ಕೆಲವರು ಟೀ ಕುಡಿಯುತ್ತಿದ್ದರೆ ನಾನು ಆಡಿಷನ್ ನೀಡುತ್ತಿದ್ದೆ; ಕಾರ್ತಿಕ್ ಆರ್ಯನ್ ಒಂಟಿತನ ನೀಗಿಸುತ್ತಿರುವುದು ಈ ವ್ಯಕ್ತಿಗಳು!

By Vaishnavi Chandrashekar  |  First Published Jul 22, 2024, 11:17 AM IST

ಆಡಿಷನ್‌ ದಿನಗಳನ್ನು ನೆನೆದು ಭಾವುಕರಾದ ಕಾರ್ತಿಕ್ ಆರ್ಯನ್. ಯಾರು ಟೀ ಕುಡಿಯುತ್ತಿದ್ದರು ಯಾರು ಆಡಿಷನ್ ನೀಡುತ್ತಿದ್ದರು? 


ಬಾಲಿವುಡ್ ಸಿಂಪಲ್ ಮ್ಯಾನ್ ಕಾರ್ತಿಕ್ ಆರ್ಯನ್ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಣ್ಣದ ಪ್ರಪಂಚದಲ್ಲಿ ಮಿಂಚುತ್ತಿರುವ ಪ್ರತಿಭೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗರು ಎದುರಿಸಿರುವ ಸವಾಲುಗಳನ್ನು ನೋಡಿ ಈಗ  ನೇಮ್, ಫೇಮ್ ಆಂಡ್ ಮನಿ ಗಳಿಸಿರುವ ನಟ. ಸಾಮಾನ್ಯವಾಗಿ ಗಂಡಸರು ತಮ್ಮ ಭಾವನೆಗಳನ್ನು ಎಕ್ಸ್‌ಪ್ರೆಸ್‌ ಮಾಡಿಕೊಳ್ಳುವುದು ತುಂಬಾನೇ ಕಡಿಮೆ ಆದರೆ ಒಮ್ಮೆ ಹಂಚಿಕೊಂಡರೆ ಮನಸ್ಸಿನಲ್ಲಿರುವ ಸಂಪೂರ್ಣ ನೋವನ್ನು ಹೇಳಿಕೊಳ್ಳುತ್ತಾರೆ. ತಮಗೆ ಕಾಡುತ್ತಿರುವ ಒಂಟಿತನದ ಬಗ್ಗೆ ಕಾರ್ತಿಕ್ ಆರ್ಯನ್ ಹಂಚಿಕೊಂಡಿದ್ದಾರೆ.

ಬಿ ಏ ಮ್ಯಾನ್ ಕಾರ್ಯಕ್ರಮದ ಎರಡನೇ ಎಪಿಸೋಡ್‌ನಲ್ಲಿ ನಟ ಕಾರ್ತಿಕ್ ಆರ್ಯನ್‌ ತಮ್ಮ ಆಡಿಷನ್‌ ದಿನಗಳು, ರಿಜೆಕ್ಷನ್‌ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಸಿನಿಮಾದಲ್ಲಿ ಅವಕಾಶ ಹುಡುಕಿಕೊಂಡು ಆಡಿಷನ್ ಆರಂಭಿಸಿದ್ದಾಗ ತುಂಬಾ ಕಷ್ಟಗಳನ್ನು ಎದುರಿಸಿದ್ದಾರೆ ' ತುಂಬಾ ಒರಟಾಗಿದ್ದರು ನಾನು ಒಬ್ಬ ಇದ್ದೀನಿ ಅನ್ನೋದನ್ನು ಮರೆತು ವರ್ತಿಸುತ್ತಿದ್ದರು. ಆ ಸಮದಯಲ್ಲಿ ನಮ್ಮ ಬೆಲೆ ಏನು ಎಂಬುವುದು ಚೆನ್ನಾಗಿ ಅರ್ಥವಾಗುತ್ತದೆ' ಎಂದು ಕಾರ್ತಿಕ್ ಮಾತನಾಡಿದ್ದಾರೆ.

Tap to resize

Latest Videos

ಓಡೋಡಿ ಬಂದು ನಟ ಗೋವಿಂದ್‌ನ ಅಪ್ಪಿಕೊಂಡ ಸಲ್ಮಾನ್ ಖಾನ್; ಸಲ್ಲು ಹೊಟ್ಟೆ ನೋಡಿ ನೆಟ್ಟಿಗರು ಶಾಕ್!

'ನನಗೆ ಕಾಡುವ ಒಂಟಿತನವನ್ನು ನನ್ನ ಅಭಿಮಾನಿಗಳು ನೀಗಿಸುತ್ತಾರೆ.ನಾನು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಆದ್ರೆ ಕೆಲವರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಅಲ್ಲಿ ಅವರು ಟೀ ಕುಡಿಯುತ್ತಿದ್ದರೆ, ನಾನು ಆಡಿಷನ್ ನೀಡುತ್ತಿರುತ್ತೇನೆ. ಆ ಪದ್ಧತಿ ಇನ್ನು ನಮ್ಮೊಂದಿಗೆ ಇದೆ.' ಎಂದು ಕಷ್ಟದ ದಿನಗಳ ಬಗ್ಗೆ ಕಾರ್ತಿಕ್ ಆರ್ಯನ್ ಹೇಳಿದ್ದಾರೆ. ಸ್ಕೂಲ್‌ನಲ್ಲಿ ಇದ್ದಾಗ ಮೊದಲ ಪ್ರೀತಿ ಹೇಳಿಕೊಳ್ಳದೆ ಹಾರ್ಟ್‌ ಬ್ರೇಕ್‌ ಅನುಭಿಸಿದ ಕಾರ್ತಿಕ್, ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರೆ ನಿನ್ನೊಟ್ಟಿಗೆ ಇರುವುದಿಲ್ಲ ಎಂದು ಕಾಲೇಜ್‌ ಗರ್ಲ್‌ಫ್ರೆಂಡ್ ಬಿಟ್ಟು ಹೋದಳಂತೆ. 

click me!