ಓಡೋಡಿ ಬಂದು ನಟ ಗೋವಿಂದ್‌ನ ಅಪ್ಪಿಕೊಂಡ ಸಲ್ಮಾನ್ ಖಾನ್; ಸಲ್ಲು ಹೊಟ್ಟೆ ನೋಡಿ ನೆಟ್ಟಿಗರು ಶಾಕ್!

By Vaishnavi Chandrashekar  |  First Published Jul 22, 2024, 10:37 AM IST

ಒಂದೇ ವೇದಿಕೆ ಮೇಲೆ ಗೋವಿಂದ್- ಸಲ್ಮಾನ್ ಖಾನ್‌. ಸಲ್ಲು ತೂಕದ ಮೇಲೆ ನೆಟ್ಟಿಗರ ಕಣ್ಣು..... 


ಬಾಲಿವುಡ್‌ ಚಿತ್ರರಂಗದ ಎವರ್‌ಗ್ರೀನ್ ಯಂಗ್ ಹೀರೋ ಗೋವಿಂದ್ ಮತ್ತು ಕಿಂಗ್ ಸಲ್ಮಾನ್ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ಮುಂಬೈನಲ್ಲಿ ಧರ್ಮವೀರ್ 2 ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಪಾರ್ಟನರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಸಲ್ಲು ಆಂಡ್ ಗೋವಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು ಸಿನಿಮಾ ರಸಿಕರಿಗೆ ಖುಷಿ ಕೊಟ್ಟಿದೆ ಅಲ್ಲದೆ ಪಾರ್ಟನರ್ 2 ಸಿನಿಮಾ ಮಾಡಬೇಕು ಎಂದು ಈ ವೈರಲ್ ವಿಡಿಯೋ ನೋಡಿದ ಮೇಲೆ ಡಿಮ್ಯಾಂಡ್ ಮಾಡಲು ಶುರು ಮಾಡಿದ್ದಾರೆ. 

ಹೌದು!  ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಟಾರ್ ನಟರು ವೇದಿಕೆ ಮೇಲೆ ನಿಂತಿರುವಾಗ ಸಲ್ಮಾನ್ ಖಾನ್ ಎಂಟ್ರಿ ಕೊಟ್ಟು ಪ್ರತಿಯೊಬ್ಬರನ್ನು ಮಾತನಾಡಿಸುತ್ತಾರೆ. ಆಗ ಹಳೆ ಸ್ನೇಹಿತ ಗೋವಿಂದ್‌ರನ್ನು ನೋಡಿದ ಖುಷಿಯಲ್ಲಿ ಓಡೋಡಿ ಬಂದು ತಬ್ಬಿಕೊಳ್ಳುತ್ತಾರೆ. ಅಪ್ಪಿಕೊಂಡ ನಂತರ ವೇದಿಕೆ ಮಧ್ಯ ಭಾಗಕ್ಕೆ ನಡೆದುಕೊಂಡು ಬರುವಾಗ ಸಲ್ಮಾನ್ ಖಾನ್ ಬಾಡಿ ಶೇಪ್‌ ಸ್ಪಷ್ಟವಾಗಿ ಕಾಣಿಸುತ್ತದೆ. ಅಯ್ಯೋ...ಸಲ್ಮಾನ್ ಖಾನ್ ಹೊಟ್ಟೆ ಕಾಣಿಸುತ್ತಿದ್ದ ತುಂಬಾನೇ ದಪ್ಪಗಾಗಿದ್ದಾರೆ ಯಾವ ಸಿನಿಮಾನೂ ಇಲ್ವಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

ಪಾರ್ಲರ್‌ನಲ್ಲಿ ಹೇರ್‌ಕಟ್‌ ಮಾಡ್ಕೊಂಡು ಜೀವನ ನಡೆಸುತ್ತಿರುವ ಖ್ಯಾತ ನಟಿ; 'ಚಕ್‌ ದೇ ಇಂಡಿಯಾ' ಚಿತ್ರದಲ್ಲಿ ಈಕೆಯದ್ದೇ ಅಬ್ಬರ!

ಸದ್ಯ ಶಿಕಂದರ್ ಸಿನಿಮಾ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಏಆರ್‌ ಮುರುಗಾದಾಸ್‌ ನಿರ್ದೇಶನ ಮಾಡುತ್ತಿದ್ದು ಮುಂದಿನ ವರ್ಷ ಈದ್‌ ದಿನ ಬಿಡುಗಡೆ ಮಾಡುವ ಆಲೋಚನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ಸತ್ಯರಾಜ್, ಪ್ರತೀಕ್ ಬಾಬರ್ ಸೇರಿಂದಂತೆ ದೊಡ್ಡ ತಾರ ಬಳಗವಿದೆ. ಅಲ್ಲಿಂದ ಇಲ್ಲಿಂದ ಕೇಳಿ ಬಂದಿರುವ ಸುದ್ದಿ ಪ್ರಕಾರ ಕರಣ್ ಜೋಹಾರ್ ನಿರ್ದೇಶನ ಮಾಡುತ್ತಿರುವ ದಿ ಬುಲ್‌ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಕೊನೆಯ ಬಾರಿ ಕತ್ರಿನಾ ಕೈಫ್‌ ಜೊತೆ ಟೈಗರ್ 3 ಸಿನಿಮಾದಲ್ಲಿ ಸಲ್ಲು ನಟಿಸಿ ಮತ್ತೆ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಕಿರೀಟ್ ಮುಡಿಗೇರಿಸಿಕೊಂಡರು. 

 

click me!