ನಟಿ ಕಾಜೋಲ್​ ಹಿಂಭಾಗಕ್ಕೆ ಇದೇನಾಗೋಯ್ತು? ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

By Suchethana D  |  First Published Jul 22, 2024, 11:26 AM IST

ಸೌಂದರ್ಯಕ್ಕಾಗಿ ಯಾವುದೇ ಶಸ್ತ್ರಚಿಕಿತ್ಸೆಯ ಮೊರೆ ಹೋಗದಿದ್ದ ಬಾಲಿವುಡ್​ ನಟಿ ಕಾಜೋಲ್​ಗೆ ಏಕಾಏಕಿ ಇದೇನಾಯಿತು? ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!
 


ಡಸ್ಕಿ ಬ್ಯೂಟಿ ಎಂದೇ ಫೇಮಸ್​ ಆಗಿ ಈಗ ಬಿಳುಪಿನ ಮೊಗದೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸಿರುವ ಬಾಲಿವುಡ್​ ನಟಿ ಕಾಜೋಲ್​ ವಿಡಿಯೋ ಒಂದು ಈಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ನಟಿ ಎಂದರೆ ಅದರಲ್ಲಿಯೂ ಬಾಲಿವುಡ್​ನಲ್ಲಿ ಮಿಂಚಬೇಕು ಎಂದರೆ, ಹೈಟು, ವೇಟು, ಅವರ ಅಂಗಾಂಗಳ ಭಾಗ... ಹೀಗೆ ಎಲ್ಲದ್ದಕ್ಕೂ ಮಹತ್ವ ಇದದ್ದೇ. ತೆಳ್ಳಗೆ, ಬೆಳ್ಳಗೆ ಇರುವುದು ಮೊದಲ ಪ್ರಿಫರೆನ್ಸ್​. ಆಮೇಲೆ ದೇಹದ ಯಾವ ಯಾವ ಭಾಗ ಹೇಗೆ ಹೇಗೆ ಇರಬೇಕು ಎನ್ನುವುದೂ ನಿರ್ಧರಿತವಾಗುತ್ತದೆ. ಇದೇ ಕಾರಣಕ್ಕೆ ಹಲವು ನಟಿಯರು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗಿರುವುದು ಸರ್ವೇ ಸಾಮಾನ್ಯ. ಆದರೆ ಈ ಎಲ್ಲ ಸಿದ್ಧ ಸೂತ್ರಗಳನ್ನು ಮೆಟ್ಟಿ ನಿಂತರವರು  ನಟಿ ಕಾಜೋಲ್​. 

ನೋಡಲು ಕೃಷ್ಣವರ್ಣದವರಾಗಿದ್ದರೂ, ತೂಕದಲ್ಲಿ ಸ್ವಲ್ಪ ಹೆಚ್ಚಿಗೆ ಎನ್ನುವಷ್ಟು ದಪ್ಪ ಇದ್ದರೂ ದೇಹದ ಯಾವುದೇ ಭಾಗಗಳಿಗೆ ಕತ್ತರಿ ಪ್ರಯೋಗ ಮಾಡಿಕೊಂಡವರಲ್ಲ. ಆದರೂ ಬಾಲಿವುಡ್​ನಲ್ಲಿ ಹಲವು ವರ್ಷಗಳ ಕಾಲ ಆಳಿದವರು. ಆರು ಫಿಲ್ಮ್‌ಫೇರ್ ಪ್ರಶಸ್ತಿಗಳಂತಹ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹಲವಾರು ಹಿಟ್​ ಚಿತ್ರಗಳನ್ನು ನೀಡಿದವರು. ತೆಳ್ಳಗೆ, ಬೆಳ್ಳಗೆ ಇದ್ದ ನಟಿಯರನ್ನೂ ಹಿಂದಿಕ್ಕಿ ಬಾಲಿವುಡ್​ನಲ್ಲಿ ಹಲವು ವರ್ಷಗಳ ಕಾಲ ನೆಲೆಯೂರಿ ನಿಂತಿದ್ದಾರೆ. ಕೊನೆಗೆ ದಿಢೀರ್​ ಎಂದು ಬೆಳ್ಳಗಾಗುವ ಮೂಲಕ ಅಚ್ಚರಿ ಮೂಡಿಸಿದ್ದರೂ, ತಾವು ಯಾವುದೇ ಶಸ್ತ್ರಚಿಕಿತ್ಸೆ ಮೊರೆ ಹೋಗಿಲ್ಲ ಎಂದು ಜನರಿಗೆ ತಿಳಿಸುತ್ತಲೇ ಬೆಳ್ಳಗಾಗಿದ್ದು ಹೇಗೆ ಎನ್ನುವ ರಹಸ್ಯವನ್ನೂ ಬಿಚ್ಚಿಟ್ಟಿದ್ದರು. 1974ರಲ್ಲಿ ಹುಟ್ಟಿರೋ ಕಾಜೋಲ್​ ಅವರಿಗೆ ಈಗ 50 ವರ್ಷ ವಯಸ್ಸು. 

Tap to resize

Latest Videos

ಕೃಷ್ಣ ಸುಂದರಿ ಕಾಜೋಲ್​, ಶಸ್ತ್ರಚಿಕಿತ್ಸೆ ಇಲ್ಲದೇ ಬೆಳ್ಳಗಾಗಿದ್ದು ಹೇಗೆ? ಬಿಳುಪಿನ ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ಬ್ಯೂಟಿ

ಆದರೆ, ಈಗ ಇವರ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ನಟಿಯ ಹಿಂಭಾಗದ ಗಾತ್ರ ವಿಪರೀತ ದೊಡ್ಡದಾಗಿ ಕಾಣಿಸಲಾಗಿದೆ. ಇದು ಯಾರಾದರೂ ಬೇಕಂತಲೇ ಮಾಡಿರುವ ಕೃತ್ಯವೋ ಅಥವಾ ನಿಜವಾಗಿಯೂ ನಟಿಗೆ ಹೀಗೆ ಆಗಿದೆಯೋ ಎನ್ನುವ ಗೊಂದಲದಲ್ಲಿದ್ದಾರೆ ಅಭಿಮಾನಿಗಳು. ಏಕಾಏಕಿ ಈ ರೀತಿಯಾಗಿ ಹಿಂಭಾಗ ದೊಡ್ಡದಾಗಿ ಕಾಣಿಸಿಕೊಳ್ಳಲು ಏನಿರಬಹುದು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಕೆಲವು ನಟಿಯರು ತಮ್ಮ ಹಿಂಭಾಗವನ್ನು ಹೀಗೆ ಕಾಣಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರವಾಗಿ ಇರಿಸಿಕೊಳ್ಳಲು ಇಂಥದ್ದೆಲ್ಲಾ ಸರ್ಕಸ್​ ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಆದರೆ ಕಾಜೋಲ್​ ಇಂಥ ನಟಿಯರ ಸಾಲಿಗೆ ಸೇರಿದವರಲ್ಲ, ಅದೂ ಇಷ್ಟೆಲ್ಲಾ ಸಕ್ಸಸ್​ ಪಡೆದ ಬಳಿಕ ಈ ರೀತಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದಿರುವ ನೆಟ್ಟಿಗರು, ನಟಿಗೆ ಏನಾದರೂ ಅನಾರೋಗ್ಯ ಸಮಸ್ಯೆ ಬಾಧಿಸಿದೆಯೇ ಎಂಬ ಆತಂಕ ಕಾಡುತ್ತಿದೆ. ಕೆಲವರು ಇದು ಎಐನಲ್ಲಿ ಮಾಡಿರಬಹುದು, ನಟಿ ಹೀಗೆ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. 

ಅಂದ ಹಾಗೆ ಕಾಜೋಲ್ ಬಣ್ಣದ ಜರ್ನಿ ಆರಂಭಿಸುವ ಮುನ್ನವೇ ಸಾಕಷ್ಟು ಶರತುಗಳನ್ನು ಹಾಕಿಕೊಂಡಿದ್ದರು. ಅದರಲ್ಲೂ ಕಿಸ್ಸಿಂಗ್ ಲಿಪ್‌ ಲಾಕ್ ಅಂದ್ರೆ ದೂರ ಎಂದಿದ್ದವರು. ಆದರೆ ಈಚೆಗಷ್ಟೇ ನಟಿ,   ದೇವಗನ್ ವೆಬ್ ಸೀರಿಸ್‌ಗಾಗಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕಾಜೋಲ್ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ತಮ್ಮ 29 ವರ್ಷಗಳ ನಿಯಮವನ್ನು ಬ್ರೇಕ್ ಮಾಡಿದ್ದರು. ಸಿನಿಮಾರಂಗದ ಪ್ರಾರಂಭದ ದಿನಗಳಲ್ಲಿ ಕಾಜೋಲ್ ಕೆಲವು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರ ಬಳಿಕ ಕಾಜೋಲ್ ಕಿಸ್ಸಿಂಗ್ ಸೀನ್‌ಗಳನ್ನು ಮಾಡದೆ ಇರಲು ನಿರ್ಧರಿಸಿದ್ದರು. DDLJ ಸಿನಿಮಾ ಬಳಿಕ ಸೂಪರ್‌ಸ್ಟಾರ್ ಆದ ನಂತರ ಕಾಜೋಲ್ ಎಂದಿಗೂ ಆ ನಿಯಮವನ್ನು ಉಲ್ಲಂಘಿಸಿರಲಿಲ್ಲ.

ಬಿಗ್​ಬಾಸ್​ ಸ್ಪರ್ಧಿಗಳ ರೊಮಾನ್ಸ್​: ನಮ್ರತಾ ಗೌಡ- ಕಿಶನ್​ ಪ್ರೇಮ ಕಾವ್ಯಕ್ಕೆ ಉಫ್​ ಅಂತಿರೋ ಫ್ಯಾನ್ಸ್​

 

 
 
 
 
 
 
 
 
 
 
 
 
 
 
 

A post shared by wakawwpost (@wakawwpost)

click me!