6 ಗಂಟೆ ತಡವಾಗಿ ಆಗಮಿಸಿದ ನಯನತಾರಾ; ಕ್ಷಮೆ ಕೇಳದೆ ಅಹಂಕಾರ ಮಾಡಿದ್ದಕ್ಕೆ ಅಭಿಮಾನಿಗಳಲ್ಲಿ ಆಕ್ರೋಶ

Published : Jan 18, 2025, 07:43 AM IST
6 ಗಂಟೆ ತಡವಾಗಿ ಆಗಮಿಸಿದ ನಯನತಾರಾ; ಕ್ಷಮೆ ಕೇಳದೆ ಅಹಂಕಾರ ಮಾಡಿದ್ದಕ್ಕೆ ಅಭಿಮಾನಿಗಳಲ್ಲಿ ಆಕ್ರೋಶ

ಸಾರಾಂಶ

ನಯನತಾರಾ ಖಾಸಗಿ ಕಾರ್ಯಕ್ರಮಕ್ಕೆ ಆರು ಗಂಟೆ ತಡವಾಗಿ ಬಂದಿದ್ದಕ್ಕೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮಕ್ಕಳ ನಂತರ ಸಿನಿಮಾಗಳಿಗಿಂತ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ನಯನತಾರಾ, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳಲಿಲ್ಲ. ಅಭಿಮಾನಿಗಳ ಸಮಯ ವ್ಯರ್ಥವಾದ್ದಕ್ಕೆ, ಅವರ ಜೊತೆ ಸಂವಾದಿಸದೆ ದುರಹಂಕಾರ ತೋರಿದ್ದಕ್ಕೆ ಟೀಕೆಗೆ ಗುರಿಯಾಗಿದ್ದಾರೆ.

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಸಿಕ್ಕಾಪಟ್ಟೆ ಲೇಟ್ ಆಗ ಅಗಮಿಸಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳ ಹುಟ್ಟಿದ ಮೇಲೆ ಸಿನಿಮಾ ಕಡಿಮೆ ಮಾಡಿದ ನಯನತಾರಾ ಕಾರ್ಯಕ್ರಮಗಳಲ್ಲಿ ಜಾಸ್ತಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ತಮ್ಮ ಸ್ಕಿನ್‌ ಕೇರ್‌ ಬ್ರ್ಯಾಂಡ್‌ ಲಾಂಚ್ ಮಾಡಿದ ಮೇಲೆ ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್‌ಗಳನ್ನು ತುಂಬಾ ಭೇಟಿ ಮಾಡುತ್ತಿದ್ದಾರೆ. ಫೇಮ್, ನೇಮ್ ಆಂಡ್ ಹಣ ಗಳಿಸಿರುವ ನಯನತಾರಾ ಅಭಿಮಾನಿಗಳನ್ನು ಕಾಯಿಸುವುದು ಎಷ್ಟು ಸರಿ? ಅದು ಒಂದಲ್ಲ ಎರಡಲ್ಲ....6 ಗಂಟೆಗಳ ಕಾಲ.

ಕೆಲವು ದಿನಗಳ ಹಿಂದೆ ಫೆಮಿ9 ಉದ್ಯಮಕ್ಕೆ ಸಾಕಷ್ಟು ಮಹಿಳೆಯರು ಕೈ ಜೋಡಿಸಿದ್ದಾರೆ. ಹೀಗಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿದ್ದ ಫೆಮಿ9 ತಂಡ ಸೋಷಿಯಲ್ ಮೀಡಿಯಾ ಸ್ಟಾರ್‌ಗಳನ್ನು ಕರೆದಿದ್ದರು. ಕಾರ್ಯಕ್ರಮ ಬೆಳಗ್ಗೆ ಬೇಗ ಶುರುವಾಗಿ ಮಧ್ಯಾಹ್ನ 2 ಗಂಟೆಗೆ ಮುಗಿಯಬೇಕಿತ್ತು ಆದರೆ ನಯನತಾರಾ ಬೆಳಗ್ಗೆ ಆಗಮಿಸಿದ ಪತಿ ಜೊತೆ ತಟವಾಗಿ ಎಂಟ್ರಿ ಕೊಟ್ಟಿದ್ದಾರೆ. ಸೆಲೆಬ್ರಿಟಿಗಳು ಅಂದ ಮೇಲೆ ಮುಖ್ಯವಾದ ಕರೆ ಅಥವಾ ಸ್ಥಳದ ಪ್ರೋಟೋ ಕಾಲ್ ಇರುತ್ತದೆ ಹೀಗಾಗಿ ಅದೆಲ್ಲಾ ನೋಡಿಕೊಂಡು ಒಂದೆರಡು ಗಂಟೆ ಲೇಟ್ ಆದರೂ ಓಕೆ ಆದರೆ 6 ಗಂಟೆ ಲೇಟ್ ಆಗಿ ಬಂದಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

ಗೆದ್ದು ಬಂದು ಕೇಳಿದ್ರೆ ಓಕೆ ಅಂತಿದ್ದೆ, ಈಗ ಹೊರ ಬಂದ್ಮೇಲೆ ಹೇಳ್ತೀನಿ: ತ್ರಿವಿಕ್ರಮ್ ಪ್ರಪೋಸಲ್‌ಗೆ ಭವ್ಯಾ ಉತ್ತರ

6 ಗಂಟೆಗಳ ಕಾಲ ತಡವಾಗಿ ಆಗಮಿಸಿದ ನಯನತಾರಾ ಯಾವುದೇ ಕಾರಣಕ್ಕೆ ಕ್ಷಮೆ ಕೇಳಲಿಲ್ಲ. ಹಲವರು ಬಸ್, ಕ್ಯಾಬ್ ಮತ್ತು ಫ್ಲೈಟ್ ಬುಕ್ ಮಾಡಿಕೊಂಡು ಆಗಮಿಸಿದ್ದರು ಅವರಿಗೆ ತೊಂದರೆ ಆಗಿದೆ. ಇನ್ನೂ ಕೆಲವರು ಊಟ ತಿಂಡಿ ಬಿಟ್ಟು ಬಂದಿದ್ದರು. ಕೆಲವರು ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬೇಗ ಕೆಲಸ ಮುಗಿಸಿಕೊಂಡು ಹೋಗಲು ಬಂದಿದ್ದರು...ಇದ್ಯಾವುದರ ಬಗ್ಗೆ ಯೋಚನೆ ಮಾಡದೆ ಸ್ವರ್ಥಿ ಆಗಿದ್ದಕ್ಕೆ ದಿಕ್ಕಾರ ಎನ್ನುತ್ತಿದ್ದಾರೆ. ಕಾರ್ಯಕ್ರಮ ಮುಗಿದ ಮೇಲೆ ತಮಗೆಂದು ಕಾಯುತ್ತಿದ್ದ ಅಭಿಮಾನಿಗಳ ಜೊತೆ ಮಾತನಾಡುವುದು ಅಥವಾ ಫೋಟೋ ತೆಗೆಸಿಕೊಳ್ಳುವುದಿಲ್ಲ ಮಾಡಿಲ್ಲ ಅದಕ್ಕೆ ದುರಹಂಕಾರ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. 

ಜಗದೀಶ್ ಕೊಟ್ಟ ಕಿರುಕುಳ ಮರೆಯಲ್ಲ; ರೋಲ್ ಕಾಲ್ ಲಾಯರ್‌ ಎಂದಿದ್ದಕ್ಕೆ ಕ್ಲಾರಿಟಿ ಕೊಟ್ಟ ಚೈತ್ರಾ ಕುಂದಾಪುರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?