
ನಟ ರವಿ ಮೋಹನ್ ಕೆಲವು ದಿನಗಳ ಮೊದಲು ಒಂದು ಕಾರ್ಯಕ್ರಮದಲ್ಲಿ ಗಾಯಕಿ ಕೆನಿಷಾ ಜೊತೆ ಭಾಗವಹಿಸಿದ್ದರು. ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡಿದ್ದರು. ಇದರ ನಂತರ ಸಮಸ್ಯೆ ಬೃಹದಾಕಾರವಾಗಿ ಬೆಳೆಯಿತು. ಗಾಯಕಿ ಕೆನಿಷಾ ಮತ್ತು ನಟ ರವಿ ಮೋಹನ್ ನಡುವೆ ಸಂಬಂಧವಿದೆ ಎಂದೂ, ಇದರಿಂದಾಗಿ ರವಿ ಮೋಹನ್ ಮತ್ತು ಆರತಿ ಅವರ ದಾಂಪತ್ಯದಲ್ಲಿ ಸಮಸ್ಯೆ ಇದೆ ಎಂದೂ ಕೆಲವು ಕಾಲದಿಂದಲೂ ವದಂತಿ ಹಬ್ಬಿತ್ತು. ಆರತಿ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಸುಚಿತ್ರಾ ವಿರುದ್ಧ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು
ಈ ಹಿನ್ನೆಲೆಯಲ್ಲಿ ಸುಚಿತ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರತಿ ಅವರ ತಂದೆ ಕೃಷ್ಣಮೂರ್ತಿ ವಿಜಯಕುಮಾರ್ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ನೀಡಿದ್ದಾರೆ. ಆ ದೂರಿನಲ್ಲಿ, “ಸುಚಿತ್ರಾ ಅವರ ಅಶ್ಲೀಲ, ತಪ್ಪು ಹೇಳಿಕೆಗಳು ನನ್ನ ಮಗಳು ಮತ್ತು ಹೆಂಡತಿಯ ಗೌರವಕ್ಕೆ ಧಕ್ಕೆ ತರುತ್ತಿವೆ. ನನ್ನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಅವರು ಬಿಡುಗಡೆ ಮಾಡಿರುವ ವಿಡಿಯೋಗಳು ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿವೆ. ನಮ್ಮ ಗೌರವವನ್ನೂ ಪ್ರಶ್ನಾರ್ಹಗೊಳಿಸಿವೆ. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಗಳಿಸಿದ ಈ ಗೌರವವನ್ನು ಸುಚಿತ್ರಾ ಒಂದೇ ನಿಮಿಷದಲ್ಲಿ ಹಾಳು ಮಾಡಿದ್ದಾರೆ. ಆದ್ದರಿಂದ, ಸುಚಿತ್ರಾ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಅಡಿಯಲ್ಲಿ ವಿಚಾರಣೆ ನಡೆಸಬೇಕು” ಎಂದು ತಿಳಿಸಲಾಗಿದೆ.
ಡಿವೋರ್ಸ್ ಕಥೆ ಎಲ್ಲಿಗೆ ಬಂತು?
ರವಿ ಮೋಹನ್ ಕಡೆಯಿಂದ ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ಸಿಗಬೇಕು ಎಂದು ಆರತಿ ಅವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆರತಿ-ರವಿ ಮೋಹನ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿ 18 ವರ್ಷಗಳ ಕಾಲ ಸಂಸಾರ ಮಾಡಿದ್ದು, ಈಗ ಡಿವೋರ್ಸ್ ಹಾದಿಯಲ್ಲಿದೆ. ಇನ್ನು ಕೆನಿಷಾ ನನ್ನ ಜೀವನದ ಬೆಳಕು ಎಂದು ರವಿ ಮೋಹನ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.