ರಾಮಾಯಣ ಸಿನಿಮಾದ ಫಸ್ಟ್ ಆಕ್ಷನ್ ಫೋಟೋಸ್ ರಿಲೀಸ್: ರಾವಣನಾಗಿ ಯಶ್ ಅಬ್ಬರ

Published : May 29, 2025, 10:43 AM ISTUpdated : May 30, 2025, 09:07 AM IST
Yash, Ramayana

ಸಾರಾಂಶ

ಭಾರತೀಯ‌ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರೋ ರಾಮಾಯಣ ಸಿನಿಮಾದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿಲೀಸ್ ಆಗಿದೆ.

ರಾಮಾಯಣ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಬಹು ಕೋಟಿ ವೆಚ್ಚದ ಸಿನಿಮಾ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಈ‌ ಸಿನಿಮಾದಲ್ಲಿ ಯಶ್ ಭಾಗಿಯಾಗಿದ್ದಾರೆ. ಭಾರತೀಯ‌ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರೋ ರಾಮಾಯಣ ಸಿನಿಮಾದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿಲೀಸ್ ಆಗಿದೆ. ರಾಮಾಯಣ ಸಿನಿಮಾಗಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ. ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy norris)ನಿರ್ದೇಶನ ಮಾಡುತ್ತಿದ್ದಾರೆ .

ರಾಮಾಯಣ ಭಾರತೀಯ‌ ಸಿನಿಮಾರಂಗದಲ್ಲಿಯೇ ಬಿಗ್ ಬಜೆಟ್ ಸಿನಿಮಾಗಳಲ್ಲೊಂದಾಗಿದೆ. ಈಗಾಗಲೇ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟುಕೊಂಡಿದ್ದು ಯಶ್ ನಟನೆ ಜೊತೆಗೆ ನಿರ್ಮಾಣ ಮಾಡ್ತಿದ್ದಾರೆ ಅನ್ನೋ ಸುದ್ದಿ ಗೊತ್ತಾದ ನಂತರ ಸಿನಿಮಾ ಮೇಲಿನ ಕುತೂಹಲ‌ ಮತ್ತಷ್ಟು ದುಪ್ಪಟ್ಟಾಗಿದೆ. ಇನ್ನು ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸುವುದನ್ನು ಕಣ್ತುಂಬಿಕೊಳ್ಳಲು ಕನ್ನಡಿಗರು ಮಾತ್ರವಲ್ಲ ಇಡೀ ಭಾರತೀಯ‌ ಸಿನಿಮಾರಂಗ ಕಾತುರದಿಂದ ಕಾಯುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೋಡಿಯಾಗಿರೋದು ಅಭಿಮಾನಿಗಳಲ್ಲಿ‌ ನಿರೀಕ್ಷೆ‌ ಹೆಚ್ಚು ಮಾಡಿದ್ದು , ಹಾಲಿವುಡ್ ನ‌ ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಮತ್ತು ದಿ ಸುಸೈಡ್ ಸ್ಕ್ವಾಡ್‌ಗಳಲ್ಲಿ ಸ್ಟಂಟ್ ಡೈರೆಕ್ಷನ್ ಮಾಡಿರೋ ಗೈ ನೋರಿಸ್ ರಾಮಾಯಣ ಸಿನಿಮಾಗೆ‌ ಯಾವ ರೀತಿ ಸ್ಟಂಟ್ಸ್ ಡೈರೆಕ್ಷನ್ ಮಾಡ್ತಾರೆ ಅನ್ನೋದೇ ಸದ್ಯದ ‌ಕುತೂಹಲ.ರಾಮಾಯಣ ಸಿನಿಮಾದಲ್ಲಿ‌ ರಾವಣನ‌ ಆಕ್ಷನ್ ಸೀನ್‌ಗಳು ಸಖತ್ ಲ್ಯಾವಿಷ್ ಆಗಿ ಶೂಟ್ ಮಾಡಲಿದ್ದು‌ ಸಿನಿಮಾದಲ್ಲಿ ವರ್ಲ್ಡ್ ಫೇಮಸ್ vfx ತಂಡಗಳು ಕೆಲಸ‌ ಮಾಡುತ್ತಿವೆ.

ಈಗಾಗಲೇ ಕೆಜಿಎಫ್ ಸಿನಿಮಾದಲ್ಲಿ ಯಶ್ ಅಬ್ಬರವನ್ನು ಸ್ಕ್ರೀನ್‌ಮೇಲೆ ನೋಡಿದ್ದು‌, ರಾಮಾಯಣ ಸಿನಿಮಾದಲ್ಲಿ ಜನರ‌ ನಿರೀಕ್ಷೆಗೂ ಮೀರಿದಂತಹ ದೃಶ್ಯಗಳನ್ನು ಕಟ್ಟಿಕೊಡಲು ಯಶ್ ಮುಂದಾಗಿದ್ದಾರೆ. ಹೈಓಲ್ಟೋಜ್ ಆಕ್ಷನ್ ಸೀನ್‌ಗಳನ್ನ ಈಗಾಗಲೇ‌ ಚಿತ್ರೀಕರಣ ಮಾಡುತ್ತಿದ್ದು ಭಾರತೀಯ‌ ಸಿನಿಮಾರಂಗದಲ್ಲೇ ಹಿಂದೆಂದೂ ಕಂಡಿರದ ಆಕ್ಷನ್ ಸೀನ್ ಗಳನ್ನು ಶೂಟ್ ಮಾಡಲು ತಂಡದೊಡನೆ ಸೇರಿ ಪ್ಲಾನ್ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ . ರಾಮಾಯಣ ಭಾಗ‌ 1 ಸುಮಾರು 60-70 ದಿನಗಳ ಕಾಲ‌ ಚಿತ್ರೀಕರಣ ಮಾಡಲಿದ್ದಾರೆ ರಾಕಿಂಗ್ ಸ್ಟಾರ್ ಯಶ್ .

ಇತ್ತೀಚಿಗೆ ಬಿಡುಗಡೆ ಆಗಿರುವ ರಾಮಾಯಣ ಸೆಟ್‌ನ ಫೋಟೋಗಳಲ್ಲಿ ಯಶ್‌ರನ್ನು ನೋಡಿದ್ರೆ ರಾವಣನ ಪಾತ್ರಕ್ಕೆ ಹೇಳಿ ಮಾಡಿಸಿದ ನಟ ಅನ್ನೋದು ಕನ್ಫರ್ಮ್ ಆಗುತ್ತೆ. ಯಶ್ ಪಾತ್ರಕ್ಕಾಗಿ ಮಾಡಿಕೊಂಡಿರುವ ತಯಾರಿ ಹಾಗೂ ಕೆಲಸ‌ದ ಮೇಲಿನ‌ ಶ್ರದ್ದೆ ಎದ್ದು ಕಾಣುತ್ತೆ. ಜಾಗತೀಕ ಮಟ್ಟಕ್ಕೆ ರಾವಣನ ಪಾತ್ರ ತಲುಪಿಸಲು ಯಶ್ ಸಿದ್ದವಾಗಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಯಶ್ ಹಾಗೂ ರಣಬೀರ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

ಜೊತೆಯಾಗಿ ಯಶ್ ರಾಮಾಯಣ ಚಿತ್ರಕ್ಕೆ ಕೋ ಪ್ರೊಡ್ಯೂಸರ್ ಆಗಿದ್ದಾರೆ. ನಟನೆ ಜೊತೆ ಜೊತೆಗೆ ಪ್ರತಿ ಹಂತದಲ್ಲಿಯೂ ಯಶ್ ಸಿನಿಮಾದ ಜೊತೆ ತೊಡಗಿಸಿಕೊಂಡಿದ್ದಾರೆ. ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ‌ ಮಾಡುತ್ತಿದ್ದು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ರಾಮಾಯಣ ಭಾಗ 1 2026, ದೀಪಾವಳಿ ರಿಲೀಸ್ ಆದರೆ ಎರಡನೇ ಭಾಗ 2027ಕ್ಕೆ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?