ಆಕಳಿಸುತ್ತಿರುವ ಅಮಿತಾಭ್ ಬಚ್ಚನ್; ಮಧ್ಯರಾತ್ರಿ 3 ಗಂಟೆವರೆಗೂ ಕೆಲಸ ಮಾಡಿದ್ರೆ ಹೀಗೇ ಆಗೋದು ಎಂದ ನಟ

Published : Feb 18, 2023, 09:38 AM IST
ಆಕಳಿಸುತ್ತಿರುವ ಅಮಿತಾಭ್ ಬಚ್ಚನ್; ಮಧ್ಯರಾತ್ರಿ 3 ಗಂಟೆವರೆಗೂ ಕೆಲಸ ಮಾಡಿದ್ರೆ ಹೀಗೇ ಆಗೋದು ಎಂದ ನಟ

ಸಾರಾಂಶ

ಕೆಲಸದ ಬಗ್ಗೆ ಅಪ್ಡೇಟ್ ನೀಡಿದ ಅಮಿತಾಭ್ ಬಚ್ಚನ್. ಆಕಳಿಸುತ್ತಿರುವ ಫೋಟೋ ನೋಡಿ ನೆಟ್ಟಿಗರು ಶಾಕ್....ವಿಶ್ರಾಂತಿ ಪಡೆಯಿರಿ ಎಂದು ಸಲಹೆ.   

ಬಾಲಿವುಡ್ ಬಿಗ್ ಮ್ಯಾನ್ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಬಿಗ್ ಬಿ ವರ್ಕ್‌ ಲೈಫ್‌ ಮತ್ತು ಫ್ಯಾಮಿಲಿ ಬಗ್ಗೆ ನೀಡುವ ಅಪ್ಡೇಟ್ ಸಖತ್ ಡಿಫರೆಂಟ್ ಆಗಿರುತ್ತದೆ. ಈಗಿನ ಜನರೇಷನ್ ಮಕ್ಕಳಿಗೆ ಅಮಿತಾಭ್ ಅನೇಕ ರೀತಿಯಲ್ಲಿ ಲೈಫ್‌ ಗೋಲ್ ಸೆಟ್ ಮಾಡುತ್ತಾರೆ.ಅಲ್ಲದೆ ಇತ್ತೀಚಿಗೆ ಮಾಡಿದ ಇನ್‌ಸ್ಟಾಗ್ರಾಂ ಪೋಸ್ಟ್‌ ವೈರಲ್ ಆಗುತ್ತಿದೆ, ಅಮಿತಾಭ್‌ ಯಾವ ಪ್ರಾಜೆಕ್ಟ್‌ನಲ್ಲಿದ್ದಾರೆ ಗೊತ್ತಾ?

ಅಮಿತಾಭ್ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಸೂಟು ಬೂಟು ಧರಿಸಿ ಆಕಳಿಸುತ್ತಿದ್ದಾರೆ. 'ಬೆಳ್ಳಂಬೆಳಗ್ಗೆ 3 ಗಂಟೆಗೆ ಕೆಲಸ ಮುಗಿಸಿದರೆ ಹೀಗೆ ಆಗುವುದು' ಎಂದು ಬರೆದುಕೊಂಡಿದ್ದಾರೆ.  80 ವರ್ಷವಾದ್ರೂ ಕೆಲಸದ ಬಗ್ಗೆ ಇರುವ ಪ್ಯಾಷನ್‌ನ ನೆಟ್ಟಿಗರು ಮೆಚ್ಚಿದ್ದಾರೆ ಅಲ್ಲದೆ ಒಬ್ಬ ಸ್ಟಾರ್‌ ನಟ ಒಂದು ಪೋಸ್ಟ್‌ ಮಾಡಲು ಸಾವಿರ ಸಲ ಯೋಚನೆ ಮಾಡುತ್ತಾರೆ ಆದರೆ ಇಷ್ಟು ಕೂಲ್ ಅಗಿ ಹ್ಯಾಂಡಲ್‌ ಮಾಡಲು ಸಾಧ್ಯವಾಗುವುದು ನಿಮಗೆ ಮಾತ್ರ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ಕೆಲವು ದಿನಗಳ ಹಿಂದೆ Do Aur Do Paanch ಸಿನಿಮಾ ರಿಲೀಸ್ ಆಗಿ 43 ವರ್ಷಗಳು ಆಗಿದೆ ಎಂದು ಸಂಭ್ರಮಿಸಿದ್ದಾರೆ. ಸಿನಿಮಾದ ಪೋಟೋವೊಂದನ್ನು ಅಪ್ಲೋಡ್ ಮಾಡಿ ' 2+2= 5;Do Aur Do Paanch ಚಿತ್ರಕ್ಕೆ 43 ವರ್ಷಗಳು. ಈ ಫಿಲ್ಮಂ ತುಂಬಾ ಚೆನ್ನಾಗಿತ್ತು. ಅದರಲ್ಲೂ ಬೆಲ್‌ ಬಾಟಮ್ ಔಟ್‌ಫಿಟ್‌ ಸೂಪರ್ ಆಗಿತ್ತು. ಬೆಲ್ ಬಾಟಮ್‌ ಕ್ರೇಜ್‌ ಎಷ್ಟಿತ್ತು ಅಂದ್ರೆ ಎಲ್ಲಿ ಹೋದರೂ ಅದನ್ನು ಧರಿಸುತ್ತಿದ್ದೆವು ,ಒಂದು ದಿನ ಚಿತ್ರಮಂದಿರದಲ್ಲಿ ಬೆಲ್ ಬಾಟಮ್ ಧರಿಸಿ ಸಿನಿಮಾ ನೋಡಲು ಹೋಗಿದ್ದಾಗ ಇಲಿ ಪ್ಯಾಂಟ್‌ ಒಳಗೆ ಹೋಗಿತ್ತು. ವಾವ್ ಇಷ್ಟೊಂದು ಸೂಪರ್ ನೆನಪು ಕ್ರಿಯೇಟ್ ಮಾಡಿದ ಬೆಲ್ ಬಾಟಮ್ ಪ್ಯಾಂಟ್‌ಗೆ ಥ್ಯಾಂಕ್ಸ್‌' ಎಂದು ಅಮಿತಾಭ್ ಬರೆದುಕೊಂಡಿದ್ದರು. 

ಇದಾದ ನಂತರ ಅಮಿತಾಭ್ ಎರಡನೇ ಸಿನಿಮಾ 'Reshma Aur Shera' ಫೋಟೋ ಹಂಚಿಕೊಂಡಿದ್ದರು. ಒಂಟೆ ಮೇಲೆ ಕುಳಿತುಕೊಂಡಿರುವ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಇದಾಗಿತ್ತು '1969ರಲ್ಲಿ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಹಲವರು ನನ್ನನ್ನು ಒಂಟೆ ಎಂದು ಕರೆಯುತ್ತಿದ್ದರು. ಅವರ ಮಾತು ಸತ್ಯ ಮಾಡಬೇಕು ನಾನು ಬೆಟ್ಟದಷ್ಟು ಸಾಧನೆ ಮಾಡಬೇಕು ಎಂದು ಮನಸ್ಸು ಮಾಡಿದೆ. ಇದು ನನ್ನ 2ನೇ ಸಿನಿಮಾ. ಜೈಸಲ್ಮೇರ್‌ನ ಆಚೆ ಮರುಭೂಮಿಯಲ್ಲಿ ಮೈಲುಗಳಷ್ಟು ದೂರದಲ್ಲಿದೆ ಇರುವ ಪೋಚಿನಾ ಜಾಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈಗ ನನ್ನನ್ನು ಒಂಟೆ ಎಂದು ಕರೆಯುವುದು ನಿಲ್ಲಿಸಿದ್ದಾರೆ. ಈ ಟೈಟಲ್‌ನ ಈಗ ಬೇರೆಯವರಿಗೆ ಕೊಟ್ಟಿದ್ದಾರೆ' ಎಂದು ಬಿಗ್ ಮ್ಯಾನ್ ಪೋಸ್ಟ್‌ ಮಾಡಿದ್ದರು. 

ಅನುಮತಿ ಇಲ್ಲದೆ ಇನ್ಮುಂದೆ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ; ದೆಹಲಿ ಹೈಕೋರ್ಟ್

ಸಂಬಳ:

1968 ರಲ್ಲಿ ತಿಂಗಳಿಗೆ 1640 ರೂ. ಸಂಬಳ ಪಡೆಯುತ್ತಿದ್ದ ಬಗ್ಗೆ ಅಮಿತಾಭ್ ಬಚ್ಚನ್ ಬಹಿರಂಗ ಪಡಿಸಿದ್ದಾರೆ. ಅಮಿತಾಭ್ ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ಇತರ 7 ಜನರೊಂದಿಗೆ ಸಣ್ಣ ಕೋಣೆಯನ್ನು ಹಂಚಿಕೊಳ್ಳುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೋಲ್ಕತ್ತಾದ ಬ್ಲ್ಯಾಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತಾಬ್ ನವೆಂಬರ್ 30ರಂದು ಪಡೆದ ಕೊನೆಯ ಸಂಬಳದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ. ಅಮಿತಾಭ್ ಪಡೆದ ಕೊನೆಯ ಸಂಬಳ 1968 ರೂಪಾಯಿ ಆಗಿತ್ತು. ಇದರ ದಾಖಲೆ ಇನ್ನೂ ಇದೆ ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿನ ಆ ದಿನಗಳು ತಮ್ಮ ಜೀವನದ ಅತ್ಯಂತ ಸ್ವತಂತ್ರ, ಮುಕ್ತ ಸಮಯಗಳಾಗಿದ್ದವು ಎಂದು ಹೇಳಿದ್ದಾರೆ. 

ಉದ್ದ ಕೂದಲಿದೆ ಎನ್ನುವ ಕಾರಣಕ್ಕೆ ಜಯಾ ಬಚ್ಚನ್ ಮದುವೆಯಾದೆ; ಅಮಿತಾಭ್ ಬಚ್ಚನ್

ಕೆಲವು ಸ್ಥಳಗಳಿಗೆ ಹೋಗಲು, ತಿನ್ನಲು ಹಣವಿಲ್ಲದಿದ್ದರೂ ಆಫೀಸ್ ಕೆಲಸ ಮುಗಿಸಿ ಕೋಲ್ಕತ್ತಾದ ಜನಪ್ರಿಯ ತಿನಿಸುಗಳನ್ನು ನೋಡಿ ತಿನ್ನುತ್ತಿದ್ದೆವು ಎಂದು ಹೇಳಿದ್ದಾರೆ. ನಾವು 8 ಮಂದಿ '10 ಬೈ 10′ ಕೊಠಡಿಯಲ್ಲಿ ವಾಸವಿದ್ದೆವು. ಆ ದಿನಗಳು ನನ್ನ ಸ್ನೇಹಿತ, ಆಫೀಸ್ ಸಮಯ, ನಂತರ ಸಂಜೆ ಹುಡುಗರೊಂದಿಗೆ  ಮಸ್ತಿ ಮಾಡುತ್ತಿದ್ದೆವು. ಗೇಟ್ ಕೀಪರ್‌ಗಳಿಗೆ ಬೆಣ್ಣೆ ಹಚ್ಚುವುದು, ಆ ಸಮಯ ಅದ್ಭುತವಾಗಿತ್ತು. ಹ್ಹಾ ಮತ್ತೆ ಇದು ಎಂದಿಗೂ ಸಂಭವಿಸಲಿಲ್ಲ' ಎಂದು ಬಿಗ್ ಬಿ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಶ್ ಎದುರು ಧುರಂಧರ್ 2 ಬ್ಲಾಕ್‌ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!
ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!