಿಮೆಂಟ್ಸ್ ಸೇರಿಸಿರುವುದು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಚಿತ್ರದಲ್ಲಿ ಸಂಜಯ್ ದತ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ಬೋಮನ್ ಇರಾನಿ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. ವಿಮರ್ಶಕರು ಈ ಚಿತ್ರಕ್ಕೆ 'ಮಿಶ್ರ ಪ್ರತಿಕ್ರಿಯೆ' ನೀಡಿದ್ದರೂ, ಪ್ರಭಾಸ್ ಅವರ ಆನ್-ಸ್ಕ್ರೀನ್ ಮ್ಯಾಜಿಕ್, ಸ್ಟೈಲಿಶ್ ನಡಿಗೆ ಮತ್ತು ಕಾಮಿಡಿ ಟೈಮಿಂಗ್ ಚಿತ್ರದ ಪ್ಲಸ್ ಪಾಯಿಂಟ್ ಎನ್ನಲಾಗಿದೆ.

ವಿಮರ್ಶೆಯ ಪ್ರಕಾರ, "ಪ್ರಭಾಸ್ ತಮ್ಮ ಹಳೆಯ ಲವಲವಿಕೆಯನ್ನು ಮರಳಿ ತಂದಿದ್ದಾರೆ. ಅವರ ಸ್ವಾಗ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೆಲವು ಕಡೆ ಕಥೆ ನಿಧಾನವೆನಿಸಿದರೂ, ಅಭಿಮಾನಿಗಳಿಗೆ ಮಾತ್ರ ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ."

ಮುಂದಿನ ದಿನಗಳ ಮೇಲೆ ಕಣ್ಣು:

ಒಟ್ಟಾರೆಯಾಗಿ ಹೇಳುವುದಾದರೆ, 'ಕಲ್ಕಿ' ಮತ್ತು 'ಕಣ್ಣಪ್ಪ' ಸಿನಿಮಾದ ನಂತರ ಪ್ರಭಾಸ್ ಮತ್ತೆ ಬಾಕ್ಸ್ ಆಫೀಸ್ ಬೇಟೆಯಾಡಲು ಸಜ್ಜಾಗಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಈ ಕಲೆಕ್ಷನ್ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಹಾರರ್ ಮತ್ತು ಕಾಮಿಡಿ ಮಿಶ್ರಿತ ಈ ಕೌಟುಂಬಿಕ ಮನರಂಜನಾ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿಗಳ ಗಡಿ ದಾಟಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

ಒಟ್ಟಿನಲ್ಲಿ, 'ದಿ ರಾಜಾ ಸಾಬ್' ಮೂಲಕ ಪ್ರಭಾಸ್ ಮತ್ತೊಮ್ಮೆ ತಾನೇಕೆ 'ಇಂಡಿಯನ್ ಬಾಕ್ಸ್ ಆಫೀಸ್ ಕಿಂಗ್' ಎಂಬುದನ್ನು ಸಾಬೀತುಪಡಿಸಿದ್ದಾರೆ! ಮುಂದಿನ ದಿನಗಳಲ್ಲಿ 'ದಿ ರಾಜಾ ಸಾಬ್' ಚಿತ್ರದ ಕಲೆಕ್ಷನ್ ಎಷ್ಟಾಗಲಿದೆ? ಈ ಸಿನಿಮಾ ಅದೆಷ್ಟು ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜನನಾಯಗನ್‌ಗೆ ಸಿಹಿ - ಕಹಿ! - ಜ.21ರವರೆಗೆ ವಿಜಯ್‌ ನಟನೆಯ ಚಿತ್ರ ಬಿಡುಗಡೆ ಇಲ್ಲ
ತಂದೆ-ಮಗ ಇಬ್ಬರ ಜೊತೆನೂ ರೊಮ್ಯಾನ್ಸ್ ಮಾಡಿದ ಸ್ಟಾರ್ ನಟಿಯರು