ನಿನ್ನೆಯಷ್ಟೇ ಮದುವೆಯ ಫೋಟೋ ರಿವೀಲ್ ಮಾಡಿರುವ ನಟಿ ಸ್ವರಾ ಭಾಸ್ಕರ್ ಮದುವೆಯ ವಿಷಯ ಭಾರಿ ಚರ್ಚೆಗೆ ಕಾರಣವಾಗಿದೆ.ಮುಸ್ಲಿಂ ಯುವಕನನ್ನು ವರಿಸಿರುವ ಕಾರಣ, ಈ ಮದುವೆ ಅಸಿಂಧು ಎಂದು ಧರ್ಮಗುರು ಘೋಷಿಸಿದ ಬೆನ್ನಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ ಏನದು?
ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ನಿನ್ನೆ ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಮದುವೆಯನ್ನು ಘೋಷಣೆ ಮಾಡಿದ್ದರು. ಈ ಮೂಲಕ ಎಲ್ಲರಿಗೂ ಏಕಾಏಕಿ ಶಾಕ್ ಕೊಟ್ಟಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ಇವರು ಮದುವೆಯಾಗಿರುವುದು ಹಲವರ ಕಣ್ಣನ್ನು ಕೆಂಪು ಮಾಡಿದೆ. ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗಿರುವ ಕುರಿತು ಇದಾಗಲೇ ಸ್ವರಾ ಅವರ ವಿರುದ್ಧ ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ಇದಾಗಲೇ ಹಲವಾರು ನಟಿಯರು ಇದೇ ಹಾದಿಯನ್ನು ತುಳಿದಿದ್ದು, ಕೊನೆಗೆ ತಮ್ಮ ನೆಚ್ಚಿನ ನಟಿ ಕೂಡ ಈ ರೀತಿ ಅನ್ಯ ಧರ್ಮೀಯನನ್ನು ಮದುವೆಯಾಗಿರುವುದು ಸರಿಯಲ್ಲ ಎಂದು ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಇಸ್ಲಾಮಿಕ್ ಧರ್ಮಗುರು (Islamic cleric) ಈ ಮದುವೆಯನ್ನು ವಿರೋಧಿಸಿದ್ದಾರೆ.
ಚಿಕಾಗೋ ಮೂಲದ ನಿಯತಕಾಲಿಕದ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾ ಯಾಸಿರ್ ನದೀಮ್ ಅಲ್ ವಾಜಿದಿ ಅವರು ಈ ಮದುವೆ ಅಮಾನ್ಯವಾಗಿದೆ. ಇಬ್ಬರೂ ಬೇರೆ ಧರ್ಮೀಯರಾಗಿದ್ದು, ವಿಭಿನ್ನ ನಂಬಿಕೆಗಳಿಂದ ಬಂದ ಕಾರಣ ಮದುವೆ ಅಸಿಂಧು ಎಂದು ಘೋಷಿಸಿದ್ದಾರೆ. ಅಂತರ್ಧರ್ಮೀಯ ವಿವಾಹ ಸರಿಯಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ಮದುವೆಯ ಸಲುವಾಗಿಯಷ್ಟೇ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದರೆ ಮಹಿಳೆಯ ಜೊತೆಗಿನ ಮದುವೆ ಸಿಂಧುವಾಗುವುದಿಲ್ಲ ಎಂದಿದ್ದಾರೆ. ಇದೀಗ ಸ್ವರಾ ಭಾಸ್ಕರ್ ದಂಪತಿ (couple) ಪರವಾಗಿ ನಿಂತುಕೊಂಡಿದ್ದಾರೆ ಪ್ರಸಿದ್ಧ ರೇಡಿಯೊ ನಿರೂಪಕ ಮತ್ತು ಕಾರ್ಯಕರ್ತ RJ ಸಯೆಮಾ. ಧಾರ್ಮಿಕ ವಿದ್ವಾಂಸರು ಜನರ ವೈಯಕ್ತಿಕ ವಿಷಯಗಳ ಬಗ್ಗೆ ತೀರ್ಪು ನೀಡಬಾರದು. ಭಾರತದಂತಹ ದೇಶದಲ್ಲಿ, ಅಂತರ್‌ಧರ್ಮೀಯ (Inter Religion) ವಿವಾಹಗಳು ಇನ್ನೂ ಅನುಮಾನ ಮತ್ತು ಹಗೆತನವನ್ನು ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಇವರ ಮದುವೆಯನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ.
ಮದ್ವೆಯಾಗಿ ಏಕಾಏಕಿ ಶಾಕ್ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?
If is not Muslim and her "supposed" husband is Muslim, this marriage is not islamically valid.
Allah says, do not marry polytheistic women until they believe. 2:221
If she accepts Islam only for the sake of marriage, it is not accepted by Allah.
ದಂಪತಿಯ ಮದುವೆಯ ಕುರಿತು ರೇಡಿಯೋ ಜಾಕಿ (RJ) ಸಯೆಮಾ ಅವರು ದನಿ ಎತ್ತುದ್ದಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಪರವಾಗಿ ಹಲವರು ಕಮೆಂಟ್ ಹಾಕಲು ಶುರು ಮಾಡಿದ್ದಾರೆ. ಅನೇಕ ಟ್ವಿಟ್ಟರ್ ಬಳಕೆದಾರರು ಸಯೆಮಾ ಅವರನ್ನು ಶ್ಲಾಘಿಸಿದ್ದಾರೆ. ಸಯೀನಾ ಎನ್ನುವ ಟ್ವಿಟರ್ ಬಳಕೆದಾರರು, ಹೀಗೆ ಹೇಳಲು ನೀವು ಯಾರು ಎಂದು ಧರ್ಮಗುರುವನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲಾ ಏನು ಹೇಳಿದ್ದಾರೆ ಎಂದುನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ಆಗ ಮಾತನಾಡಿ, ಅಲ್ಲಿಯವರೆಗೆ ಸುಮ್ಮನೆ ಇರುವುದೇ ಒಳ್ಳೆಯದು. ವಿನಾಕಾರಣ ಮದುವೆಯ ವಿಷಯದಲ್ಲಿ ತಲೆಹಾಕಬೇಡಿ ಎಂದು ಕಿಡಿ ಕಾರಿದ್ದಾರೆ. ಸಮರ್ ಖಾನ್ ಎನ್ನುವವರೂ ಆರ್ಜೆ ಸಯೆಮಾ ಪರವಾಗಿ ಬರೆದಿದ್ದಾರೆ. ಧರ್ಮಗುರು ಮತ್ತು ಪ್ರಚಾರಕರು ಎಂದು ಹೇಳಿಕೊಂಡು ಬರುವ ಅನೇಕರು ವಿನಾಕಾರಣ ಯಾವುದೇ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಾರೆ. ಇದನ್ನು ಖಂಡಿತವಾಗಿಯೂ ಒಪ್ಪುವಂಥದ್ದಲ್ಲ. ವೈಯಕ್ತಿಯ (personal) ವಿಷಯಗಳಲ್ಲಿ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು ಎಂದಿದ್ದಾರೆ.
ಅಂದಹಾಗೆ ಸ್ವರಾ ಭಾಸ್ಕರ್ ಪ್ರಸಿದ್ಧ ಭಾರತೀಯ ನಟಿಯಾಗಿದ್ದು, ತನು ವೆಡ್ಸ್ ಮನು ರಿಟರ್ನ್ಸ್ ಮತ್ತು ಪ್ರೇಮ್ ರತನ್ ಧನ್ ಪಾಯೊದಂತಹ ಜನಪ್ರಿಯ ಹಿಂದಿ ಚಲನಚಿತ್ರಗಳಲ್ಲಿ ಪ್ರಶಸ್ತಿ ವಿಜೇತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಎರಡು ಸ್ಕ್ರೀನ್ ಪ್ರಶಸ್ತಿ ಹಾಗೂ ಮೂರು ಬಾರಿ ಫಿಲ್ಮ್‌ಫೇರ್‌ಗೆ (Filmfare) ನಾಮನಿರ್ದೇಶನಗೊಂಡಿದ್ದಾರೆ. ನಿನ್ನೆ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (social media) ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ ಸ್ವರಾ.ಲ್ ಕಾರಣ ಅವರ ಹಳೆಯ ಟ್ವೀಟ್. ಹೌದು ಈ ಮೊದಲು ಪತಿ ಅಹ್ಮದ್ ಅವರನ್ನು ಅಣ್ಣ ಎಂದು ಕರೆದಿದ್ದರು. ಇದೀಗ ಅಣ್ಣ ಎಂದವನ ಜೊತೆಯೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸ್ವರಾ ಟ್ರೋಲ್ ಆಗುತ್ತಿರುವುದು ಅದೇ ಮೊದಲ್ಲ. ತನ್ನ ಹೇಳಿಕೆ ಹಾಗೂ ರಾಜಕೀಯ ದೃಷ್ಟಿಕೋನಗಳಿಗಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ಮದುವೆ ವಿಚಾರಕ್ಕೂ ಟ್ರೋಲ್ ಆಗಿದ್ದಾರೆ.
ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್
And who are you? Someone designated by Allah to judge others? We are answerable to Allah and only to Allah. To each his own.
Till someone asks for your opinion, keep to yourself. And be a good Muslim. https://t.co/mKmIBtqM0x