ಚಿಕ್ಕ ವಯಸ್ಸಲ್ಲೇ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಆರಾಧ್ಯ ಬಚ್ಚನ್​? ಐಶ್​ ಪುತ್ರಿಯ ಕುರಿತು ಏನಿದು ಸುದ್ದಿ?

By Suvarna News  |  First Published Mar 6, 2024, 10:19 PM IST

ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಆರಾಧ್ಯಳನ್ನು ನೋಡಿರುವ ಫ್ಯಾನ್ಸ್​, ಚಿಕ್ಕ ವಯಸ್ಸಲ್ಲೇ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎನ್ನುತ್ತಿದ್ದಾರೆ. ಏನಿದು ವಿಷಯ?
 


ಸದ್ಯ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ವಿವಾಹ ಮಹೋತ್ಸದ ಮುಂಚಿನ ಕಾರ್ಯಕ್ರಮದ್ದೇ ಸುದ್ದಿ. ವಿವಾಹಪೂರ್ವ ಕಾರ್ಯಕ್ರಮಗಳು ಮುಗಿದಿದ್ದರೂ ಹಲವು ಮಂದಿ ಇದರ ಗುಂಗಿನಿಂದ ಹೊರಕ್ಕೆ ಬಂದಿಲ್ಲ.  ಈ  ಕಾರ್ಯಕ್ರಮಕ್ಕೆ ವಿದೇಶದಿಂದಲೂ ಅತಿಥಿಗಳು ಆಗಮಿಸಿದ್ದರು. ಅದೇ ರೀತಿ ಅಮಿತಾಭ್​ ಬಚ್ಚನ್ ಕುಟುಂಬ ಕೂಡ ಆಗಮಿಸಿತ್ತು.  ಕುಟುಂಬ ಸದಸ್ಯರ ಹಲವಾರು ಚಿತ್ರಗಳು ಮತ್ತು ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್  ಅವರ ಹೇರ್‌ಸ್ಟೈಲ್‌ ಹೈಲೈಟ್‌ ಆಗಿತ್ತು. ಆರಾಧ್ಯಾ ಅವರ ಲುಕ್ ಈಗ ಗಮನ ಸೆಳೆದಿತ್ತು.  

ಕೆಲವು ವರ್ಷಗಳಿಂದ ಆರಾಧ್ಯ ಅವರು ಯಾವಾಗಲೂ ಒಂದೇ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಹಲವರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ಆರಾಧ್ಯ ಹಣೆ ಕಾಣಿಸುವುದಿಲ್ಲ ಎಂದು ತಮಾಷೆ ಮಾಡಿದ್ದರು. ಅದರೆ  ಅಂಬಾನಿ ಪುತ್ರನ  ಸಮಾರಂಭದಲ್ಲಿ ಫ್ರೀ ಹೇರ್ಸ್‌ ಬಿಟ್ಟು ಕ್ಯೂಟ್‌ ಆಗಿ ಪೋಸ್‌ ಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ ಆರಾಧ್ಯ. ಈಕೆಯ ಹೊಸ ಕೇಶ ವಿನ್ಯಾಸಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿ ಐಶ್ವರ್ಯಾ ರೈ ಕೈ ಹಿಡಿದುಕೊಂಡು ಕ್ಯಾಮೆರಾಗಳ ಮುಂದೆ ಬಂದ ಆರಾಧ್ಯ ಬಚ್ಚನ್ ಅವರ ಹೊಸ ಲುಕ್ ನೋಡಿ ಎಲ್ಲರು ಹುಬ್ಬುಹಾರಿಸಿದ್ದಾರೆ. ಇಡೀ ಕುಟುಂಬ ಬಹಳ ಸಮಯದ ನಂತರ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ. ತನ್ನ ಹೊಸ ಲುಕ್‌ನೊಂದಿಗೆ ಈವೆಂಟ್‌ಗೆ ಬಂದ ಆರಾಧ್ಯ ಮೇಲೆ ಎಲ್ಲರ ಕಣ್ಣುಗಳು ಇದ್ದವು.

Tap to resize

Latest Videos

ನಟಿ ಜಾಕ್ವೆಲಿನ್​ ಮನೆಗೆ ಬೆಂಕಿ! ಕೇಸ್​ವೊಂದರಲ್ಲಿ ಸಿಲುಕಿದ ಬೆನ್ನಲ್ಲೇ ಅವಘಡ: ಇದ್ಯಾರ ಕೈವಾಡ?
 
ಆರಾಧ್ಯಳ ಹೊಸ ಲುಕ್​ ನೋಡಿ ಹಲವು ರೀತಿಯ ಊಹಾಪೋಹಗಳು ಶುರುವಾಗಿವೆ. ಆರಾಧ್ಯ ಬಚ್ಚನ್​ಗೆ ಈಗ 12 ವರ್ಷ ವಯಸ್ಸು. ಐಶ್ವರ್ಯ ರೈ ಕೂಡ ಚಿಕ್ಕವಯಸ್ಸಿನಲ್ಲಿಯೇ ಸುಂದರವಾಗಿ ಕಾಣಲು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದರು ಎನ್ನಲಾಗಿದೆ. ಅದೇ ರೀತಿ ಆರಾಧ್ಯ ಬಚ್ಚನ್​ ಕೂಡ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿರಬಹುದು ಎಂದೇ ಊಹಿಸಲಾಗುತ್ತಿದೆ.  ಈ ಹಿಂದೆ ಯಾವಾಗಲೂ ಒಂದೇ ರೀತಿಯ ಹೇರ್ ಸ್ಟೈಲ್ ನಲ್ಲಿ ಕಾಣುತ್ತಿದ್ದ ಆರಾಧ್ಯ ಮೊದಲ ಬಾರಿ ಬರೀ ಹೇರ್ ಸ್ಟೈಲ್ ಮಾತ್ರವಲ್ಲದೆ ಸಂಪೂರ್ಣ ಲುಕ್ ಬದಲಾಯಿಸಿಕೊಂಡಿದ್ದಾರೆ. ಇಷ್ಟು ದಿನ ಪುಟ್ಟ ಹುಡುಗಿಯಂತೆ ಕಾಣುತ್ತಿದ್ದ ಅವರು ಈಗ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
 
ಆರಾಧ್ಯ ಕೆಲವು ತಿಂಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಕಾಣುವುದಕ್ಕೂ ಸಾಕಷ್ಟು ಬದಲಾವಣೆ ಇದೆ. ಈಕೆ  ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನುಮಾನ ಮೂಡೋದು ಸಹಜ. ಏಕೆಂದರೆ ಆರಾಧ್ಯಾ ಕೆಲವು ತಿಂಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಕಾಣುವುದಕ್ಕೂ ಸಾಕಷ್ಟು ಬದಲಾವಣೆ ಇದೆ. ಇದೀಗ ಅಂಬಾನಿ ಪಾರ್ಟಿಯ ಆರಾಧ್ಯಾ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಈಕೆಗೆ ಕೇವಲ 12 ವರ್ಷ 3 ತಿಂಗಳು. ಈ ವಯಸ್ಸಲ್ಲಿ ಆಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳಬಾರದಿತ್ತು ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಆರಾಧ್ಯಾ ಬಚ್ಚನ್ ತನ್ನ ಪೋಷಕರೊಂದಿಗೆ ವಿದೇಶಕ್ಕೆ ಹೋಗಿದ್ದಳು. ಆಗ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರಬಹುದು ಎನ್ನಲಾಗುತ್ತಿದ್ದರೂ ಹೇರ್​ಸ್ಟೈಲ್​ ಬದಲಾವಣೆಯಿಂದ ಸಂಪೂರ್ಣ ಮುಖಚೆಹರೆ ಬದಲಾಗಿ ಕಾಣುವುದು ಸಹಜ ಎನ್ನುವುದು ಮತ್ತೊಂದಿಷ್ಟು ಮಂದಿ ಅಭಿಮತ.  

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!
 

click me!