
ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ರೆ ಪತ್ನಿ ಗೌರಿ ಖಾನ್ ಇಂಟೀರಿಯರ್ ಡಿಸೈನರ್. ಖ್ಯಾತ ಡಿಸೈನರ್ ಆಗಿರುವ ಗೌರಿ ಖಾನ್ ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರ ಮನೆಯನ್ನು ವಿನ್ಯಾಸ ಮಾಡಿದ್ದಾರೆ. ಗೌರಿ ಖಾನ್ ವಿನ್ಯಾಸಕ್ಕೆ ಅನೇಕರು ಫಿದಾ ಆಗದ್ದಾರೆ. ಸ್ಟಾರ್ ಪತ್ನಿಯಾಗಿದ್ದರೂ ಗೌರಿ ಸೈಲೆಂಟ್ ಆಗಿ ಮನೆಯಲ್ಲಿ ಕೂರದೆ ತನ್ನದೆ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಗೌರಿ ಖಾನ್ ಡಿಸೈನ್ ಮಾಡಿಸಿದ್ದ ಪೆಂಗ್ವಿನ್ ಈಗ ಸಖತ್ ಟ್ರೋಲ್ ಆಗುತ್ತಿದೆ. ಟ್ರೋಲ್, ಮೀಮ್ಸ್ ಸ್ಟಾರ್‌ಗಳಿಗೆ ಹೊಸದೇನಲ್ಲ. ಗೌರಿ ಖಾನ್ ಕೂಡ ಹೊರತಲ್ಲ.
ಗೌರಿ ಖಾನ್ ಡಿಸೈನ್ ಮಾಡಿಸಿರುವ ಪೆಂಗ್ವಿನ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರದಿಂದ ಪೆಂಗ್ವಿನ್ ಮಾಡಲಾಗಿದೆ. ಪೆಂಗ್ವಿನ‌್‌ಗೆ ಗೋಲ್ಡನ್ ಬಣ್ಣ ಹಾಕಲಾಗಿದೆ. ಅಂದಹಾಗೆ ಗೌರ್ ಖಾನ್ ಡಿಸೈನ್ ಮಾಡಿಸಿರುವ ಪೆಂಗ್ವಿನ್ ಆನ್‌ನಲ್ಲಿದೆ. ಆದರೆ ಬೆಲೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಪೆಂಗ್ವಿನ್ ಆಕಾರದಲ್ಲೇ ಇರದ ಡಿಸೈನ್ ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದರ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಮರದ ತುಂಡಿನಲ್ಲಿ ಮಾಡಿರುವ ಈ ಪೆಂಗ್ವಿನ್‌ನ ಬೆಲೆ ಬರೋಬ್ಬರಿ 12,390. ಆನ್‌ಲೈನ್‌ನಲ್ಲಿ ಇದರ ಬೆಲೆ ನೋಡಿ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಶಾರುಖ್ ಖಾನ್ ಪತ್ನಿ ವಿರುದ್ಧ FIR ದಾಖಲು; ಹಣ ಪಡೆದರೂ ಅಮಾಯಕರ ಮನೆ ಮೇಲೆ ಕಣ್ಣಾಕಿರುವ ಗೌರಿ?
ಅಂದಹಾಗೆ ಇದು ಟಾಟಾ ಕಂಪನಿಯ ಟಾಟಾ ಕ್ಲಿಕ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ನಲ್ಲಿ ಇದೆ. ಗೋಲ್ಡನ್ ಬಣ್ಣ ಹಾಕಿರುವ ಪೆಂಗ್ವಿನ್‌ನ ಬೆಲೆ ಬರೋಬ್ಬರಿ 12,390 ಇದ್ರೆ ಬಣ್ಣದ ಹಾಕದೆ ಇರುವ ಪೆಂಗ್ವಿನ್‌ನ ಬೆಲೆ 10,030. ಇದನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಇದನ್ನು ಪೆಂಗ್ವಿನ್ ಅಂತ ಹೇಳಲು ಸಾಧ್ಯವೇ ಇಲ್ಲ, ಇದಕ್ಕೆ ಇಷ್ಟೊಂದು ಬೆಲೆನಾ ಎಂದು ಕಿಡಿ ಕಾರುತ್ತಿದ್ದಾರೆ.
Gauri Khan: ಇಷ್ಟು ಸುಂದರಿ ಯಾವಾಗಾದ್ರಿ? ಫೋಟೋದಿಂದ ಟ್ರೋಲ್ ಆದ ಶಾರುಖ್ ಪತ್ನಿ!
ಇದನ್ನು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿುತ್ತಿದ್ದಾರೆ. ಒಬ್ಬರು 'ಇದನ್ನ ನೋಡಿದ್ರೆ ಯಾರಾದ್ರು ಪೆಂಗ್ವಿನ್ ಅಂತ ಹೇಳ್ತಾರಾ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ನೂರ್ ರೂಪಾಯಿಗೆ ಇಂಥವ್ ಬೇಜಾನ್ ಸಿಗತ್ತೆ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಇದನ್ನು ಕೊಂಡುಕೊಳ್ಳುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಗೌರಿ ಖಾನ್ ಡಿಸೈನ್ ಮಾಡಿರುವ ಪೆಂಗ್ಲಿನ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.