ನನಗೆ ಇತಿಹಾಸ ಗೊತ್ತಿಲ್ಲ, ಸ್ಕ್ರಿಪ್ಟ್ ಓದಿ ಅಳುನೇ ಬಂತು; ತಂದೆಯ RSS ಸ್ಕ್ರಿಪ್ಟ್‌ಗೆ ರಾಜಮೌಳಿ ರಿಯಾಕ್ಷನ್

By Shruthi Krishna  |  First Published Feb 17, 2023, 5:28 PM IST

RSS ಬಗ್ಗೆ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ಸ್ಕ್ರಿಪ್ಟ್ ಬಗ್ಗೆ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದು ಸ್ಕ್ರಿಪ್ಟ್ ಓದಿ ಅಳುನೇ ಬಂತು ಎಂದು ಹೇಳಿದ್ದಾರೆ.  


ಬಾಹುಬಲಿ, ಆರ್ ಆರ್ ಆರ್ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆದ ತೆಲುಗಿನ ಖ್ಯಾತ ಚಿತ್ರಕಥೆಗಾರ, ಖ್ಯಾತ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸದ್ಯ RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಬಗ್ಗೆ ಕಥೆ ಬರೆಯುತ್ತಿದ್ದಾರೆ. ಈ ಬಗ್ಗೆ ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ RSS ಸಿನಿಮಾ ಮತ್ತು ಕಥೆಯ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿದರು.

ರಾಜಮೌಳಿ ನಿರ್ದೇಶನದ ಎಲ್ಲಾ ಸಿನಿಮಾಗಳಿಗೂ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆದಿರುವುದು ವಿಶೇಷ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆರ್ ಆರ್ ಆರ್ ಸಿನಿಮಾದ ಕಥೆ ಬರೆದಿದ್ದು ಸಹ ವಿಜಯೇಂದ್ರ ಪ್ರಸಾದ್. ಸದ್ಯ ಆರ್ ಎಸ್ ಎಸ್ ಸಿನಿಮಾಗೆ ಕಥೆ ಮಾಡುತ್ತಿದ್ದಾರೆ. ಈ ಬಗ್ಗೆ ಏನು ಅನಿಸುತ್ತಿದೆ ಎಂದು ರಾಜಮೌಳಿ ಅವರನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ರಾಜಮೌಳಿ ತನಗೆ ಆರ್ ಎಸ್ ಎಸ್ ಇತಿಹಾಸದ ಬಗ್ಗೆ ತಿಳಿದಿಲ್ಲ, ಆದರೆ ಸ್ಕ್ರಿಪ್ಟ್ ಓದಿ ಕಣ್ಣೀರು ಬಂತು ಎಂದು ಹೇಳಿದರು.
 
'ನನಗೆ, ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಸಂಘಟನೆಯ ಬಗ್ಗೆ ಸ್ಪಷ್ಟವಾಗಿ ಕೇಳಿದ್ದೇನೆ, ಆದರೆ ಅದು ಹೇಗೆ ರೂಪುಗೊಂಡಿತು, ಅವರ ನಿಖರವಾದ ನಂಬಿಕೆಗಳು ಯಾವುವು, ಅವರು ಹೇಗೆ ಅಭಿವೃದ್ಧಿ ಹೊಂದಿದ್ದಾರೆ ಎದೆಲ್ಲವೂ ನನಗೆ ತಿಳಿದಿಲ್ಲ. ಆದರೆ ನಾನು ನನ್ನ ತಂದೆಯ ಸ್ಕ್ರಿಪ್ಟ್ ಅನ್ನು ಓದಿದ್ದೇನೆ. ಅದು ತುಂಬಾ ಭಾವನಾತ್ಮಕವಾಗಿದೆ. ಆ ಸ್ಕ್ರಿಪ್ಟ್ ಅನ್ನು ಓದುವಾಗ ನಾನು ಅನೇಕ ಬಾರಿ ಅತಿದ್ದೇನೆ, ಅನೇಕ ಬಾರಿ ನನಗೆ ಕಣ್ಣೀರು ತರಿಸಿದೆ. ಆದರೆ ಆ ಪ್ರತಿಕ್ರಿಯೆಯು ಕಥೆಯ ಇತಿಹಾಸದ ಭಾಗದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ' ಎಂದು ಹೇಳಿದ್ದಾರೆ. 

ಆರ್‌ಎಸ್‌ಎಸ್‌ ಬಗ್ಗೆ ಸತ್ಯದರ್ಶನ ಮಾಡುವ ವೆಬ್‌ ಸಿರೀಸ್‌, ಸಿನಿಮಾ ಮಾಡ್ತೇನೆ: ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌!

Tap to resize

Latest Videos

ಅಂದಹಾಗೆ ತಂದೆ ವಿಜೇಂದ್ರ ಪ್ರಸಾದ್ ಅವರು ಬರೆದಿರುವ RSS ಕಥೆಗೆ ರಾಜಮೌಳಿ ಅವರೇ ಆಕ್ಷನ್ ಕಟ್  ಹೇಳ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಮಾತನಾಡಿದ ರಾಜಮೌಳಿ, 'ನಾನು ಓದಿದ ಸ್ಕ್ರಿಪ್ಟ್ ತುಂಬಾ ಭಾವನಾತ್ಮಕವಾಗಿದೆ ಮತ್ತು ತುಂಬಾ ಚೆನ್ನಾಗಿದೆ, ಆದರೆ ಅದು ಸಮಾಜದ ಬಗ್ಗೆ ಏನು ಸೂಚಿಸುತ್ತದೆ ಎಂದು ನನಗೆ ತಿಳಿದಿಲ್ಲ. ನನ್ನ ತಂದೆ ಬರೆದ ಸ್ಕ್ರಿಪ್ಟ್ ಅನ್ನು ನಾನು ನಿರ್ದೇಶಿಸುತ್ತೇನೆಯೇ? ಎಂದು ಕೇಳಿದ್ದೀರಿ, ಮೊದಲನೆಯದಾಗಿ , ಅದು ಸಾಧ್ಯವೇ ಎಂದು ನನಗೆ ತಿಳಿದಿಲ್ಲ, ಏಕೆಂದರೆ ನನ್ನ ತಂದೆ ಈ ಸ್ಕ್ರಿಪ್ಟ್ ಅನ್ನು ಬೇರೆ ಯಾವುದಾದರೂ ಸಂಸ್ಥೆ, ಜನರು ಅಥವಾ ನಿರ್ಮಾಪಕರಿಗಾಗಿ ಬರೆದಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ಆದರೂ, ಪ್ರಶ್ನೆಗೆ, ನನ್ನ ಬಳಿ ಖಚಿತವಾದ ಉತ್ತರವಿಲ್ಲ' ಎಂದು ಹೇಳಿದರು.  

ರಜನಿಕಾಂತ್ 'ಮುತ್ತು' ಸಿನಿಮಾದ ದಾಖಲೆ ಬ್ರೇಕ್ ಮಾಡಿ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದ 'RRR'

'ಆ ಕಥೆಯನ್ನು ನಿರ್ದೇಶಿಸಲು ನನಗೆ ಗೌರವವಿದೆ, ಏಕೆಂದರೆ ಇದು ತುಂಬಾ ಸುಂದರವಾದ, ಮಾನವೀಯ, ಭಾವನಾತ್ಮಕ ಕಥೆಯಾಗಿದೆ. ಆದರೆ ಸ್ಕ್ರಿಪ್ಟ್‌ನ ಪರಿಣಾಮಗಳ ಬಗ್ಗೆ ನನಗೆ ಖಚಿತವಿಲ್ಲ. ಇದು ನಕಾರಾತ್ಮಕ ಅಥವಾ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ. ಮೊದಲ ಬಾರಿಗೆ ನನಗೆ ಈ ಬಗ್ಗೆ ಖಚಿತವಿಲ್ಲ' ಎಂದು ರಾಜಮೌಳಿ ಹೇಳಿದರು.

ಆರ್ ಎಸ್ ಎಸ್ ಸಿನಿಮಾ ಯಾವಾಗ ಸೆಟ್ಟೇರಲಿದೆ, ಯಾರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ, ನಿರ್ದೇಶ ಯಾರು ಮಾಡ್ತಾರೆ ಎನ್ನುವ ಪ್ರಶ್ನೆಗೆೆ ಇನ್ನೂ ಉತ್ತರ ಸಿಕ್ಕಿಲ್ಲ. ಆದೆರ ಸದ್ಯಕ್ಕೆ ಸ್ಕ್ರಿಪ್ಟ್ ರೆಡಿಯಾಗಿರುವುದು ಅಧಿಕೃತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ. 

click me!