ಮಗಳ ಫಸ್ಟ್ ನೈಟ್‌ಗೆ ಹಾಸಿಗೆ ರೆಡಿ ಮಾಡಿದ ತಾಯಿ; ಅಮ್ಮನ ಆಸೆಯಂತೆ ಖ್ಯಾತ ನಟಿಯ ಮಧುಚಂದ್ರ

Published : Mar 04, 2023, 01:21 PM IST
ಮಗಳ ಫಸ್ಟ್ ನೈಟ್‌ಗೆ ಹಾಸಿಗೆ ರೆಡಿ ಮಾಡಿದ ತಾಯಿ; ಅಮ್ಮನ ಆಸೆಯಂತೆ ಖ್ಯಾತ ನಟಿಯ ಮಧುಚಂದ್ರ

ಸಾರಾಂಶ

ನಟಿ ಸ್ವರಾ ಭಾಸ್ಕರ್ ಫಸ್ಟ್ ನೈಟ್ ಬೆಡ್ ರೆಡಿ ಮಾಡಿಸಿದ್ದು ಅವರ ತಾಯಿ ಎಂದು ಬಹಿರಂಗ ಪಡಿಸಿದ್ದಾರೆ. ತಾಯಿಯ ಆಸೆಯಂತೆ ಫಸ್ಟ್ ನೈಟ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. 

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಫೆಬ್ರವರಿ 17 ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ  ಶಾಕ್ ನೀಡಿದ್ದರು. ಸ್ವರಾ ಪತಿ ಫಹಾದ್ ಅಹ್ಮದ್ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಇಬ್ಬರದ್ದು ಲವ್ ಮ್ಯಾರೇಜ್. ಇವರು ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸ್ವರಾ ಫಹಾದ್ ಜೊತೆ ಮದುವೆಯಾಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆದರು. ಶ್ರದ್ದಾ ಹಾಗೆ ಇವಳು ಸಾಯ್ತಾಳೆ, ಫ್ರಿಜ್, ಸೂಟ್‌ಕೇಸ್ ಅಂತ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದರು. ಆದರೆ ಎಲ್ಲದಕ್ಕೂ ಸ್ವರಾ ತಿರುಗೇಟು ನೀಡಿದ್ದರು. ಈ ಎಲ್ಲಾ  ಚರ್ಚೆಯ ನಡುವ ಸ್ವರಾ ಫಸ್ಟ್ ನೈಟ್ ಬೆಡ್‌ರೂಮ್ ಫೋಟೋವನ್ನು ಶೇರ್ ಮಾಡಿ ಮತ್ತೆ ಟ್ರೋಲ್ ಆಗಿದ್ದರು. 

ಫಸ್ಟ್ ‌ನೈಟ್ ಬೆಡ್ ರೂಮ್ ಫೋಟೋ ಶೇರ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಂತೆ ಬಳಿಕ ಡಿಲೀಟ್ ಮಾಡಿದರು. ಫಿಲ್ಮಿ ಶೈಲಿಯ ಫಸ್ಟ್ ನೈಟ್ ಡೆಕೋರೇಷನ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮಧುಚಂದ್ರದ ಹಾಸಿಗೆಯನ್ನು ಅಲಂಕರಿಸಲಾಗಿತ್ತು. ಅವರ ಹಾಸಿಗೆಯನ್ನು ಗುಲಾಬಿಗಳು ಮತ್ತು ವಿವಿಧ ರೀತಿಯ ಹೂವುಗಳಿಂದ ಅಲಂಕಾರಮಾಡಲಾಗಿತ್ತು. ಫೋಟೋ ಶೇರ್ ಮಾಡಿ ಸ್ವರಾ ತಮ್ಮ ತಾಯಿಗೆ ಧನ್ಯವಾದ ತಿಳಿಸಿದ್ದರು. 

ಶ್ರದ್ಧಾಳಂತೆ ಇವಳು ಸಾಯಬಹುದು, ಫಹಾದ್ ಮದ್ವೆಯಾದ ಸ್ವರಾ ವಿರುದ್ಧ ಸಾಧ್ವಿ ವಾಗ್ದಾಳಿ

ಸಿನಿಮಾ ಸ್ಟೈಲ್​ನಲ್ಲಿಯೇ ಬೆಡ್​ರೂಂ ಶೃಂಗಾರ ಮಾಡಲಾಗಿದೆ. ಇದನ್ನು ಮಾಡಲು ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಇದು ತುಂಬಾ ಸುಂದರವಾಗಿದೆ. ಸಿನಿಮಾ ಮಾದರಿಯಲ್ಲಿ ಮೊದಲ ರಾತ್ರಿಯ ಸೀನ್​ ಇರುವ ರೀತಿಯಲ್ಲಿ ಇದನ್ನು ಶೃಂಗಾರ ಮಾಡಲಾಗಿದೆ ಎಂದು ಸ್ವರಾ ಹೇಳಿಕೊಂಡಿದ್ದರು. ಫಿಲ್ಮಿ ಶೈಲಿಯಲ್ಲಿ ಫಸ್ಟ್ ನೈಟ್ ಮಾಡಿಕೊಳ್ಳಬೇಕು ಎನ್ನುವುದು ಸ್ವರಾ ತಾಯಿಯ ಆಸೆಯಾಗಿದ್ದಂತೆ. ಹಾಗಾಗಿ ಸ್ವತಃ ಸ್ವರಾ ತಾಯಿಯೇ ಮುಂದೆ ನಿಂದು ಬೆಡ್ ರೂಮ್ ಡೆಕೋರೇಶನ್ ಮಾಡಿಸಿದ್ದರು. ತಾಯಿಯ ನಿರ್ಧಾರದಂತೆ ಸ್ವರಾ ಭಾಸ್ಕರ್ ಮತ್ತು ಫಹಾದ್ ಫೈಸ್ಟ್ ನೈಟ್ ನಡೆದಿತ್ತಂತೆ. 

ಅಣ್ಣ ಎಂದು ಕರೆದ ಪತ್ನಿ; ವೈರಲ್ ಟ್ವೀಟ್‌ಗೆ ಕೊನೆಗೂ ಮೌನ ಮುರಿದ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್

ಪತಿಗೆ ಅಣ್ಣಾ ಎಂದು ಟ್ರೋಲ್ ಆಗಿದ್ದ  ಸ್ವರಾ 

ಅಂದಹಾಗೆ ಸ್ವರಾ ಮದುವೆಯ ಸಂಬಂಧ ಟ್ರೋಲ್​ ಆಗುತ್ತಿರುವುದು ಇದೇ ಮೊದಲಲ್ಲ. ಅವರು ತಮ್ಮ ಪತಿಗೆ ಈ ಮೊದಲು  ಅಣ್ಣ (ಭಾಯ್) ಎಂದು ಕರೆದಿದ್ದರು. ಅದರ ಹಳೆಯ ವಿಡಿಯೋ ವೈರಲ್​ ಮಾಡಿ ಟ್ರೋಲ್​ ಮಾಡಲಾಗಿತ್ತು. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ' ಎಂದು ಹೇಳಿದ್ದರು. ಇದಾಗಿ ಎರಡೇ ವಾರಗಳಲ್ಲಿ ಮದುವೆಯ ಸುದ್ದಿಯನ್ನೂ ಕೊಟ್ಟು ಶಾಕ್​ ಕೊಟ್ಟಿದ್ದರು. ಇದು ಟ್ರೋಲ್​ ಆಗುತ್ತಲೇ ಸಂಘಿಗಳ ಮನವೊಲಿಸಲು ತಮ್ಮನ್ನು ಟ್ರೋಲ್​ ಮಾಡಲಾಗುತ್ತಿದೆ ಎಂದು ಸ್ವರಾ ಹೇಳಿಕೆ ಕೊಟ್ಟು ಮತ್ತಷ್ಟು ಟ್ರೋಲ್​ಗೆ ಒಳಗಾಗಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!